'ಈ ನೆಲದ ಅನ್ನ ತಿಂತೀರಿ ಕನ್ನಡ ಕಲೀರಿ..' ಬೆಳಗಾವಿ ಬಿಮ್ಸ್ ಆಸ್ಪತ್ರೇಲಿ ಉಪಲೋಕಾಯುಕ್ತರಿಂದ ಕನ್ನಡ ಕ್ಲಾಸ್!

Published : Oct 29, 2026, 02:58 PM IST

ಉಪ ಲೋಕಾಯುಕ್ತ ಬಿ ವೀರಪ್ಪ ಅವರು ಇಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆ(BIMS) ಆಸ್ಪತ್ರೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಆಸ್ಪತ್ರೆಯ ಅವ್ಯವಸ್ಥೆ ಕಂಡು ವೈದ್ಯರ ವಿರುದ್ಧ ಗರಂ ಆದ ಘಟನೆ ನಡೆಯಿತು.

PREV
16
ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಉಪಲೋಕಾಯುಕ್ತ ದಿಢೀರ್ ಭೇಟಿ

ಉಪ ಲೋಕಾಯುಕ್ತ ಬಿ ವೀರಪ್ಪ ಅವರು ಇಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆ(BIMS) ಆಸ್ಪತ್ರೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಆಸ್ಪತ್ರೆಯ ಅವ್ಯವಸ್ಥೆ ಕಂಡು ವೈದ್ಯರ ವಿರುದ್ಧ ಗರಂ ಆದ ಘಟನೆ ನಡೆಯಿತು.

26
ರೋಗಿಗಳ ಜನಜಂಗುಳಿ ಕಂಡು ಉಪಲೋಕಾಯುಕ್ತರು ಶಾಕ್

ಬೀಮ್ಸ್ ಆಸ್ಪತ್ರೆ ಒಳಗೆ ಬರುತ್ತಿದ್ದಂತೆ ಆಸ್ಪತ್ರೆಯ ಒಳಗಿನ ರೋಗಿಗಳ ಜನಜಂಗುಳಿ ಕಂಡು ಒಂದು ಕ್ಷಣ ಉಪಲೋಕಾಯುಕ್ತರು ಶಾಕ್ ಆದಂತೆ ಕಂಡರು. ಆಸ್ಪತ್ರೆಯಲ್ಲಿ ಏನೇನು ವ್ಯವಸ್ಥೆಯಿದೆ ಎಂಬ ಬಗ್ಗೆ ಖುದ್ದಾಗಿ ಪರಿಶೀಲಿಸಿದರು. ಇದೇ ವೇಳೆ ಒಪಿಡಿ ಕೌಂಟರ್ ಮಾಡುವಂತೆ, ಸೈನಿಕರಿಗೆ ಪ್ರತ್ಯೇಕ ಕೌಂಟರ್ ಮಾಡುವಂತೆ ವೈದ್ಯರಿಗೆ ಸೂಚಿಸಿದರು.

36
ಸರಿಯಾಗಿ ಡ್ರೆಸ್ಸಿಂಗ್ ಮಾಡದ್ದಕ್ಕೆ ವೈದ್ಯರ ವಿರುದ್ಧ ಗರಂ

ಪರಿಶೀಲನೆ ವೇಳೆ ಖುದ್ದಾಗಿ ಪ್ರತಿಯೊಬ್ಬ ರೋಗಿಯ ಬಳಿ ತೆರಳಿ ಆಸ್ಪತ್ರೆಯಲ್ಲಿನ ವ್ಯವಸ್ಥೆ, ವೈದ್ಯರ ಚಿಕಿತ್ಸೆ ಕುರಿತು ವಿಚಾರಿಸಿದರು. ಈ ವೇಳೆ ರೋಗಿಗಳಿಗೆ ಸರಿಯಾಗಿ ಡ್ರೆಸ್ಸಿಂಗ್ ಮಾಡದ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆ ವೈದ್ಯರ ವಿರುದ್ಧ ಗರಂ ಆದರು.

46
ಆಸ್ಪತ್ರೆಯಲ್ಲೇ ಎಲ್ಲ ಔಷಧ ನೀಡುವಂತೆ ಉಪಲೋಕಾಯುಕ್ತ ಸೂಚನೆ

ಸರಿಯಾಗಿ ಡ್ರೆಸ್ಸಿಂಗ್ ಮಾಡೋಕಾಗಲ್ವ? ಇಲ್ಲೇ ಔಷಧವಿದ್ರೂ ರೋಗಿಗಳಿಗೆ ಹೊರಗಡೆ ಔಷಧಿ ಬರೆದುಕೊಡ್ತೀರಾ? ಅಂತಾ ವೈದ್ಯರಿಗೆ ಕ್ಲಾಸ್ ತೆಗೆದುಕೊಂಡರು. ಅಲ್ಲದೆ ರೋಗಿಗಳಿಗೆ ಅಗತ್ಯವಾದ ಎಲ್ಲ ಔಷಧ ಆಸ್ಪತ್ರೆಲ್ಲೇ ನೀಡುವಂತೆ ಸೂಚನೆ ನೀಡಿದರು.ರೋಗಿ ಸಂಬಂಧಿಗೆ ಕನ್ನಡ ಪಾಠ ಮಾಡಿದ ಉಪಲೋಕಾಯುಕ್ತರು

ಇದೇ ವೇಳೆ ರೋಗಿಗಳ ಬಗ್ಗೆ ಕಾಳಜಿವಹಿಸುವಂತೆ ಕುಟುಂಬಸ್ಥರಿಗೂ ತಿಳಿಹೇಳಿದರು. ಉಪಲೋಕಾಯುಕ್ತರ ಮಾತಿಗೆ ಕನ್ನಡದಲ್ಲಿ ಮಾತನಾಡದ ರೋಗಿಗಳ ಸಂಬಂಧಿಗೆ ಕನ್ನಡದ ಪಾಠ ಮಾಡಿದರು

56
ರೋಗಿ ಸಂಬಂಧಿಗೆ ಕನ್ನಡ ಪಾಠ ಮಾಡಿದ ಉಪಲೋಕಾಯುಕ್ತರು

ಇದೇ ವೇಳೆ ರೋಗಿಗಳ ಬಗ್ಗೆ ಕಾಳಜಿವಹಿಸುವಂತೆ ಕುಟುಂಬಸ್ಥರಿಗೂ ತಿಳಿಹೇಳಿದರು. ಉಪಲೋಕಾಯುಕ್ತರ ಮಾತಿಗೆ ಕನ್ನಡದಲ್ಲಿ ಮಾತನಾಡದ ರೋಗಿಗಳ ಸಂಬಂಧಿಗೆ ಕನ್ನಡದ ಪಾಠ ಮಾಡಿದರು

66
ಇಲ್ಲಿನ ನೀರು, ಅನ್ನ ತಿಂತೀರಿ ಕನ್ನಡ ಕಲೀರಿ..

ಅಲ್ಲಪ್ಪ ಈ ನೆಲದ ನೀರು ಕುಡಿಯುತ್ತೀರಿ, ಇಲ್ಲಿನ ಅನ್ನ ತಿನ್ನುತ್ತೀರಿ, ಇಲ್ಲಿ ಭಾಷೆ ಕಲಿಯೋಕೆ ಆಗಲ್ಲವಾ? ಕನ್ನಡ ಕಲಿಯಿರಿ ಎಂದು ರೋಗಿ ಸಂಬಂಧಿಗೂ ತಿಳಿಸಿದರು. ರಾಜ್ಯದಲ್ಲೇ ಇದ್ದುಕೊಂಡು ಇಲ್ಲಿನ ಕನ್ನಡ ಭಾಷೆ ಕಲಿಯದ ರೋಗಿಗಳ ಕುಟುಂಬಸ್ಥರ ಕನ್ನಡೇತರ ಭಾಷೆಗೆ ಅಸಮಾಧನಗೊಂಡರು. ಕನ್ನಡ ಕಲಿಯುವಂತೆ ತಿಳಿಸಿದರು.

Read more Photos on
click me!

Recommended Stories