ಖಾತೆ ಕ್ಯಾತೆ ಮಧ್ಯೆ ಮೊದಲ ಸಲ ಸಚಿವರಾದವರಿಗೆ ಪ್ರಮುಖ ಖಾತೆ ಹುಡುಕಿಕೊಂಡು ಬಂದವು

First Published | Aug 15, 2021, 5:43 PM IST

ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಒಟ್ಟು 29 ನೂತನ ಸಚಿವರು ಸೇರ್ಪಡೆಯಾಗಿದ್ದಾರೆ. ಈಪೈಕಿ ಇದೇ ಮೊದಲ ಬಾರಿಗೆ 6 ಜನ ಸಚಿವರಾಗಿದ್ದಾರೆ. ವಿಶೇಷ ಅಂದ್ರೆ ಮೊದಲ ಸಲ ಸಚಿವರಾಗಿರುವ ಈ ಆರು ಜನರಿಗೆ ಮಹತ್ವದ ಖಾತೆಗಳೇ ಲಭಿಸಿವೆ. ಸರ್ಕಾರ ಮತ್ತು ಪಕ್ಷದ ವರ್ಚಸ್ಸು ಹೆಚ್ಚಿಸುವಂತಹ ಖಾತೆಗಳನ್ನು ಸಂಘ ಪರಿವಾರ ಮೂಲದವರಿಗೆ ವಹಿಸಬೇಕು ಎಂಬ ಅಭಿಪ್ರಾಯ ಇತ್ತು. ಅದರಂತೆಯೇ ಫಸ್ಟ್ ಟೈಮ್‌ ಮಂತ್ರಿಯಾದ ಆರು ಸಚಿವರಿಗೆ ಪ್ರಮುಖ ಖಾತೆಗಳೇ ಸಿಕ್ಕಿವೆ. ಆ ಖಾತೆ ಕೊಟ್ಟಿಲ್ಲ. ಈ ಖಾತೆ ಸಿಕ್ಕಿಲ್ಲ ಎನ್ನುವ ಅಸಮಧಾನದ ಮಧ್ಯೆ ಸಚಿವರಾದ್ರೆ ಸಾಕಪ್ಪ ಅಂತಿದ್ದ ಈ ಹೊಸ ಆರು ಸಚಿವರಿಗೆ ಪ್ರಮುಖ ಖಾತೆಗಳು ಹುಡುಕಿಕೊಂಡು ಬಂದಿವೆ. 

halappa-achar-ready-to-debut-minister

1. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್
ಯಲಬುರ್ಗಾ ಕ್ಷೇತ್ರದ ಶಾಸಕ ಆಚಾರ್ ಹಾಲಪ್ಪ ಬಸಪ್ಪ ಅವರು ಹೊಸಬರಾಗಿ ಸಿಎಂ ಬೊಮ್ಮಾಯಿ ಸಂಪುಟವನ್ನು ಸೇರಿದ್ದು, ಇವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಿಕ್ಕಿದೆ. ಇನ್ನು 70 ವರ್ಷದ ಹಾಲಪ್ಪ ಆಚಾರ್ ಅವರು  2018ರ ವಿಧಾನಸಭಾ ಚುನಾವಣೆಯಲ್ಲಿ ಯಲಬುರ್ಗಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಚುನಾಯಿತರಾದವರು. ಅವರು ತಮ್ಮ ಸಮೀಪದ ಸ್ಪರ್ಧಿ ಕಾಂಗ್ರೆಸ್​​ ಪಕ್ಷದ ಬಸವರಾಜ ರಾಯರೆಡ್ಡಿ ಅವರಿಗಿಂತ 13,318 ರಷ್ಟು ಅಧಿಕ ಮತ ಗಳಿಸಿ, ಗೆಲುವು ಸಾಧಿಸಿದ್ದರು. ಹಾಲಪ್ಪ ಆಚಾರ್ ಒಟ್ಟು 79,072 ಮತ ಗಳಿಸಿದ್ದರು. ಅಷ್ಟೇ ಅಲ್ಲದೇ ಇವರು  ಸಂಘ ಪರಿವಾರ ಮೂಲದವರಾಗಿದ್ದಾರೆ.

Sunil Kumar

2. ಸುನೀಲ್ ಕುಮಾರ್: ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರು.
ಶಾಲಾ ದಿನಗಳಿಂದಲೇ ಆರೆಸ್ಸೆಸ್ ಹಾಗೂ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರಾಗಿ ವಿ. ಸುನೀಲ್ ಕುಮಾರ್  ಅವರು ಸಹ ಇದೇ ಮೊದಲ ಬಾರಿಗೆ ಸಚಿವರಾಗಿದ್ದು, ಮೊದಲ ಸಲವೇ ಇಂಧನ ಅಂತಃ ಬಹುದೊಡ್ಡ ಖಾತೆ ಸಿಕ್ಕಿರುವುದು ಅವರ ಲಕ್ಕಿ. ಯಾಕಂದ್ರೆ ಬಿಎಸ್‌ವೈ ಈ ಹಿಂದೆ ಈ ಖಾತೆಯನ್ನು ಯಾರಿಗೂ ಹಂಚಿಕೆ ಮಾಡದೇ ತಮ್ಮ ಬಳಿಯೇ ಇಟ್ಟುಕೊಂಡಿದ್ದರು.  ಶಾಲಾ ದಿನಗಳಿಂದಲೇ ಆರೆಸ್ಸೆಸ್ ಹಾಗೂ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರಾಗಿ ವಿ. ಸುನೀಲ್ ಕುಮಾರ್ ಗುರುತಿಸಿಕೊಂಡಿದ್ದಾರೆ. ಕಾರ್ಕಳದ ವಾಸುದೇವ- ಪ್ರಮೋದ ದಂಪತಿಯ ಪುತ್ರ ಸುನಿಲ್ ಅವರು ಇವರು ಬಿಲ್ಲವ ಸಮುದಾಯಕ್ಕೆ ಸೇರಿದ್ದಾರೆ.

* ಚಿಕ್ಕಮಗಳೂರಿನ ಐಡಿಎಸ್ಜಿ ಹಾಗೂ ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಬಿ.ಎ. ಪದವಿ. * ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜು ಯೂನಿಯನ್ ಮುಖ್ಯಸ್ಥರಾಗಿದ್ದರು. ಎಬಿವಿಪಿಯ ಮುಂದಾಳತ್ವ ವಹಿಸಿ ಜೈಲು ವಾಸವನ್ನೂ ಅನುಭವಿಸಿದ್ದಾರೆ. 
* 1997ರಲ್ಲಿ ಬಜರಂಗ ದಳದ ಜಿಲ್ಲಾ ಸಂಚಾಲಕ, ವಿಭಾಗ ಸಂಚಾಲಕ ಹಾಗೂ ರಾಜ್ಯ ಸಂಚಾಲಕನಾಗಿ ದತ್ತಪೀಠ ಹೋರಾಟದ ಮುಂಚೂಣಿಯಲ್ಲಿದ್ದರು.
 * 2004ರ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 
* 2008ರ ಚುನಾವಣೆಯಲ್ಲಿ ಎಚ್. ಗೋಪಾಲ ಭಂಡಾರಿ ವಿರುದ್ಧ ಸೋಲನುಭವಿಸಿದರು.
 * ಶಾಸಕರಾಗಿದ್ದ ಸಂದರ್ಭದಲ್ಲೇ ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದರು. ನಂತರ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾದ ಕಾರ್ಯದರ್ಶಿದರು. 
* ಪ್ರಸ್ತುತ ರಾಜ್ಯ ಬಿಜೆಪಿ ಯುವಮೋರ್ಚಾದ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ.
* ಎಬಿವಿಪಿ, ದತ್ತಮಾಲೆ ಅಭಿಯಾನ, ಭಜರಂಗದಳ ಸಂಚಾಲಕ, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದರು.

Tap to resize

Shankar Patil Munenakoppa

3. ಶಂಕರ ಪಾಟೀಲ್‌ ಮುನೇನಕೊಪ್ಪ: 
ಹುಬ್ಬಳ್ಳಿಯ ಸ್ಲಂ ಪ್ರದೇಶವಾದ ‘ಗಿರಣಿಚಾಳ್‌’ನಲ್ಲಿ ಆಡಿ ಬೆಳೆದ ಮತ್ತು ಓರ್ವ ಕಾರ್ಮಿಕನ ಪುತ್ರ ಶಂಕರ ಪಾಟೀಲ್‌ ಮುನೇನಕೊಪ್ಪ ಇಂದು ಕರ್ನಾಟಕ ಸರ್ಕಾರದ ಗೌರವಾನ್ವಿತ ಸಚಿವರು. ಬೊಮ್ಮಾಯಿ ಅವರನ್ನು ರಾಜಕೀಯ ಗುರು ಎಂದುಕೊಂಡಿದ್ದ ಮುನೇನಕೊಪ್ಪ, 2008ರಲ್ಲಿ ಅವರೊಂದಿಗೆ ಬಿಜೆಪಿ ಸೇರಿದರು. ಅಂದಿನಿಂದ ಪಕ್ಷದ ತತ್ವ ಸಿದ್ಧಾಂತಕ್ಕೆ ತಕ್ಕಂತೆ ಪಕ್ಷನಿಷ್ಠರೆಂದು ಹೆಸರು ಪಡೆದರು. 2008ರಲ್ಲಿ ಬಿಜೆಪಿಯಿಂದ ನವಲಗುಂದ ಕ್ಷೇತ್ರದಲ್ಲಿ ಕಣಕ್ಕಿಳಿದ ಮುನೇನಕೊಪ್ಪ ಮೊದಲ ಪ್ರಯತ್ನದಲ್ಲೇ ವಿಧಾನಸಭೆ ಪ್ರವೇಶಿಸಿದರು. ಇದೇ ಅವಧಿಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ ಅನುಭವ ಪಡೆದರು.

2013ರಲ್ಲೂ ಚುನಾವಣೆಗೆ ಸ್ಪರ್ಧಿಸಿದರಾದರೂ ಪಕ್ಷ ಇಬ್ಭಾಗವಾದ ಹಿನ್ನೆಲೆ ಕೆಲವೇ ಮತಗಳ ಅಂತರದಲ್ಲಿ ಸೋಲನ್ನೊಪ್ಪಿಕೊಳ್ಳಬೇಕಾಯಿತು. ಇವರ ಹೋರಾಟ, ಜನಪರ ಕಾಳಜಿಯಿಂದ ಮತ್ತೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಸಲೀಸಾಗಿ ಆಯ್ಕೆಯಾದರು. 2020ರಿಂದ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಅಧ್ಯಕ್ಷರಾಗಿ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವುದುಂಟು. ಇಂದು ತಮ್ಮ ರಾಜಕೀಯ ಗುರು, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರಿರುವುದು ನಿಜಕ್ಕೂ ವಿಸ್ಮಯ.

BC Nagesh

4. ​ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ  ಬಿ.ಸಿ.ನಾಗೇಶ್
ಬಹುಕಾಲ ಸಾರ್ವಜನಿಕ ಜೀವನದಲ್ಲಿದ್ದರೂ ನಾಯಕತ್ವದ ಪ್ರಭೆಯಲ್ಲಿ ಕೊಚ್ಚಿಹೋಗದ ರಾಜ್ಯದ ಕೆಲವೇ ರಾಜಕಾರಿಣಿಗಳಲ್ಲಿ ಬಿ.ಸಿ.ನಾಗೇಶ್​ ಸಹ ಒಬ್ಬರು. ತಿಪಟೂರು ಕ್ಷೇತ್ರದ ಶಾಸಕರಾದ ಬಿ.ಸಿ.ನಾಗೇಶ್​ ಜನರ ಕೈಗೆ ಸುಲಭವಾಗಿ ಸಿಗುವ ನಾಯಕ ಎಂದೇ ಹೆಸರು ಪಡೆದಿದ್ದಾರೆ. ಇದೀಗ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಬಿ.ಸಿ.ನಾಗೇಶ್ ಅವರಿಗೆ ಸಚಿವರಾಗುವ ಅವಕಾಶ ಸಿಕ್ಕಿದೆ.

ಜಾತಿ ರಾಜಕಾರಣವೇ ಮೇಲುಗೈ ಸಾಧಿಸಿರುವ ಈ ದಿನಮಾನದಲ್ಲಿ ಬ್ರಾಹ್ಮಣ ಜಾತಿಗೆ ಸೇರಿದ ನಾಗೇಶ್​ ಲಿಂಗಾಯತ ಮತ್ತು ಒಕ್ಕಲಿಗರೇ ಮುಂಚೂಣಿಯಲ್ಲಿರುವ ತಿಪಟೂರು ಕ್ಷೇತ್ರದಲ್ಲಿ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಸಂಘ ಪರಿವಾರದ ಹಿನ್ನೆಲೆಯ ನಾಗೇಶ್, ಈವರೆಗೆ ಯಾವುದೇ ವಿವಾದಕ್ಕೆ ಸಿಲುಕಿಲ್ಲ. ತುಮಕೂರು ಜಿಲ್ಲೆಯಲ್ಲಿ ಮಾಧುಸ್ವಾಮಿ ಹೊರತುಪಡಿಸಿದರೆ ಬಿಜೆಪಿಗೆ ಶಕ್ತಿ ತುಂಬಬಲ್ಲ ಸಾಮರ್ಥ್ಯವಿರುವ ಶಾಸಕ ಎಂದು ಗುರುತಿಸಿಕೊಂಡಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿ ಆರ್​ಎಸ್​ಎಸ್​ ಚಾಲಿತ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನಲ್ಲಿ ಸಕ್ರಿಯರಾಗಿದ್ದರು. ಈವರೆಗೆ ನಾಗೇಶ್ ಅವರ ಮೇಲೆ ಯಾವುದೇ ಅವ್ಯವಹಾರದ ಆರೋಪಗಳು, ಕ್ರಿಮಿನಲ್ ಅಪರಾಧ ಪ್ರಕರಣಗಳು ಇಲ್ಲ. 1984ರಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. 

Araga Jnanendra

 5.ಗೃಹ ಸಚಿವ ಆರಗ ಜ್ಞಾನೇಂದ್ರ
 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆಯಾಗಿದೆ. ನಿರೀಕ್ಷೆಯಂತೆ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರಗೆ ಸಂಪುಟದಲ್ಲಿ ಸ್ಥಾನ ಲಭಿಸಿದೆ. ಬಹು ವರ್ಷ ತಾಳ್ಮೆಯಿಂದ ಕಾದಿದ್ದ ಜ್ಞಾನೇಂದ್ರಗೆ ಸಚಿವರಾಗುವ ಯೋಗ ಬಂದಿದೆ. ಒಟ್ಟು 9 ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಜ್ಞಾನೇಂದ್ರ 4 ಬಾರಿ ಗೆಲುವು ಸಾಧಿಸಿದ್ದಾರೆ. ಸುಮಾರು 40 ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿದ್ದ ಆರಗ ಜ್ಞಾನೇಂದ್ರ ಮೊದಲ ಬಾರಿಗೆ ಗೃಹ ಖಾತೆ ಸಿಕ್ಕಿರುವುದು ಅಚ್ಚರಿ ಮೂಡಿಸಿದೆ.  ವಿದ್ಯಾರ್ಥಿ ದೆಸೆಯಿಂದಲೇ ಆರ್‌ಎಸ್‌ಎಸ್ ಸಂಪರ್ಕಕ್ಕೆ ಬಂದು ತಾಲೂಕು ಬೋರ್ಡ್ ಚುನಾವಣೆ ಮೂಲಕ ಆರಗ ಜ್ಞಾನೇಂದ್ರ ಸಕ್ರಿಯ ರಾಜಕಾರಣ ಆರಂಭಿಸಿದ್ದರು. 1983ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣಾ ಕಣಕ್ಕಿಳಿದರು. 2 ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡರು. 

1985, 1989ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧೆ ಮಾಡಿದರು. ಆದರೆ ಸೋತರು. ಈ ನಡುವೆ ಬಿಜೆಪಿ ಜಿಲ್ಲಾಧ್ಯಕ್ಷ ಜವಾಬ್ದಾರಿ ನೀಡಲಾಯಿತು. ಅದನ್ನು ಸಮರ್ಥವಾಗಿ ನಿಭಾಯಿಸಿದರು ಆರಗ ಜ್ಞಾನೇಂದ್ರ. 1994ರ ಚುನಾವಣೆಯಲ್ಲಿ ತೀರ್ಥಹಳ್ಳಿಯಲ್ಲಿ ಡಿ. ಬಿ. ಚಂದ್ರೇಗೌಡರನ್ನು ಸೋಲಿಸಿ ವಿಧಾನಸಭೆ ಆಯ್ಕೆಯಾದರು. ತೀರ್ಥಹಳ್ಳಿಯಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆಲ್ಲುವುದಿಲ್ಲ ಎಂಬುದನ್ನು ಸುಳ್ಳುಮಾಡಿ ಮೂರು ಬಾರಿ ಗೆದ್ದರು. 2013ರಲ್ಲಿ ಮತ್ತೆ ಸೋಲು ಕಂಡರು. 2018ರ ಚುನಾವಣೆಯಲ್ಲಿ ಮತ್ತೆ ಗೆಲುವು ಕಂಡರು.

Munirathna

6. ತೋಟಗಾರಿಕೆ ಸಚಿವ ಮುನಿರತ್ನ
ಎರಡು ಬಾರಿ ಕಾಂಗ್ರೆಸ್ ಒಂದು ಬಾರಿ ಬಿಜೆಪಿ ಒಟ್ಟು ಈ ಬಾರಿ ಬಾರಿಗೆ ಆರ್. ಆರ್. ನಗರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಮುನಿರತ್ನ ಅವರು ಇದೇ ಮೊದಲ ಬಾರಿಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಮುನಿರತ್ನ ಅವರು ಆರ್‌ಆರ್ ನಗರ ಬೈ ಎಲೆಕ್ಷನ್‌ನಲ್ಲಿ ಗೆಲುವು ಸಾಧಿಸಿದ್ದರು. ಆದ್ರೆ, ಬಿಎಸ್‌ ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿತ್ತು. ಆದ್ರೆ, ಇದೀಗ ಬೊಮ್ಮಾಯಿ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿದ್ದಾರೆ.

Latest Videos

click me!