ವರ್ಷಕ್ಕೆ‌ ಏಳು ದಿನ ಮಾತ್ರ ಭಕ್ತರಿಗರಿಗೆ ದರ್ಶನ ನೀಡುತ್ತಾಳೆ ಹಣಕೋಣದ ಸಾತೇರಿ ದೇವಿ; 3 ರಾಜ್ಯಗಳಿಂದ ಮುಗಿಬಿದ್ದ ಜನ..!

Published : Sep 22, 2026, 05:30 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲೊಂದು ವಿಶಿಷ್ಟ ದೇವಿ ಜಾತ್ರೆ ಗಮನ ಸೆಳೆಯುತ್ತಾ ಬಂದಿದೆ. ಸಾತೇರಿ ದೇವಿಯ ದರ್ಶನ ಮಾಡಲು ಮೂರು ರಾಜ್ಯಗಳ ಭಕ್ತಾದಿಗಳು ಮುಗಿಬೀಳುತ್ತಿದ್ದಾರೆ.

PREV
15
ವರ್ಷಕ್ಕೆ ಒಂದು ವಾರ ಮಾತ್ರ ದೇಗುಲದ ಬಾಗಿಲು ಓಪನ್

ವರ್ಷಕ್ಕೆ ಒಂದು ವಾರ ಮಾತ್ರ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡುವ ಸಾತೇರಿ ಜಾತ್ರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೇ, ನೆರೆಯ ಗೋವಾ ಹಾಗೂ ಮಹಾರಾಷ್ಟ್ರದಿಂದಲೂ ಭಕ್ತರ ದಂಡೇ ಹರಿದು ಬರುತ್ತಿದೆ.

25
ಮೊದಲ ದಿನ ಕುಳಾವಿಗಳು ಹಾಗೂ ಗ್ರಾಮಸ್ಥರಿಗೆ ಮಾತ್ರ ದರ್ಶನ

ಗಣೇಶ ಚತುರ್ಥಿ ಮುಗಿದು ಮೂರನೇ ದಿನಕ್ಕೆ ಸಾತೇರಿ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಜಾತ್ರೆ ಆರಂಭವಾದ ಮೊದಲ‌ ದಿನ‌ ದೇವಾಲಯದ ಕುಳಾವಿಗಳು ಮತ್ತು ಗ್ರಾಮಸ್ಥರಿಗೆ ದೇವಿ ದರ್ಶನಕ್ಕೆ ಅವಕಾಶವಿದ್ರೆ, ಉಳಿದ ದಿನ ಸಾರ್ವಜನಿಕರು ಸಾತೇರಿದೇವಿ ದರ್ಶನ ಮಾಡಬಹುದಾಗಿದೆ.

35
ಸೆಪ್ಟೆಂಬರ್ 18ರ ಮಧ್ಯರಾತ್ರಿಯಿಂದಲೇ ದರ್ಶನ ಆರಂಭ

ಸೆಪ್ಟೆಂಬರ್ 18 ಮದ್ಯರಾತ್ರಿಯಿಂದಲೇ ಸಾತೇರಿ‌ ದೇವರ ಜಾತ್ರೆ ಆರಂಭವಾಗಿದ್ದು 24 ರ ವರೆಗೆ ಸಾರ್ವಜನಿಕರು‌ ದೇವಿ ದರ್ಶನ ಪಡೆಯಬಹುದಾಗಿದೆ

45
ಸಾತೇರಿ ದೇವಿಗೆ ಭಕ್ತರಿಂದ ಉಡಿ ತುಂಬುವುದು

ಹರಕೆಯ ರೂಪದಲ್ಲಿ ಸಾತೇರಿ ದೇವಿಗೆ ಭಕ್ತರು ಉಡಿ ತುಂಬುವ ಸೇವೆ ನೀಡುತ್ತಾರೆ. ದೇವಿಯಲ್ಲಿ ಸಂತಾನ ಪ್ರಾಪ್ತಿಗಾಗಿ ಹರಕೆ ಹೊತ್ತರೆ ಒಂದೇ ವರ್ಷದಲ್ಲಿ ಮಕ್ಕಳಾಗಿರುವ ಸಾಕಷ್ಟು ನಿದರ್ಶನಗಳಿವೆ. ಇದೇ ಕಾರಣಕ್ಕೆ ಭಕ್ತಾದಿಗಳು, ಅಕ್ಕಿ, ಸೀರೆ, ಅರಿಶಿನ‌, ಕುಂಕುಮ, ಬಳೆ‌ಗಳನ್ನು ಸಾತೇರಿ ದೇವಿಗೆ ಉಡಿ ತುಂಬಿ‌ ಹರಕೆ‌ ತೀರಿಸುತ್ತಾರೆ.

55
ಸಾತೇರಿ ದೇವಾಲಯಕ್ಕಿದೆ ಜಾನಪದ ಇತಿಹಾಸ

ಅಂದಹಾಗೆ ಸುಮಾರು 300 ವರ್ಷಗಳ ಹಿಂದೆ ಹಣಕೋಣ ಗ್ರಾಮದಲ್ಲಿ‌ ಸಾತೇರಿ ಎಂಬ ಶಕ್ತಿರೂಪಿ‌ ಮಹಿಳೆ ಇದ್ದಳು. ಈ ಶಕ್ತಿ ಸ್ವರೂಪಿ ಮಹಿಳೆ ದೇವಾಲಯದ‌ ಎರುರಿನ ಬಾವಿಯಲ್ಲಿ‌ ಸ್ನಾನ ಮಾಡುವಾಗ ಪುರುಷನೊಬ್ಬನ‌ ವಕ್ರ ದೃಷ್ಟಿಯಿಂದ ತಪ್ಪಿಸಿ ಕೊಳ್ಳಲು ಬಾವಿಗೆ ಹಾರಿ‌ ಅದೃಶಳಾದಳು ಎಂಬ ಜಾನಪದವಿದೆ.

Read more Photos on
click me!

Recommended Stories