ಟಗರು ಕಣ್ಣೋಟಕ್ಕೆ ಸಿಕ್ಕಿದ ಕಾಂಗ್ರೆಸ್‌ ನಾಯಕಿ ಲಾವಣ್ಯ ಬಲ್ಲಾಳ್‌, ಆರ್‌ಜೆಯಿಂದ ರಾಜಕೀಯದವರೆಗಿನ ಹಾದಿ..!

First Published | Jan 17, 2023, 5:27 PM IST

ನಾ ನಾಯಕಿ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಣ್ಣೋಟಕ್ಕೆ ಸಿಕ್ಕುವ ಮೂಲಕ ಕಾಂಗ್ರೆಸ್‌ ವಕ್ತಾರೆ ಲಾವಣ್ಯ ಬಲ್ಲಾಳ್‌ ಜೈನ್‌ ಫುಲ್‌ ಫೇಮಸ್‌ ಆಗಿದ್ದಾರೆ. ಮಂಗಳೂರು ಮೂಲದ ಲಾವಣ್ಯ ಬಲ್ಲಾಳ್‌ ರಾಜಕೀಯ ಕ್ಷೇತ್ರಕ್ಕೆ ಹೋಗುವ ಮುನ್ನ ಖಾಸಗಿ ರೇಡಿಯೋ ಚಾನೆಲ್‌ನಲ್ಲಿ ಆರ್‌ಜೆ ಆಗಿ ಕೆಲಸ ಮಾಡಿದ್ದರು.

ಸಿದ್ಧರಾಮಯ್ಯ ಅವರ ನೋಟಕ್ಕೆ ಸಿಲುಕಿ ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ಟ್ರೆಂಡಿಂಗ್‌ನಲ್ಲಿರುವ ಲಾವಣ್ಯ ಬಲ್ಲಾಳ್‌ ಜೈನ್‌, ರಾಜಕೀಯಕ್ಕೆ ಬರುವ ಮುನ್ನ ಖಾಸಗಿ ರೇಡಿಯೋ ಚಾನೆಲ್‌ನಲ್ಲಿ ಆರ್‌ಜೆ ಆಗಿ ಕೆಲಸ ಮಾಡಿದ್ದುರು. ಪ್ರಸ್ತುತ ಕಾಂಗ್ರೆಸ್‌ನ ಸೋಶಿಯಲ್‌ ಮೀಡಿಯಾ ಸಂಯೋಜಕಿ ಹಾಗೂ ವಕ್ತಾರೆಯ ಹುದ್ದೆಯಲ್ಲಿದ್ದಾರೆ.

ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೀ ಯಾತ್ರೆಯ ವೇಳೆಯಲ್ಲೂ ಅವರು ಭಾಗವಹಿಸಿದ್ದರು. ರಾಹುಲ್‌ ಗಾಂಧಿ ಜೊತೆ ಹೆಜ್ಜೆ ಹಾಕಿದ್ದನ್ನು ಅವರು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

Tap to resize

ಲಾವಣ್ಯ ಬಲ್ಲಾಳ್‌ ಜೈನ್‌, ದಕ್ಷಿಣ ಕನ್ನಡದ ಬಂಟ್ವಾಳ ಮೂಲದವರು. ಎಸ್‌ವಿಎಸ್‌ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದ ಲಾವಣ್ಯ ಬಲ್ಲಾಳ್‌, ಜೈನ ಸಮುದಾಯದವರು.

ಜೈನ ಸಮುದಾಯದಲ್ಲಿ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಅದರಂತೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದ ಲಾವಣ್ಯ ಬಲ್ಲಾಳ್‌, 13 ವರ್ಷಗಳ ಕಾಲ ಮಂಗಳೂರಿನಲ್ಲಿ ಆರ್‌ಜೆ ಆಗಿ ರೇಡಿಯೋ ಮಿರ್ಚಿಗೆ ಕೆಲಸ ಮಾಡಿದ್ದರು.

2018ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಆರ್‌ಜೆ ಕೆಲಸಕ್ಕೆ ರಾಜೀನಾಮೆ ನೀಡಿ, ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಸೇರುವ ನಿರ್ಧಾರ ಮಾಡಿದ್ದರು.

ಕನ್ನಡ, ಹಿಂದಿ, ತುಳು ಹಾಗೂ ಇಂಗ್ಲೀಷ್‌ ಅನ್ನು ಸ್ಪಷ್ಟವಾಗಿ ಮಾತನಾಡಬಲ್ಲ ಲಾವಣ್ಯ ಬಲ್ಲಾಳ್‌, ಬಿಸಿಎ ಪದವಿ ಪಡೆದಿದ್ದಾರೆ. 

ಆರ್‌ಜೆ ಆಗುವ ಮುನ್ನ ಬೆಂಗಳೂರಿನ ಎನ್‌ಐಐಟಿಯಲ್ಲಿ 11 ತಿಂಗಳು ಎಚ್‌ಆರ್‌ ಅಸಿಸ್ಟೆಂಟ್‌ ಆಗಿಯೂ ಇವರು ಕೆಲಸ ಮಾಡಿದ್ದರು ಎಂದು ಹೇಳಲಾಗಿದೆ.

Latest Videos

click me!