ಕೊರೋನಾ ಸೋಂಕಿನಿಂದ ಗುಣಮುಖರಾಗಿ ಕರ್ತವ್ಯಕ್ಕೆ ಮರಳಿದ ಹೈಕೋರ್ಟ್ ಸಿಬ್ಬಂದಿಯೊಬ್ಬರಿಗೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರು ಕೈ ಮುಗಿದು ಗೌರವಿಸಿ, ಹೂ ನೀಡುವ ಮೂಲಕ ಸ್ವಾಗತಿಸಿದ ಅಪರೂಪದ ಪ್ರಸಂಗ ಮಂಗಳವಾರ ನಡೆಯಿತು.
undefined
ರಾಜ್ಯ ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೇರಿ ಜೋಸೆಫಿನ್ ಅವರಿಗೆ ಕಳೆದ ತಿಂಗಳು ಕೊರೋನಾ ಸೋಂಕು ತಗುಲಿತ್ತು.
undefined
ಈ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ತೆರಳಿದ್ದ ಅವರು ಎಂಟು ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ನಂತರ ಹದಿನಾಲ್ಕು ದಿನಗಳ ಕಾಲ ಹೋಂ ಕ್ವಾರಂಟೈನಲ್ಲಿದ್ದರು. ಚಿಕಿತ್ಸೆ ಮತ್ತು ಆರೈಕೆ ಬಳಿಕ ಸಂಪೂರ್ಣವಾಗಿ ಗುಣಮುಖರಾದ ಮೇರಿ ಅವರು ಮಂಗಳವಾರ ಕರ್ತವ್ಯಕ್ಕೆ ವಾಪಸ್ಸಾದರು.
undefined
ಅವರಿಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರು ಹೂ ನೀಡಿ ಸ್ವಾಗತಿಸಿದರು.
undefined
ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸಹ ಮೇರಿ ಅವರಿಗೆ ಸ್ವಾಗತ ಕೋರಿ, ಶುಭಾಶಯ ತಿಳಿಸಿದರು
undefined
ನ್ಯಾಯಮೂರ್ತಿಗಳು ಹೈಕೋರ್ಟ್ ಸಿಬ್ಬಂದಿಯೊಬ್ಬರಿಗೆ ವ್ಯಕ್ತಪಡಿಸಿದ ಈ ಅಪರೂಪದ ಸ್ವಾಗತ ಮೆಚ್ಚುಗೆ ಹಾಗೂ ಸಂತಸಕ್ಕೆ ಕಾರಣವಾಯಿತು.
undefined