ಸವಣೂರು ಗ್ರಾಮ ಪಂಚಾಯತ್‌ನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕದ ಮಾಣಿ ಎಂಬವರ ಮಗಳು ಸುಂದರಿ ಅವರು ತನ್ನ ಮಕ್ಕಳಾದ ಆಶಾ,ಧನ್ವಿ,ಸನತ್ ಜತೆ ಸಣ್ಣ ಟರ್ಪಾಲ್ ಕಟ್ಟಿದ ಜೋಪಡಿಯಲ್ಲಿ ವಾಸವಾಗಿದ್ದಾರೆ.
undefined
ಕಟ್ಟಿಗೆ ದಾಸ್ತಾನಿನಂತಿರುವ ಸಣ್ಣ ಮನೆ, ಅಡುಗೆ ಕೋಣೆಯಿಂದ ಹಿಡಿದು ಎಲ್ಲವೂ ಅದರಲ್ಲಿಯೇ ನಡೆಯಬೇಕು. ಮಳೆ ಬಂದರೆ ಸೋರುವ ಮೇಲ್ಛಾವಣಿ, ಭದ್ರತೆ ಇಲ್ಲವೇ ಇಲ್ಲ ಇಂತಹ ಅಸಹಾಯಕ ಸ್ಥಿತಿಯಲ್ಲಿಯೇ ಜೀವನ ಕಳೆಯುತ್ತಿದೆ.
undefined
ಲಾಕ್‌ಡೌನ್ ಸಂಧರ್ಭದಲ್ಲಿ ಇಲ್ಲಿನ ಯುವಕ ಮಂಡಲ ಹಾಗೂ ಸೇವಾ ಭಾರತಿ ವತಿಯಿಂದ ಆಹಾರದ ಕಿಟ್ ಕೊಡುವ ಸಂಧರ್ಭದಲ್ಲಿ ಇವರ ದಯನೀಯ ಸ್ಥಿತಿ ಕಂಡು, ಈ ಮಳೆಗಾಲದಲ್ಲಿ ಈ ಮನೆಯಲ್ಲಿರುವುದು ಕಷ್ಟಕರ ಎಂಬುದನ್ನು ಅರಿತು ಮನೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದರು.
undefined
ಇವರ ಮನೆಯ ದಾಖಲೆ ಪತ್ರಗಳು ಸರಿಯಿಲ್ಲದ ಕಾರಣ ಸರಕಾರದ ನಿವೇಶನವೂ ದೊರಕಿರಲಿಲ್ಲ.ಇದಕ್ಕಾಗಿ ವಾಟ್ಸಾಪ್ ನಲ್ಲಿ ಕಟ್ಟೋಣ ಬಾಳಿಗೊಂದು ಸೂರು ಎಂಬ ಗುಂಪು ರಚಿಸಿ,ದಾನಿಗಳನ್ನು ಸೇರಿಸಿ,ಯುವಕ ಮಂಡಲಗಳ ಸದಸ್ಯರನ್ನು ಸೇರಿಸಿ ಕಾರ್ಯೋನ್ಮುಖರಾದರು.
undefined
ಲಾಕ್‌ಡೌನ್ ಸಂಧರ್ಭದಲ್ಲಿ ಇಲ್ಲಿನ ಯುವಕ ಮಂಡಲ ಹಾಗೂ ಸೇವಾ ಭಾರತಿ ವತಿಯಿಂದ ಆಹಾರದ ಕಿಟ್ ಕೊಡುವ ಸಂಧರ್ಭದಲ್ಲಿ ಇವರ ದಯನೀಯ ಸ್ಥಿತಿ ಕಂಡು, ಈ ಮಳೆಗಾಲದಲ್ಲಿ ಈ ಮನೆಯಲ್ಲಿರುವುದು ಕಷ್ಟಕರ ಎಂಬುದನ್ನು ಅರಿತು ಮನೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದರು.
undefined
ಲಾಕ್‌ಡೌನ್ ಸಂಧರ್ಭದಲ್ಲಿ ಇಲ್ಲಿನ ಯುವಕ ಮಂಡಲ ಹಾಗೂ ಸೇವಾ ಭಾರತಿ ವತಿಯಿಂದ ಆಹಾರದ ಕಿಟ್ ಕೊಡುವ ಸಂಧರ್ಭದಲ್ಲಿ ಇವರ ದಯನೀಯ ಸ್ಥಿತಿ ಕಂಡು, ಈ ಮಳೆಗಾಲದಲ್ಲಿ ಈ ಮನೆಯಲ್ಲಿರುವುದು ಕಷ್ಟಕರ ಎಂಬುದನ್ನು ಅರಿತು ಮನೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದರು.
undefined
ಮನೆ ಕಟ್ಟುವ ಕಾರ್ಯದಲ್ಲಿ ನಿರತರಾಗಿರುವ ತಂಡದ ಸದಸ್ಯರು
undefined
ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಚೆನ್ನಾವರ ಅಭ್ಯುದಯ ಯುವಕ ಮಂಡಲ ಮತ್ತು ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ ವಾಟ್ಸಪ್ ಗ್ರೂಪ್ ರಚಿಸಿ ದಾನಿಗಳ ನೆರವಿನ ಜೊತೆಗೆ ಶ್ರಮದಾನದ ಮೂಲಕ ಬಡ ಕುಟುಂಬವೊಂದಕ್ಕೆ ಮನೆ ಕಟ್ಟಿ ಮಾದರಿಯಾಗಿದ್ದಾರೆ.
undefined
ಈ ಎರಡು ಯುವಕ ಮಂಡಲದ ಸದಸ್ಯರು ಶ್ರಮದಾನ ನಡೆಸುವ ಮೂಲಕ ಅಸಹಾಯಕ ಕುಟುಂಬವೊಂದಕ್ಕೆ ಆಸರೆಯಾಗಿ ಸುಮಾರು 2.5 ಲಕ್ಷ ರೂ. ವೆಚ್ಚದಲ್ಲಿ ಮನೆಯೊಂದನ್ನು ನಿರ್ಮಿಸಿ ಹಸ್ತಾಂತರಿಸಲು ಸಿದ್ಧತೆ ನಡೆಸಿದ್ದಾರೆ.
undefined
ಇದೀಗ ಮನೆ ನಿರ್ಮಾಣದ ಕಾರ್ಯ ಮುಕ್ತಾಯ ಹಂತಕ್ಕೆ ತಲುಪಿದೆ.
undefined
ಗ್ರಾ.ಪಂ.ನ ಕುಡಿಯುವ ನೀರಿನ ಸಂಪರ್ಕ ಬಿಟ್ಟರೆ ಬೇರೆ ಯಾವುದೇ ನೀರಿನಾಶ್ರಯ ಇಲ್ಲದಿರುವುದರಿಂದ ಪುತ್ತೂರು ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಅವರು ಉದ್ಯೋಗ ಖಾತರಿ ಯೋಜನೆಯ ಮೂಲಕ ಬಾವಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದರು.
undefined
ಜೂ.5 ರೊಳಗೆ ಮನೆ ನಿರ್ಮಾಣ ಪೂರ್ಣಗೊಳಿಸಿ ಕುಟುಂಬಕ್ಕೆ ಹಸ್ತಾಂತರ ಮಾಡುವ ಇರಾದೆ ಈ ತಂಡಕ್ಕೆ ಇದೆ.
undefined
ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಸಮೀಪದಲ್ಲಿ ನಿರ್ಗತಿಕ ಕುಟುಂಬವೊಂದಕ್ಕೆ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಸದಸ್ಯ ಸತೀಶ್ ಅಂಗಡಿಮೂಲೆ,ಸಾಮಾಜಿಕ ಕಾರ್ಯಕರ್ತ,ವಿದ್ಯುತ್ ಗುತ್ತಿಗೆದಾರ ಸುಬ್ರಾಯ ಗೌಡ ಅವರ ನೇತೃತ್ವದಲ್ಲಿ ಚೆನ್ನಾವರ ಅಭ್ಯುದಯ ಯುವಕ ಮಂಡಲ ಮತ್ತು ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ ಇದರ ಸಹಭಾಗಿತ್ವದಲ್ಲಿ ಮನೆ ನಿರ್ಮಾಣ ಮಾಡುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.
undefined