ಕನಸಿಗೆ ದೇವರು ಬಂದು ಹೇಳಿದ ಜಾಗದಲ್ಲಿ ಅಗೆದರೆ ಕೈಗೆ ಸಿಕ್ಕೇಬಿಡ್ತು ಅಲಾಯಿ ದೇವರು

Published : Jan 23, 2026, 03:29 PM IST

ಕನಸಿಗೆ ದೇವರು ಬಂದು ಹೇಳಿದ ಜಾಗದಲ್ಲಿ ಅಗೆದರೆ ಕೈಗೆ ಸಿಕ್ಕೇಬಿಡ್ತು ಅಲಾಯಿ ದೇವರು. ಮುಸ್ಲಿಮರೇ ಇರದ ಈ ಗ್ರಾಮದಲ್ಲಿ ಅಲಾಯಿ ದೇವರು ಪತ್ತೆಯಾಗಿದ್ದು, ಮಸೀದಿಗೆ ಸ್ಥಳಾಂತರ ಮಾಡಲಾಗಿದೆ.ಏನಿದರ ಅಸಲಿಯತ್ತು? 

PREV
16
ರಾಮನಗೌಡ ಕನಸಿನಲ್ಲಿ ಅಲಾಯಿ ದೇವರು ಪತ್ತೆ

ಕೊಪ್ಪಳದ ಬಾದಿಮನಾಳ ಗ್ರಾಮದಲ್ಲಿ ಪವಾಡವೇ ನಡೆದಿದೆ. ಬಾದಿಮನಾಳ ಗ್ರಾಮದ ನಿವಾಸಿ ರಾಮನಗೌಡ ಕನಸಿನಲ್ಲಿ ಅಲಾಯಿ ದೇವರು ಇರುವಿಕೆ ಕುರಿತು ಕಂಡಿತ್ತು. ಕನಸಿನಲ್ಲಿ ಕಂಡಂತೆ ರಾಮನಗೌಡ ಅನ್ನೋ ರೈತನ ಜಮೀನನಲ್ಲಿ ಭೂಮಿ ಅಗೆದಾಗ ಮೂರು ಅಲಾಯಿ ದೇವರು ಪತ್ತೆಯಾಗಿದೆ. ವಿಶೇಷ ಅಂದರೆ ಈ ಅಲಾಯಿ ದೇವರನ್ನು ಹಿಂದೂಗಳೇ ಮಸೀದಿಗೆ ಸ್ಥಳಾಂತರಿಸಿದ್ದಾರೆ. ಮಾಹಿತಿ ಹರಿದಾಡುತ್ತಿದ್ದಂತೆ ಇದರ ಅಸಲಿಯತ್ತೂ ಬಹಿರಂಗವಾಗಿದೆ

26
ಯಮನೂರಪ್ಪ ಜಮೀನಿನಲ್ಲಿ ಅಲಾಯಿ ದೇವರು ಪತ್ತೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಾದಿಮನಾಳ ಗ್ರಾಮದಲ್ಲಿ ಈ ಪವಾಡ ನಡೆದಿದೆ. ಯಮನೂರಪ್ಪ ಅವರ ಜಮೀನಿನಲ್ಲಿ ಮೂರು ಅಲಾಯಿ ದೇವರು ಪತ್ತೆಯಾಗಿದೆ. ಎರಡು ಹುತ್ತಗಳಲ್ಲಿಮೂರು ಅಲಾಯಿ ದೇವರು ಪತ್ತೆಯಾಗಿದೆ. ಮಾಹಿತಿ ಸಿಗುತ್ತಿದ್ದಂತೆ ಈಡಿ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದಾರೆ.ರಾಮನಗೌಡ ಅವರ ಕನಸಿನಲ್ಲಿ ಅಲಾಯಿ ದೇವರು ಇರುವಿಕೆ ಬಗ್ಗೆ ದೇವರೇ ಸೂಚನೆ ನೀಡಿದ್ದರು. ಜೊತೆಗೆ ಗ್ರಾಮಸ್ಥರು ಸಹ ಅನೇಕ ಬಾರಿ ಜಮೀನಿನಲ್ಲಿ ಅಲಾಯಿ ದೇವರುಗಳು ಇರುವ ಬಗ್ಗೆ ಮಾತನಾಡುತ್ತಿದ್ದರು. ದೇವರು ಕನಸಿನಲ್ಲಿ ಪ್ರತ್ಯಕ್ಷಗೊಂಡು ಸೂಚನೆ ನೀಡಿದ ಬೆನ್ನಲ್ಲೇ ಗ್ರಾಮಸ್ಥರು ಹುತ್ತಗಳನ್ನು ಅಗೆದಾಗ ಅಲಾಯಿ ದೇವರು ಪತ್ತೆಯಾಗಿದೆ.

36
ಅಲಾಯಿ ದೇವರು ಗ್ರಾಮದ ಮಸೀದಿಗೆ ಸ್ಥಳಾಂತರ

ಅಲಾಯಿ ದೇವರು ಮುಸ್ಲಿಮರು ಪೂಜಿಸುವ ದೇವರು. ವಿಶೇಷ ಅಂದರೆ ಬಾದಿಮನಾಳ ಗ್ರಾಮದಲ್ಲಿ ಮುಸ್ಲಿಮರೇ ಇಲ್ಲ. ಆದರೆ ಹಿಂದೂಗಳೇ ಮೊಹರಂ ಹಬ್ಬ ಆಚರಣೆ ಮಾಡುತ್ತಾರೆ. ಇದೀಗ ಅಲಾಯಿ ದೇವರು ಪತ್ತೆಯಾದ ಬೆನ್ನಲ್ಲೇ ಧಾರ್ಮಿಕ ಕಾರ್ಯಗಳೊಂದಿಗೆ ಗ್ರಾಮದ ಮಸೀದಿಗೆ ಸ್ಥಳಾಂತರ ಮಾಡಿದ್ದಾರೆ.

46
ಅಲಾಯಿ ದೇವರ ಪವಾಡಕ್ಕೆ ತಂಡೋಪತಂಡವಾಗಿ ಬಂದ ಜನಸಾಗರ

ಬಾದಿಮನಾಳ ಗ್ರಾಮದಲ್ಲಿ ಅಲಾಯಿ ದೇವರು ಪತ್ತೆಯಾಗಿರುವ ಮಾಹಿತಿ ಸಿಕ್ಕ ಬೆನ್ನಲ್ಲೇ ಜನರು ತಂಡೋಪತಂಡವಾಗಿ ಮಸೀದಿಗೆ ಆಗಮಿಸುತ್ತಿದ್ದರೆ. ಅಲಾಯಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇದೀಗ ಗ್ರಾಮದ ಮಸೀದಿಯಲ್ಲಿ ಜನಸಾಗರವೇ ಹರಿದು ಬಂದಿದೆ. ಇತರ ಗ್ರಾಮಗಳಿಂದಲೂ ಜನರು ಆಗಮಿಸುತ್ತಿದ್ದಾರೆ. ರಾಮನಗೌಡ ಕನಸಿನಲ್ಲಿ ಹುತ್ತದ ಒಳಗೆ ಅಲಾಯಿ ದೇವರು ಇರುವುದಾಗಿ ದೇವರು ಸೂಚಿಸಿದ್ದರು. ಇದರಂತೆ ಗ್ರಾಮಸ್ಥರು ಹುತ್ತ ಇರುವ ಜಾಗಗಳ ಬಗ್ಗೆ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಯಮನೂರಪ್ಪ ಅವರ ಜಮೀನಿಲ್ಲಿ ಹುತ್ತ ಇರುವ ಮಾಹಿತಿ ಸಿಕ್ಕಿದೆ. ಇದರಂತೆ ಯಮನೂರಪ್ಪ ಹಾಗೂ ಗ್ರಾಮಸ್ಥರು ಹುತ್ತ ಅಗೆದಾಗ ಅಚ್ಚರಿ ಎದುರಾಗಿದೆ. ಕನಸಿನಲ್ಲಿ ಕಂಡಂತೆ ಮೂರು ಅಲಾಯಿ ದೇವರು ಪತ್ತೆಯಾಗಿದೆ.

56
ಮುತ್ತಪ್ಪ ದೇವರ ಬಣ್ಣ ಬಯಲು

ದೇವರು ತಂದಿಟ್ಟ ಮುತ್ತಪ್ಪ ದೇವರ ಬಣ್ಣ ಬಯಲಾಗಿದೆ. ಬಾದಿಮನಾಳ ಗ್ರಾಮದ ಮುತ್ತಪ್ಪ ದೇವರು ಸ್ವಾಮೀಜಿ ಇದೇ ರೀತಿ ವಂಚನೆ ಮಾಡುತ್ತಿರುವುದು ಬೆಳೆಕಿಗೆ ಬಂದಿದೆ. ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಆಗೋಲಿ ನಿವಾಸಿಯಾಗಿರೋ‌‌ ಮುತ್ತಪ್ಪ ನಿನ್ನೆ ಬಾದಿಮನಾಳ ಗ್ರಾಮದ ಹುತ್ತದಲ್ಲಿ ಅಲಾಯಿ ದೇವರು ತಂದು ಹುತ್ತದಲ್ಲಿ ಅಡಗಿಸಿಟ್ಟಿದ್ದರು. ಬಳಿಕ ಮುತ್ತಪ್ಪ ದೇವರು ಹಾಗೂ ರಾಮನಗೌಡ ದೇವರು ನಾಟಕವಡಿದ್ದಾರೆ. ಕನಸಿನಲ್ಲಿ ಬಂದು ದೇವರು ಹೇಳಿದ್ದಾರೆ ಎಂದು ಸುಳ್ಳು ಹೇಳಿ ನಾಟಕ ಆಡಿದ್ದಾರೆ.

66
ಮುತ್ತಪ್ಪನ ಹಳೇ ಚಾಳಿ

ಮುತ್ತಪ್ಪನ ನಿಜ ಬಣ್ಣ ಬಯಲಾಗದೆ. ತಾನು ಸ್ವಾಮೀಜಿ ಎಂದು ಮಹಿಳೆಯರಿಗೆ ಚಿತ್ರ ಹಿಂಸೆ ನೀಡಿ ಹಲವು ಬಾರಿ ಮುತ್ತಪ್ಪ ಸಿಕ್ಕಿ ಬಿದ್ದಿದ್ದ. ದೆವ್ವ ಬಿಡಿಸೋ ನೆಪದಲ್ಲಿ ಮುತ್ತಪ್ಪ ಸ್ವಾಮೀಜಿಯ ಹಿಂಸೆ ನೀಡುತ್ತಿದ್ದ . ಗಡಚಿಂತಿ ಗ್ರಾಮದಿಂದ ಗ್ರಾಮಸ್ಥರು ಮುತ್ತಪ್ಪ ದೇವರನ್ನು ಓಡಿಸಿದ್ದರು. ಇದೀಗ ಬಾದಿಮನಾಳ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದರು. ಕುಷ್ಟಗಿ ತಾಲೂಕಿನ ಗಡಚಿಂತಿಯಲ್ಲಿ ದೇವರು ಸಿಕ್ಕಿದೆ ಎಂದು ನಂಬಿಸಿದ್ದ ಮುತ್ತಪ್ಪ ಸ್ವಾಮೀಜಿ, ಇದೀಗ ಬಾದಿಮನಾಳದಲ್ಲಿ ಇದೇ ನಾಟಕವಾಡಿ ಸಿಕ್ಕಿ ಬಿದ್ದಿದ್ದಾರೆ.

ಮುತ್ತಪ್ಪನ ಹಳೇ ಚಾಳಿ

Read more Photos on
click me!

Recommended Stories