ಉಡುಪಿ ಜಿಲ್ಲೆಯಲ್ಲಿ ಕೊರೋನಾ ತಡೆಗಟ್ಟಲು ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದ್ದು, ಜಿಲ್ಲಾಧಿಕಾರಿ ಜಿ. ಜಗದೀಶ್ ಮಂಗಳವಾರ ಸಂಜೆ ನಗರದಲ್ಲಿ ದಿಢೀರ್ ದಾಳಿ ನಡೆಸಿ, ನಿಮಯಗಳ ಪಾಲನೆ ಮಾಡದವರಿಗೆ ದಂಡ ವಿಧಿಸುವ ಮೂಲಕ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಬಸ್ ಸ್ಟ್ಯಾಂಡ್ ಬಳಿಯ ಹೋಟೆಲೊಂದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಅಲ್ಲಿ ಗ್ರಾಹಕರಿಗೆ ಕೈ ತೊಳೆಯಲು ಸೋಪ್ ಇಡದ ಕಾರಣ ಮಾಲೀಕರಿಗೆ ದಂಡ ವಿಧಿಸಿದರು
ಫೀಲ್ಡ್‌ಗಿಳಿದ ಜಿಲ್ಲಾಧಿಕಾರಿ
ಪೆಟ್ರೋಲ್ ಬಂಕ್‌ನಲ್ಲಿ ಕ್ಯಾಷಿಯರ್ ಕೈಗವಸು ತೊಡದೆ ಹಣ ಪಡೆಯುವುದನ್ನು ಕಂಡ ಜಿಲ್ಲಾಧಿಕಾರಿಗಳು, ನೋಟಿನಿಂದಲೂ ಸಹ ಕೋವಿಡ್ ಹರಡಲಿದ್ದು, ಎಚ್ಚರಿಕೆ ವಹಿಸುವಂತೆ ಸೂಚಿಸಿ, ಕ್ಯಾಷಿಯರ್‌ಗೆ ದಂಡ ವಿಧಿಸಿದರು.
ದಿನಸಿ ಅಂಗಡಿಯಲ್ಲಿ ಮಾಸ್ಕ್ಧರಿಸದ ಅಂಗಡಿ ಮಾಲೀಕ, ಸಿಬ್ಬಂದಿಗೆ ದಂಡ ವಿಧಿಸಿದರು.
ದಿನಸಿ ಅಂಗಡಿಯಲ್ಲಿ ಸುರಕ್ಷತಾ ಕ್ರಮ ಪರಿಶೀಲಿಸುತ್ತಿರುವ ಡಿಸಿ
ಮೆಡಿಕಲ್ ಶಾಪಲ್ಲಿ ಸೂಕ್ತ ಮಾಸ್ಕ್ ಧರಿಸದ ಮಾಲೀಕರಿಗೆ ದಂಡ ವಿಧಿಸುತ್ತಿರುವುದು
ಇನ್ನೊಂದು ಹೋಟೆಲಲ್ಲಿ ಅಗತ್ಯ ಸುರಕ್ಷತಾ ಕ್ರಮ ಪಾಲಿಸುತ್ತಿರುವ ಕುರಿತು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.