ಕರ್ಫ್ಯೂ ನಡುವೆಯೇ 50ಕ್ಕೂ ಅಧಿಕ ಮದುವೆ..! ಇಲ್ಲಿವೆ ಫೋಟೋಸ್

First Published | May 25, 2020, 9:54 AM IST

ರಾಜ್ಯಾದ್ಯಂತ ಭಾನುವಾರದ ಕೊರೋನಾ ಕರ್ಫ್ಯೂವನ್ನು ವಿಧಿಸಲಾಗಿದ್ದರೂ, ಉಡುಪಿ ಜಿಲ್ಲೆಯಲ್ಲಿ 27 ಮದುವೆಗಳು ನಡೆದಿವೆ. ಇಲ್ಲಿವೆ ಫೋಟೋಸ್

ರಾಜ್ಯಾದ್ಯಂತ ಭಾನುವಾರದ ಕೊರೋನಾ ಕರ್ಫ್ಯೂವನ್ನು ವಿಧಿಸಲಾಗಿದ್ದರೂ, ಉಡುಪಿ ಜಿಲ್ಲೆಯಲ್ಲಿ 27 ಮದುವೆಗಳು ನಡೆದಿವೆ.
ಜಿಲ್ಲಾಡಳಿತದ ಅಧಿಕೃತ ಅನುಮತಿಯೊಂದಿಗೇ ಈ ವಿವಾಹ ಕಾರ್ಯಕ್ರಮ ನಡೆದಿದೆ.
Tap to resize

ಭಾನುವಾರದ ಕರ್ಫ್ಯೂ ಘೋಷಣೆಯಾಗುವ ಮೊದಲೇ ನಿಶ್ಚಿತವಾಗಿದ್ದ ಮದುವೆಗಳಾದ್ದರಿಂದ ಅವುಗಳನ್ನು ಕೆಲವು ಷರತ್ತುಗಳೊಂದಿಗೆ ನಡೆಸುವುದಕ್ಕೆ ಆಯಾ ತಾಲೂಕಿನ ತಹಶೀಲ್ದಾರ್ ಅವರ ಅನುಮತಿ ಪಡೆದು ಮದುವೆ ನಡೆಸುವುದಕ್ಕೆ ಅವಕಾಶ ನೀಡಲಾಗಿತ್ತು.
ಜಿಲ್ಲೆಯ 7 ತಾಲೂಕಿಗಳ ಪೈಕಿ ಉಡುಪಿ, ಬ್ರಹ್ಮಾವರ, ಕುಂದಾಪುರದಲ್ಲಿ ತಲಾ 4, ಬೈಂದೂರು ಕಾರ್ಕಳದಲ್ಲಿ ತಲಾ 6, ಕಾಪು ತಾಲೂಕಿನಲ್ಲಿ 3 ಮದುವೆಗಳು ನಡೆದವು.
ಆದರೇ ಈ ಮದುವೆಗಳಲ್ಲಿ ಒಟ್ಟು 50 ಮಂದಿ ಮಾತ್ರ ಭಾಗವಹಿಸಬೇಕು, ಮಾಸ್ಕ್, ದೈಹಿಕ ಅಂತರ, ಸ್ಯಾನಿಟೈಜೇಶನ್ ಕಡ್ಡಾಯ ಇತ್ಯಾದಿ ಷರತ್ತುಗಳನ್ನು ವಿಧಿಸಲಾಗಿದ್ದು, ಅವುಗಳೆಲ್ಲವನ್ನೂ ಈ ಮದುವೆಗಳಲ್ಲಿ ಪಾಲಿಸಲಾಗಿತ್ತು.

Latest Videos

click me!