ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿ ಜನ್ಮದಿನದ ಅಂಗವಾಗಿ, ಕಾಂಗ್ರೆಸ್ ಶಾಸಕ ಬಿ.ಝಡ್. ಜಮೀರ್ ಅಹಮದ್ ಖಾನ್ ಕೈಗೆ ಮುತ್ತಿಟ್ಟು ಶುಭಾಶಯ ಕೋರಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಹುಟ್ಟು ಹಬ್ಬಕ್ಕೆ ಮನೆಗೆ ಹೋಗಿ ಶುಭಾಶಯ ಕೋರಿದ ಜಮೀರ್ ಅಹಮದ್ ಜೊತೆಯಲ್ಲಿ ಕುಳಿತು ಊಟ ಮಾಡಿದರು. ಈ ವೇಳೆ ಚನ್ನಮ್ಮ ದೇವೇಗೌಡ, ಹೆಚ್.ಡಿ. ರೇವಣ್ಣ ಕೂಡ ಸಾಥ್ ನೀಡಿದರು.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಗಲ್ಲಿ ಗಲ್ಲಿಯಲ್ಲಿ ಚುನಾವಣಾ ಪ್ರಚಾರ ಮಾಡಿ ಜಮೀರ್ ಅಹಮದ್ ಅವರನ್ನು ದೇವೇಗೌಡರು ಮೊದಲ ಬಾರಿ ಗೆಲ್ಲಿಸಿದ್ದರು.
ದೇವೇಗೌಡರ ಪುತ್ರ ಕುಮಾರಸ್ವಾಮಿ ಅವರೊಂದಿಗೆ ವೈಯಕ್ತಿಕ ಕಾರಣಗಳಿಂದ ವೈಮನಸ್ಸು ಉಂಟಾದ ಕಾರಣ ಜಮೀರ್ ಅಹಮದ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು.
ರಾಜ್ಯದ ಮುಖ್ಯಮಂತ್ರಿಗಳಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕಾಂಗಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಶಾಸಕ ಜಮೀರ್ ಅಹಮದ್ ಖಾನ್ ಅಭಿನಂದನೆಗಳನ್ನು ಸಲ್ಲಿಸಿದರು.