ಕಣ್ಣೆದುರೆ ಗರ್ಭಿಣಿ ಜಿಂಕೆ ಪ್ರಾಣ ಹಾರಿಹೋಯ್ತು, ಕಂಡು ರೋದಿಸಿದ ಸಂಗಾತಿಗಳು

First Published | Apr 30, 2020, 9:46 PM IST

ಚಿಕ್ಕಮಗಳೂರು (ಏ. 30) ಲಾಕ್ ಡೌನ್ ಪರಿಣಾಮ ಕಾಡು ಪ್ರಾಣಿಗಳು ಸ್ವಚ್ಛಂದ ವಿಹಾರ ನಡೆಸುತ್ತಿವೆ. ಇದೇ ರೀತಿ ರಸ್ತೆಗೆ ಬಂದ ಜಿಂಕೆಯೊಂದು ತನ್ನ ಪ್ರಾಣ ನೀಡಿದೆ.  ಲಾಕ್ ಡೌನ್ ಒಂದು ಕಡೆ ಮಾನವರನ್ನು ಮನೆಯಲ್ಲಿ ಕೂಡಿಹಾಕಿದ್ದರೆ ಪ್ರಾಣಿಗಳು ಸ್ವಚ್ಛಂದ ವಿಹಾರ ನಡೆಸುತ್ತಿವೆ. ಅಪರೂಪದ ಡಾಲ್ಫಿನ್ ಗಳು ಸಮುದ್ರ ತೀರಕ್ಕೆ ಬಂದಿದ್ದು ಸುದ್ದಿಯಾಗಿತ್ತು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಗ್ರಾಮದಲ್ಲಿ ಜಿಂಕೆ ಸಾವನ್ನಪ್ಪಿದೆ.
ಜಿಂಕೆಯ ಸಾವಿನಿಂದ ದೂರದಲ್ಲಿ ನಿಂತ ಸಂಗಾತಿಗಳು ರೋದಿಸುತ್ತಿರುವ ದೃಶ್ಯ ಮಾತ್ರ ಕಣ್ಣಲ್ಲಿ ನೀರು ತರಿಸಿತ್ತು.
Tap to resize

ಲಾಕ್ ಡೌನ್ ಪರಿಣಾಮ ಮಲೆನಾಡು ಭಾಗದಲ್ಲಿಯೂ ವಾಹನ ಸಂಚಾರ ಕಡಿಮೆಯಾಗಿದೆ.
ಸಾವು ತಂದುಕೊಂಡ ಜಿಂಕೆ ಮತ್ತು ರೋದಿಸುತ್ತಿರುವ ಅದರ ಸಂಗಾತಿಗಳನ್ನು ಕಂಡವರು ಒಂದು ಕ್ಷಣ ಮರುಗಿದರು.

Latest Videos

click me!