ಶ್ರೀ ಕೃಷ್ಣ ಮಠದಲ್ಲಿ ಚಾತುರ್ಮಾಸ್ಯ ಸಮಾಪ್ತಿ
ದೇವಪ್ರಬೋಧಿನಿ ಏಕಾದಶಿಯಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪರ್ಯಾಯ ಮಠದ ಪುರೋಹಿತರಾದ ಮುದರಂಗಡಿ ಲಕ್ಷ್ಮೀಶ ಆಚಾರ್ಯರು ಸುದರ್ಶನ ಹೋಮದ ಪೂರ್ಣಾಹುತಿ ನಡೆಸಿದರು.
ಪೇಜಾವರ ಶ್ರೀಪಾದರು ತಾವೇ ಮುದ್ರಾಧಾರಣೆ ಮಾಡಿಕೊಂಡು ಪರ್ಯಾಯ ಶ್ರೀಪಾದರಿಗೆ ಮುದ್ರಾಧಾರಣೆ ಮಾಡಿದರು.
ನಂತರ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಭಕ್ತಾದಿಗಳಿಗೆ ತಪ್ತ ಮುದ್ರಾಧಾರಣೆ ನಡೆಸಿದರು.
ಮುದ್ರಾಧಾರಾಣೆಯಿಂದ, ಪಾಪಗಳು ಸುಟ್ಟು ಹೋಗುತ್ತವೆ ಎಂಬ ನಂಬಿಕೆ ಇದೆ.
ವೈಜ್ಞಾನಿಕವಾಗಿಯೂ, ಬೆಂಕಿಯಲ್ಲಿ ಕಾಯಿಸಿದ ಲೋಹದಿಂದ ದೇಹದ ಮೇಲೆ ಮುದ್ರಾಧಾರಣೆಯಿಂದ ಅನೇಕ ಬಗೆಯ ರೋಗಾಣುಗಳು ನಾಶವಾಗುತ್ತವೆ
ವೈಜ್ಞಾನಿಕ ಹಿನ್ನೆಲೆಯ ಮುದ್ರಾ ದಾರಣೆ
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆದ ಮುದ್ರಾ ದಾರಣೆ
ಉಡುಪಿ ಮಠದಲ್ಲಿ ನಡೆದಚಾತುರ್ಮಾಸ್ಯ