#HappyBdayPMModi| ಮೋದಿಗಾಗಿ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ಜಶೋದಾ ಬೇನ್‌!

Published : Sep 17, 2019, 10:54 AM ISTUpdated : Sep 17, 2019, 10:55 AM IST

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ 69ನೇ ಹುಟ್ಟುಹಬ್ಬದ ಸಂಭ್ರಮ. ಹೀಗಿರುವಾಗ ಪ್ರಧಾನಿ ಮೋದಿಗೆ ವಿಶ್ವದ ಹಾಗೂ ದೇಶದ ಗಣ್ಯರು ಶುಭ ಕೋರಿದ್ದಾರೆ. ಟ್ವಿಟರ್‌ನಲ್ಲಿ ಮೋದಿ ಹುಟ್ಟುಹಬ್ಬ ಟಾಪ್ ಟ್ರೆಂಡ್ ಸೃಷ್ಟಿಸಿದೆ. ಹೀಗಿರುವಾಗ ಪ್ರಧಾನಿ ಮೋದಿ ಪತ್ನಿ ಜಶೋದಾ ಬೇನ್ ಕೂಡಾ ತಮ್ಮ ಪತಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸೋಮವಾರ ಮಧ್ಯಾಹ್ನ ಅಸ್ಸಾನ್‌ಸೋಲ್‌ನ ಕಲ್ಯಾಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಜಶೋದಾ ಭೇನ್ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ತಾನು ತನ್ನ ಪತಿ, ನರೇಂದ್ರ ಮೋದಿಗಾಗಿ ಈ ಪೂಜೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. 

PREV
17
#HappyBdayPMModi| ಮೋದಿಗಾಗಿ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ಜಶೋದಾ ಬೇನ್‌!
ಪ್ರಧಾನಿ ಮೋದಿ ಹುಟ್ಟುಹಬ್ಬದಂದು, ಪಶ್ಚಿಮ ಬಂಗಾಳದ ಕಲ್ಯಾಣೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ಆಗಮಿಸಿದ ಪತ್ನಿ ಜಶೋದಾ ಬೇನ್

27
ಸೋಮವಾರ ಮಧ್ಯಾಹ್ನ 12.45ಕ್ಕೆ ಪೂಜೆ, ಪ್ರಧಾನಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಈ ಪೂಜೆ ಸಲ್ಲಿಸಿದ್ದೇನೆ ಎಂದ ಜಶೋಧಾ ಬೇನ್

37
500ಕ್ಕೂ ಹೆಚ್ಚು ವರ್ಷ ಹಳೆಯ ಮಂದಿರದಲ್ಲಿ ಜಶೋದಾ ಬೇನ್ ಪೂಜೆ ಸಲ್ಲಿಸಿರುವುದು ಸಂಚಲನ ಸೃಷ್ಟಿಸಿದೆ.

47
ಕಲ್ಯಾಣೇಶ್ವರಿ ದೇವಸ್ಥಾನವನ್ನು ರಾಜಾ ಲಕ್ಷ್ಮಣ ಸೇನ್ ನಿರ್ಮಿಸಿದ್ದ, ಕಲ್ಯಾಣೇಶ್ವರಿ ಕಾಳಿ ಮಾತೆಯ ಮತ್ತೊಂದು ಸ್ವರೂಪ

57
ಜಶೋದಾ ಬೇನ್ ಪಶ್ಚಿಮ ಬಂಗಾಳದ ಧನ್‌ಬಾದ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಇದಾದ ಬಳಿಕ ಅವರು ದೇವಸ್ಥಾನಕ್ಕೆ ತೆರಳಿದ್ದರು.

67
ಜಶೋದಾ ಬೇನ್ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಬಿಜೆಪಿ ನಾಯಕರು ಯಾರೂ ಅಲ್ಲಿರಲಿಲ್ಲ. ಆದರೆ ಉನ್ನತ ಪೊಲೀಸ್ ಅಧಿಕಾರಿಗಳು ಅವರನ್ನು ಬರ ಮಾಡಿಕೊಂಡಿದ್ದರು.

77
ಲಭ್ಯವಾದ ಮಾಹಿತಿ ಅನ್ವಯ ಜಶೋದಾ ಬೇನ್ ದೇವಸ್ಥಾನದಲ್ಲಿ 201ರೂ. ಕಾಣಿಕೆ ನೀಡಿದ್ದಾರೆನ್ನಲಾಗಿದೆ

click me!

Recommended Stories