ಆರ್‌ಆರ್‌ ನಗರ ಉಪಚುನಾವಣೆ: ಜನಸೇವೆಯಲ್ಲೇ ನೋವು ಮರೆಯುತ್ತೇನೆ, ಕುಸುಮಾ

First Published Oct 28, 2020, 9:45 AM IST

ಬೆಂಗಳೂರು(ಅ.28): ನಾನೊಬ್ಬ ನೊಂದ ಮಹಿಳೆ, ಮತದಾರರು ಈ ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸಿದರೆ ಜನರ ಸೇವೆಯಲ್ಲೇ ನನ್ನ ಜೀವನದ ನೋವುಗಳನ್ನು ಮರೆಯುತ್ತೇನೆ. ನನ್ನಂತೆ ನೊಂದ ಮಹಿಳೆಯರು ಹಾಗೂ ಇತರೆ ವರ್ಗದ ಜನರ ಧ್ವನಿಯಾಗಿ ನಿಲ್ಲುತ್ತೇನೆ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಹೇಳಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಲವು ನಾಯರೊಂದಿಗೆ ಕ್ಷೇತ್ರದ ಹಲವೆಡೆ ತೆರೆದ ವಾಹನದಲ್ಲಿ ಭರ್ಜರಿ ಪ್ರಚಾರ ನಡೆಸಿದ ಕುಸುಮಾ ಕ್ಷೇತ್ರದ ಮತದಾರರಿಂದ ಮತಯಾಚನೆ ನಡೆಸಿದರು.
undefined
ಮೊದಲ ಚುನಾವಣೆಯಲ್ಲೇ ಕ್ಷೇತ್ರದಾದ್ಯಂತ ನನಗೆ ಉತ್ತಮ ಜನ ಬೆಂಬಲ ದೊರೆಯುತ್ತಿದೆ. ಇದಕ್ಕೆ ಹಾಲಿ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರ ನೇತೃತ್ವದ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನೀಡಿರುವ ಜನಪರ ಯೋಜನೆಗಳೇ ಕಾರಣ. ನನಗೆ ಸಿಗುತ್ತಿರುವ ಜನ-ಬೆಂಬಲ ನೋಡಿ ನನ್ನ ಜೀವನದ ನೋವುಗಳನ್ನು ಮರೆಯುತ್ತಿದ್ದೇನೆ. ಈ ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ನನಗೆ ಸಂಪೂರ್ಣ ಆಶೀರ್ವಾದ ಮಾಡಿ ಗೆಲ್ಲಿಸಿದರೆ ಜನಸೇವೆಯಲ್ಲೇ ನನ್ನ ನೋವು ಮರೆಯುತ್ತೇನೆ ಎಂದ ಕುಸುಮಾ
undefined
ನಾನು ಬೇರೆ ಪಕ್ಷದ ಯಾವ ನಾಯಕರನ್ನೂ ಸಂಪರ್ಕಿಸಿಲ್ಲ. ಆದರೆ, ನನ್ನಂತೆಯೇ ನೊಂದ ಮಹಿಳೆಯರು, ಕಾರ್ಯಕರ್ತರು ನನಗೆ ಬೆಂಬಲ ನೀಡುತ್ತಿದ್ದಾರೆ. ಸೋಮವಾರ ವಿಜಯ ದಶಮಿ ದಿನ ಇಡೀ ರಾಜ್ಯ ಹಾಗೂ ಕ್ಷೇತ್ರದ ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಉರುಳು ಸೇವೆ ಮಾಡಿದ್ದೇನೆ. ಆ ತಾಯಿ ರಾಜರಾಜೇಶ್ವರಿ ನಂಬಿದವರನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಬಿಜೆಪಿಯವರು ಕ್ಷೇತ್ರದಲ್ಲಿ ಬೆಂಕಿ ಹಚ್ಚುವ ಮಾತುಗಳನ್ನಾಡುತ್ತಿದ್ದಾರೆ. ನಾವು ಕಾಂಗ್ರೆಸ್ಸಿಗರು ಆ ಬೆಂಕಿ ಹಾರಿಸಿ ದೀಪ ಹಚ್ಚುವ ಕೆಲಸ ಮಾಡುತ್ತೇವೆ. ಇದಕ್ಕಾಗಿ ಕ್ಷೇತ್ರದ ಮತದಾರರು ತಮ್ಮ ಸೇವೆಗೆ ಒಂದೇ ಒಂದು ಅವಕಾಶ ಮಾಡಿಕೊಟ್ಟು ನನ್ನನ್ನು ಗೆಲ್ಲಿಸುವುದರೊಂದಿಗೆ ನಮ್ಮ ಪಕ್ಷಕ್ಕೂ ಶಕ್ತಿ ತುಂಬಬೇಕೆಂದು ಮನವಿ ಮಾಡಿದ ಕುಸುಮಾ
undefined
ನನ್ನನ್ನು ನಿಮ್ಮ ಮನೆ ಮಗಳೆಂದು ಭಾವಿಸಿ ಇದೊಂದು ಬಾರಿ ಗೆಲ್ಲಿಸಿ, ಕ್ಷೇತ್ರದ ಅಭಿವೃದ್ಧಿ ಹಾಗೂ ಜನ ಸೇವೆಗೆ ಅವಕಾಶ ಮಾಡಿಕೊಡಿ. ನಾನು ಯಾವತ್ತೂ ಹಣ, ಅಧಿಕಾರದಾಸೆಗೆ ಜನರು ನೀಡಿದ ಆಶೀರ್ವಾದ, ಪ್ರೀತಿ, ವಿಶ್ವಾಸವನ್ನು ಮಾರಿಕೊಳ್ಳುವವಳಲ್ಲ. ಕಷ್ಟ, ಸುಖ ಯಾವುದೇ ಇರಲಿ ಸದಾ ಜನರೊಂದಿಗೆ ಇದ್ದು, ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತೇನೆ. ಯಾವುದೇ ಜಾತಿ-ಮತ ನೋಡದೆ ಸರ್ವ ಜನರ ಏಳಿಗೆಗೆ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಮನವಿ ಮಾಡಿದರು.
undefined
click me!