ಅಂಜನಾದ್ರಿ ಬೆಟ್ಟ: 705 ಅಡಿ ಎತ್ತರದ ಆಂಜನೇಯ ಮೂರ್ತಿ ಶಿಲೆಗೆ ಪೇಜಾ​ವರ ಶ್ರೀ ಪೂಜೆ

First Published | Nov 21, 2020, 12:30 PM IST

ಗಂಗಾವತಿ(ನ.21): ತಾಲೂಕಿನ ಅಂಜನಾದ್ರಿ ಪರ್ವತದ ಬಳಿ ಹನುಮ ಜನ್ಮ ಭೂಮಿ ಟ್ರಸ್ವ್‌ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ 215 ಮೀಟರ್‌ ಎತ್ತರದ ಆಂಜನೇಯ ಮೂರ್ತಿ ನಿರ್ಮಾಣದ ಶಿಲೆಗಳಿಗೆ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಪೂಜೆ ಸಲ್ಲಿಸಿದ್ದಾರೆ. 

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟ
ಹಂಪಿ ಸಮೀಪದ ಕಿಷ್ಕಿಂದೆ ಅಂದರೆ ಅಂಜನಾದ್ರಿ ಪರ್ವತದ ಬಳಿ 1200 ಕೋಟಿ ರೂ. ವೆಚ್ಚದಲ್ಲಿ 705 ಅಡಿ ಎತ್ತರದ ಹನುಮಾನ್‌ ವಿಗ್ರಹ ನಿರ್ಮಿಸಲು ಉದ್ದೇಶಿಸಲಾಗಿದೆ.
Tap to resize

ಈ ಸಂದರ್ಭದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು, ಟ್ರಸ್ಟ್‌ನ ಶ್ರೀ ಗೋವಿಂದ ಸರಸ್ವತಿ ಸ್ವಾಮೀಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
215 ಮೀಟರ್‌ ಎತ್ತರದ ಆಂಜನೇಯ ಮೂರ್ತಿ ನಿರ್ಮಾಣದ ಶಿಲೆಗಳಿಗೆ ಪೂಜೆ ಸಲ್ಲಿಸಿದ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು

Latest Videos

click me!