ತುರಹಳ್ಳಿ ಫಾರೆಸ್ಟ್ ನಲ್ಲಿ ಟ್ರೀ ಪಾರ್ಕ್ ನಿರ್ಮಾಣಕ್ಕೆ ತೀವ್ರ ವಿರೋಧ

First Published Feb 14, 2021, 3:57 PM IST

ತುರಹಳ್ಳಿ ಫಾರೆಸ್ಟ್ ನಲ್ಲಿ ಟ್ರೀ ಪಾರ್ಕ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ರಸ್ತೆಗಿಳಿದು ಕಾಡು ರಕ್ಷಣೆಗೆ ಮುಂದಾಗಿದ್ದಾರೆ. ವಾಕಥಾನ್ ಮೂಲಕ‌ ಟ್ರೀ ಪಾರ್ಕ್ ಗೆ ತೀರ್ವ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 400 ಎಕರೆಯಲ್ಲಿ ಟ್ರೀ ಪಾರ್ಕ್ ನಿರ್ಮಿಸುವ  ಯೋಜನೆ ಇದ್ದು ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ತುರಹಳ್ಳಿ ಫಾರೆಸ್ಟ್ ನಲ್ಲಿ ಟ್ರೀ ಪಾರ್ಕ್ ನಿರ್ಮಾಣಕ್ಕೆ ತೀವ್ರ ವಿರೋಧ.ರಸ್ತೆಗಿಳಿದು ಕಾಡು ರಕ್ಷಣೆಗೆ ಮುಂದಾದ ತುರಹಳ್ಳಿ ಸ್ಥಳೀಯರು
undefined
ವಾಕಥಾನ್ ಮೂಲಕ‌ ಟ್ರೀ ಪಾರ್ಕ್ ಗೆ ತೀರ್ವ ವಿರೋಧ.ಕಳೆದ ವಾರವೂ ಪ್ರತಿಭಟನೆ ನೆಡೆಸಿದ್ದ ಸ್ಥಳೀಯರು.ತುರಹಳ್ಳಿ ಅರಣ್ಯವನ್ನ ಟ್ರೀ ಪಾರ್ಕ್ ಮಾಡಲು ಮುಂದಾದ ಅರಣ್ಯ ಇಲಾಖೆ
undefined
ಬೆಂಗಳೂರಿನ ಬನಶಂಕರಿ 6ನೇ ಹಂತ ಬಳಿಯ ತುರಹಳ್ಳಿ .ಸುಮಾರು 597 ಎಕರೆ 19 ಗುಂಟೆ ವಿಸ್ತೀರ್ಣವಿರುವ ತುರಹಳ್ಳಿ ಅರಣ್ಯ.ಈಗ 400 ಎಕರೆ ವಿಸ್ತೀರ್ಣದಲ್ಲಿ ಟ್ರೀ ಪಾರ್ಕ್ ಮಾಡಲು ಅರಣ್ಯ ಇಲಾಖೆ ಪ್ಲಾನ್.ಈಗಾಗಲೇ 2011ರಲ್ಲಿ 35 ಎಕರೆ ವಿಸ್ತೀರ್ಣದಲ್ಲಿ ಟ್ರೀ ಪಾರ್ಕ್ ಮಾಡಲಾಗಿದೆ.ಅದನ್ನೇ ಅರಣ್ಯ ಇಲಾಖೆ ಅಭಿವೃದ್ದಿ ಮಾಡಿಲ್ಲ
undefined
ಮತ್ಯಾಕೇ ಬೇಕು ಮತ್ತೊಂದು ಟ್ರೀ ಪಾರ್ಕ್ ಎಂದು ಸ್ಥಳೀಯರ ಪ್ರಶ್ನೆ.ತುರಹಳ್ಳಿ ಅರಣ್ಯದಲ್ಲಿ 120ಕ್ಕೂ ಹೆಚ್ಚು ಬಗೆಯ ಪ್ರಾಣಿ-ಪಕ್ಷಿಗಳಿವೆ.ಪ್ರಾಣಿ ಸಂಕುಲ ನಾಶವಾಗುತ್ತೆ ಅಂತಿರೋ ಸ್ಥಳೀಯರು.ಮರಗಳನ್ನ ಕಡಿಯದೆ ಟ್ರೀ ಪಾರ್ಕ್ ಮಾಡ್ತೇವೆ ಅಂತಿದೆ ಅರಣ್ಯ ಇಲಾಖೆ.ಮರಗಳನ್ನ ಕಡಿಯದೆ ವಾಹನ ಪಾರ್ಕಿಂಗ್, ಟಿಕೆಟ್ ಕೌಂಟರ್ ಗಳನ್ನ ಮಾಡಲು ಹೇಗೆ ಸಾಧ್ಯ..?ಯಾವುದೇ ಕಾರಣಕ್ಕೂ ಟ್ರೀ ಪಾರ್ಕ್ ಮಾಡಲು ಅವಕಾಶ ಕೊಡೊಲ್ಲ ಅಂತಿರೋ ಸ್ಥಳೀಯರು
undefined
ಮ್ಯಾರಥಾನ್ ನಲ್ಲಿ ತುರಹಳ್ಳಿಯ ಮಕ್ಕಳು, ಹಿರಿಯ ನಾಗರೀಕರು ಭಾಗಿ.2 ಸಾವಿರಕ್ಕೂ ಅಧಿಕ ಜನರು ವಾಕಥಾನ್ ನಲ್ಲಿ ಭಾಗಿ.ಟ್ರೀ ಪಾರ್ಕ್ ನಲ್ಲಿ ಏನೇನ್ ಮಾಡೋಕೆ ಅರಣ್ಯ ಇಲಾಖೆ ಮುಂದಾಗಿದೆ..?ಕ್ಯಾಂಟೀನ್, ವಾಹನಗಳ ಪಾರ್ಕಿಂಗ್, ಟಿಕೆಟ್ ಕೌಂಟರ್, ಮಕ್ಕಳ‌ ಆಟದ ಮೈದಾನ, ಸೇರಿದಂತೆ ಹಲವು ಯೋಜನೆಗಳನ್ನ ಕೈಗೆತ್ತಿಕೊಳ್ಳಲಿರುವ ಅರಣ್ಯ ಇಲಾಖೆ
undefined
click me!