
ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ಶ್ರೀ ಮನೋಜ್ ಕುಮಾರ್ ಮೀನಾ ಅವರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಕ್ಕೂರಿನ ಮತಗಟ್ಟೆಯಲ್ಲಿ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ ಮತ ಚಲಾವಣೆ ಮಾಡಿದ್ದಾರೆ. ನಗರದ ಎಸ್ ಎಸ್ ಹೈಸ್ಕೂಲು ಆವರಣದಲ್ಲಿರುವ ಮತಗಟ್ಟೆ 61 ರಲ್ಲಿ ಮತ ಚಲಾಯಿಸಿದ್ದು ಪತ್ನಿ ಶೈಲಜಾ ಪುತ್ರರಾದ ರಾಮನಗೌಡ, ಆದರ್ಶ ಹಾಗೂ ಬೆಂಬಲಿಗರೊಂದಿಗೆ ಆಗಮಿಸಿ ಸರದಿಯಲ್ಲಿ ನಿಂತು ಮತ ಚಲಾವಣೆ ಮಾಡಿದರು.
ಸೇಡಂ ಶಾಸಕ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ ತೆಲಕೂರ ಅವರು ಸೇಡಂ ಪಟ್ಟಣದ ವಿದ್ಯಾನಗರದ ನಂ 2 ಶಾಲೆಯಲ್ಲಿ ಸರತಿಯ ಸಾಲಿನಲ್ಲಿ ನಿಂತು ತಮ್ಮ ಮತವನ್ನು ಚಲಾಯಿಸಿದ ನಂತರ ಪ್ರತಿಕ್ರಿಯೆ ನೀಡಿದ ಅವರು ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದರು.
ಕೇಂದ್ರ ಸಚಿವ ಭಗವಂತ ಖೂಬಾ ಅವರು ಮತದಾನ ಔರಾದ್ ಪಟ್ಟಣದ ಹಳೆ ಬಿಇಒ ಕಚೇರಿಯ ಬೂತ್ ನಂ. 84 ರಲ್ಲಿ ಪತ್ನಿಯ ಜೊತೆಗೆ ತೆರಳಿ ಮತದಾನ ಮಾಡಿದರು. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು.
ಕೆಆರ್‌ಪಿಪಿ ಮುಖ್ಯಸ್ಥ ಗಾಲಿ ಜನಾರ್ದನ ರೆಡ್ಡಿ ಅವರು ಗಂಗಾವತಿಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಬೆಂಬಲಿಗರು ಜೊತೆಯಲ್ಲಿದ್ದರು.
ಹೊಸಕೋಟೆ ಸರ್ಕಾರಿ ಶಾಲೆಯಲ್ಲಿ ಬಿಜೆಪಿ ಸಂಸದ ಬಿ ಎನ್ ಬಚ್ಚೇಗೌಡ ಮತದಾನ. ಪತ್ನಿ ಜೊತೆ ಬಂದು ಮತದಾನ ಮಾಡಿದ ಬಚ್ಚೇಗೌಡ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ
ನನ್ನ ಅಧಿಕಾರ ಮತ್ತು ಕರ್ತವ್ಯ ಎರಡರ ಪ್ರಯೋಗವೂ ಆಯ್ತು. ದೇಶ ಹಿತಕ್ಕೆ ನನ್ನ ಒಂದು ಮತ. ಓಟು ಮಾಡಿದ ಬಳಿಕ ಟ್ವೀಟ್ ಮಾಡಿದ ಚಕ್ರವರ್ತಿ ಸೂಲಿಬೆಲೆ
ಚಾಮರಾಜನಗರದ ಪೇಟೆಪ್ರೈಮರಿ ಶಾಲೆಯ ಮತಗಟ್ಟೆ ಸಂಖ್ಯೆ 75 ಮತ ಚಲಾಯಿಸಿದ ವಿ.ಸೋಮಣ್ಣ. ಸದ್ದಿಲ್ಲದೆ ಬೆಂಗಳೂರಿನ ವಿಜಯನಗರದಿಂದ ಚಾಮರಾಜನಗರದ ಮತದಾರರ ಪಟ್ಟಿಗೆ ತಮ್ಮ ಹೆಸರು ವರ್ಗಾವಣೆ ಮಾಡಿಸಿಕೊಂಡಿರುವ ಸೋಮಣ್ಣ ಹಾಗು ಅವರ ಪತ್ನಿ ಶೈಲಾಜಾ ಈಗ ಚಾಮರಾಜನಗರ ವೋಟರ್ಸ್. ನಗರದ ಶಂಕರಪುರ ಬಡಾವಣೆ ಯ ಮತದಾರರ ಪಟ್ಟಿಯಲ್ಲಿ ಸೋಮಣ್ಣ ದಂಪತಿ ಹೆಸರು ಸೇರ್ಪಡೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಕುಟುಂಬ ಸಮೇತರಾಗಿ ಮತದಾನ ಮಾಡಿದರು. ಲಕ್ಷ್ಮಿ ಹೆಬ್ಬಾಳ್ಕರ್ ಸೊಸೆ ಡಾ. ಹಿತಾ ಹೆಬ್ಬಾಳ್ಕರ್ ತುಂಬು ಗರ್ಭಿಣಿ ಆಗಿದ್ದರೂ ತಮ್ಮ ಹಕ್ಕು ಚಲಾಯಿಸಿದರು.
ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರು ಚಾಮರಾಜನಗರದ ಹೆಗ್ಗವಾಡಿ ಗ್ರಾಮದಲ್ಲಿ ಮತದಾನ ಮಾಡಿದರು.
ಶಿಕಾರಿಪುರದಲ್ಲಿ ಕುಟುಂಬ ಸಮೇತರಾಗಿ ಬಿಎಸ್‌ವೈ ಮತದಾನ ಮಾಡಿದರು. ಪುತ್ರ ಬಿವೈ ವಿಜಯೇಂದ್ರ, ಬಿವೈ ರಾಘವೇಂದ್ರ ಮತ್ತು ಸೊಸೆಯಂದಿರು ಸಾಥ್ ನೀಡಿದರು.
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಸಿ.ಎಂ ಬೊಮ್ಮಾಯಿ ಕುಟುಂಬ ಸಮೇತ ಮತದಾನ ಮಾಡಿದರು. ಪುತ್ರ ಭರತ್ , ಪುತ್ರಿ ಅದಿತಿ ಜೊತೆಯಲ್ಲಿದ್ದರು. ಮತಗಟ್ಟೆ 102 ರಲ್ಲಿ ಮತದಾನ ಮಾಡಿದರು.
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಮಹೇಶ್ ತೆಂಗಿನಕಾಯಿ ಅವರು ಇಂದು ಬಸಮ್ಮ ಪಾಟೀಲ್ ಸರ್ಕಾರಿ ಶಾಲೆಯ ಭೂತ ನಂಬರ್ 133 ರಲ್ಲಿ ಇಂದು ಬೆಳಗ್ಗೆ ಮತದಾನವನ್ನು ಮಾಡಿದರು.
ಮೈಸೂರು ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಅವರು ತಮ್ಮ ಪತ್ನಿ ಸಮೇತ ಬಂದು ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ, ಹುಟ್ಟುರಾದ ಗುಂಗ್ರಾಲ್ ಛತ್ರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕುಟುಂಬ ಸಮೇತರಾಗಿ ಮತ ಚಲಾಯಿಸಿದ ಜಿ ಟಿ ದೇವೇಗೌಡ.
ವರುಣ ವಿಧಾನಸಭಾ ಚುನಾವಣೆ: ಸುತ್ತೂರು ದೇಶೀಕೇಂದ್ರ ಸ್ವಾಮಿಗಳಿಂದ ಮತ ಚಲಾವಣೆ.
ನಂಜನಗೂಡು ತಾಲ್ಲೂಕಿನ ಸತ್ತೂರು ಗ್ರಾಮದಲ್ಲಿ ಮತ ಚಲಾಯಿಸಿದ ಶ್ರೀಗಳು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ಮತದಾನ. ಕುಟುಂಬ ಸಮೇತವಾಗಿ ಬಂದು ಮತದಾನ ಮಾಡಿದ ಜೋಶಿ. ಹುಬ್ಬಳ್ಳಿ ಧಾರವಾಡ ಕೇಂದ್ರದ ಮತಗಟ್ಟೆ ಸಂಖ್ಯೆ 109ರಲ್ಲಿ ಮತದಾನ.
ಹುಬ್ಬಳ್ಳಿಯ ಕೇಶ್ವಾಪೂರದ ಎಸ್‌ಬಿಐ ಶಾಲೆ ಮತಗಟ್ಟೆ ಸಂಖ್ಯೆ 125 ರಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತದಾನ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಚೇತ್ರದ ಕೈ ಅಭ್ಯರ್ಥಿ ಜಗದೀಶ್ ಶೆಟ್ಟರ್. ಕುಟುಂಬ ಸಮೇತರಾಗಿ ಮತ ಚಲಾವಣೆ ಮಾಡಿದ ಶೆಟ್ಟರ್.
ಪುತ್ತೂರಿನಲ್ಲಿ ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಮತದಾನ ಮಾಡಿದರು. ಈ ಬಾರಿ ಚುನಾವಣೆಯಲ್ಲಿ ದ.ಕ ಜಿಲ್ಲೆಯ ಕುತೂಹಲದ ಕಣವಾದ ಪುತ್ತೂರು ಕ್ಷೇತ್ರ.
ಸಾಣೇಹಳ್ಳಿ ಮತಗಟ್ಟೆಯಲ್ಲಿ ತರಳಬಾಳು ಮಠದ ಡಾ.ಪಂಡಿತಾರಾಧ್ಶಶ್ರೀ ಮತದಾನ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಗ್ರಾಮ. ಸಾಣೇಹಳ್ಳಿಯ ಮತಗಟ್ಟೆ ಸಂಖ್ಯೆ 125ರಲ್ಲಿ ಮತದಾನ.
ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮಯ್ಯ ಮತ ಚಲಾವಣೆ. ಮತಗಟ್ಟೆ ಸಂಖ್ಯೆ 86ರಲ್ಲಿ ಮತ ಚಲಾವಣೆ. ಪುತ್ರ ಯತೀಂದ್ರ, ಸೊಸೆ ಸ್ಮಿತಾ ಜೊತೆ ಬಂದ ಸಿದ್ದರಾಮಯ್ಯ. ಗ್ರಾಮದ ಮನೆಯಲ್ಲಿ ವಿಶ್ರಾಂತಿ ಪಡೆದು, ನಂತದ ಸಿದ್ದರಾಮೇಶ್ವರ ದರ್ಶನ ಪಡೆದ ಸಿದ್ದು.