ಮಧ್ವರಾಜ್ ಎನಿಮಲ್ ಕೇರ್ ಟ್ರಸ್ವ್ ಮತ್ತು ಏಂಜೆಲ್ಸ್ ಫಾರ್ ಸ್ಪ್ರೇ ಡಾಗ್ (ಮ್ಯಾಕ್ಟ್) ವತಿಯಿಂದ ಮಲ್ಪೆ ಬೀಚ್‌ನಲ್ಲಿ ‘ದಿ ಗ್ರೇಟ್ ಇಂಡಿಯನ್ ಡಾಗ್ ಶೋ’ ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ಸುಮಾರು 40ಕ್ಕೂ ಅಧಿಕ ದೇಶಿಯ- ಊರ ತಳಿಯ ನಾಯಿಗಳು ತಮ್ಮ ಮಾಲೀಕ- ಮಾಲಕಿಯರೊಂದಿಗೆ ತಲೆ ಎತ್ತಿ ತಾವೇನೂ ಕಮ್ಮಿ ಇಲ್ಲ ಎಂಬಂತೆ ಹೆಜ್ಜೆ ಹಾಕಿದವು.
ಅಪ್ಪಟ ದೇಶಿಯ ಮುದೋಳ್, ಪಾಶ್ಮಿ, ಕೊಂಬಾಯ, ಪರಯ್ಯ, ಕನ್ನಿ ಇತ್ಯಾದಿ ತಳಿಯ ನಾಯಿಗಳು ಗಮನ ಸೆಳೆದವು.
ಕಾರ್ಕಳ, ಸಾಲಿಗ್ರಾಮ, ಕುಂದಾಪುರದಿಂದಲೂ ತಮ್ಮ ಮನೆಯ ಪ್ರೀತಿಯ ನಾಯಿಗಳನ್ನು ಕರೆ ತಂದಿದ್ದರು.
ತಮ್ಮ ಮುದ್ದಿನ ನಾಯಿಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಜನ.
ವಿಭಿನ್ನ ಗಾತ್ರದ, ಬಣ್ಣದ, ಪೋಷಾಕು ಧರಿಸಿದ ನಾಯಿಗಳು ಆಕರ್ಷಣೆಯ ಕೇಂದ್ರವಾಗಿತ್ತು.
ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲ ನಾಯಿಗಳಿಗೆ ವಿಶೇಷ ಉಡುಗೊರೆ, ಪ್ರಮಾಣಪತ್ರ ನೀಡಲಾಯಿತು. ಮಾಲೀಕರು ಬಹುಮಾನ ಸ್ವೀಕರಿಸಿದರು.
ಮಾಲೀಕನೊಂದಿಗೆ ಗತ್ತಿನಲ್ಲಿ ರ್‍ಯಾಂಪ್ ವಾಕ್ ಮಾಡುತ್ತಿರುವ ನಾಯಿ
ವೇದಿಕೆಯಲ್ಲಿ ಪ್ರಮಾಣ ಪತ್ರ ಸ್ವೀಕರಿಸಲು ಬಂದ ನಾಯಿ