ಕೊರೋನಾ ಸಂಕಷ್ಟ: ಶ್ರೀರಂಗಪಟ್ಟಣದಲ್ಲಿ ಸರಳ ದಸರಾಗೆ ಚಾಲನೆ

First Published | Oct 24, 2020, 10:21 AM IST

ಶ್ರೀರಂಗ​ಪ​ಟ್ಟಣ(ಅ.24): ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದಸರಾ ಯಾವುದೇ ಆಡಂಬರವಿಲ್ಲದೇ ಸರಳ ಹಾಗೂ ಸಾಂಪ್ರದಾಯಿಕವಾಗಿ ಶುಕ್ರವಾರ ನಡೆಯಿತು.

ಸಾಂಪ್ರದಾಯಿಕ ಸರಳ ದಸರಾಗೆ ಜಿಲ್ಲೆಯ 17 ಮಂದಿ ಕೊರೋನಾ ವಾರಿಯರ್ಸ್‌ಗಳು ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
ತಾಲೂಕಿನ ಕಿರಂಗೂರು ವೃತ್ತದ ಬನ್ನಿ ಮಂಟಪದ ಬಳಿ ನಿರ್ಮಿಸಿದ್ದ ವೇದಿಕೆಯಲ್ಲಿ ಸಂಜೆ 4 ಗಂಟೆಗೆ ವಿಶೇಷವಾಗಿ ಅಲಂಕೃತಗೊಂಡಿದ್ದ ಚಾಮುಂಡೇಶ್ವರಿ ವಿಗ್ರಹ ಹೊತ್ತ ರಥಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
Tap to resize

ಸ್ಥಳೀಯ ಆಯ್ದ ಜಾನಪದ ಕಲಾತಂಡಗಳು ಪೂರ್ಣಕುಂಭ ಸಹಿತ ಮೆರವಣಿಗೆಗೆ ಸರಳ ಹಾಗೂ ಸಾಂಪ್ರದಾಯಿಕ ಚಾಲನೆ ನೀಡಿ ದಸರಾಗೆ ಮೆರಗು ನೀಡಿದರು.
ಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿನ 5 ಅಡಿ ಎತ್ತರವಿರುವ ದೇವಿಯ ವಿಗ್ರಹ 250 ಕೆ.ಜಿ ತೂಕದ ಚಾಮುಂಡೇಶ್ವರಿ ಮೂರ್ತಿಯನ್ನು ಅಲಂಕರಿಸಿ ಮೆರವಣಿಗೆ ನಡೆಸಲಾಯಿತು. ರಥಸಾಗುವ ಪಟ್ಟಣದ ರಾಜ ಬೀದಿಗಳನ್ನು ತಳಿರು ತೋರಣ ಸೇರಿದಂತೆ ವಿದ್ಯುತ್‌ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು. ಕಾರ್ಯಕ್ರಮದಲ್ಲಿ 17 ಮಂದಿ ಕೊರೋನಾ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಯಿತು.

Latest Videos

click me!