ಗಂಗಾವತಿ: 15 ದಿನದಲ್ಲಿ ಎರಡು ಬಾರಿ ಮಳೆ ನೀರಿಗೆ ಕೊಚ್ಚಿ ಹೋದ ವಿಜಯನಗರ ಕಾಲುವೆ..!

First Published | Aug 10, 2020, 11:13 AM IST

ಗಂಗಾವತಿ(ಆ.10): ವಿಜಯನಗರ ಕಾಲುವೆ ಮಳೆ ನೀರಿಗೆ ಕೊಚ್ಚಿ ಹೋದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಡೇಬಾಗಿಲು ಬಳಿ ನಡೆದಿದೆ. ನಿನ್ನೆ(ಭಾನುವಾರ) ಮೂರು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ವಿಜಯನಗರ ಕಾಲುವೆ ಕೊಚ್ಚಿ ಹೋಗಿದೆ.  

ಪದೇ ಪದೇ ಒಡೆಯುತ್ತಿರುವ ವಿಜಯನಗರ ಕಾಲುವೆ
ಈ ಭಾಗದಲ್ಲಿ ಇತ್ತೀಚೆಗಷ್ಟೇ ಬತ್ತ ನಾಟಿ ಮಾಡಿದ್ದ ರೈತರು
Tap to resize

ನಿರಂತರ ಮಳೆಯಿಂದ ಕಂಗಾಲಾದ ಅನ್ನದಾತ
ಭಾರೀ ಮಳೆಯಿಂದ ಒಡೆದ ಕಾಲುವೆ, ಜಮೀನುಗಳಿಗೆ ನೀರು ಬರುವ ಸಾಧ್ಯತೆ
ಪದೇ ಪದೆ ವಿಜಯನಗರ ಕಾಲುವೆ ನೀರಾವರಿ ಮಳೆ ನೀರಿಗೆ ಕೊಚ್ಚಿ ಹೋಗುತ್ತಿದ್ದು, ಇದಕ್ಕೆ ನೀರಾವರಿ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ರೈತರು ಅರೋಪಿದ್ದಾರೆ.
ತಿಂಗಳ ಹಿಂದೆಯಷ್ಟೇ ವಿಜಯನಗರ ಕಾಲುವೆಯ ಕಾಮಗಾರಿಯನ್ನ ಕೈಗೊಳ್ಳಲಾಗಿತ್ತು.
ಕಳೆದ 15 ದಿನಗಳಲ್ಲಿ ಎರಡು ಬಾರಿ ಕೊಚ್ಚಿ ಹೋದವಿಜಯನಗರ ಕಾಲುವೆ

Latest Videos

click me!