ಬಂದವರು ಸುಮ್ಮನೆ ಇರಲಿಲ್ಲ. ಪತಿ ಶಿವರಾಜ್ ಮಾತ್ರವಲ್ಲದೆ, ಅವರ ವಯಸ್ಸಾದ ತಂದೆ ದೇವಿಂದ್ರಪ್ಪ, ತಾಯಿ ಲಕ್ಷ್ಮಿ ಮತ್ತು ಸಹೋದರ ವೆಂಕಟೇಶ್ ಮೇಲೆಯೂ ಭೀಕರವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೀಗರಿಂದಲೇ ಬೀಗರ ಮೇಲೆ ನಡೆದ ಈ ದಾಳಿಯಿಂದ ಇಡೀ ಕುಟುಂಬ ಕಂಗಾಲಾಗಿದೆ.
ಈ ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡ ಶಿವರಾಜ್ ತಂದೆ ದೇವಿಂದ್ರಪ್ಪ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ರಾಯಚೂರಿನಿಂದ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪತ್ನಿ ಶೋಭಾ ಸೇರಿದಂತೆ ಐವರ ವಿರುದ್ಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶೋಭಾ, ರಂಜಿತ್ ಕುಮಾರ್, ತಾಯಣ್ಣಗೌಡ, ಅಕ್ಷಯ್ ಕುಮಾರ್ ಹಾಗೂ ಈರಣ್ಣಗೌಡ ಎಂಬುವವರ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಒಂದು ಹೊತ್ತಿನ ಅಡುಗೆಯ ಜಗಳ, ಇಂದು ನ್ಯಾಯಾಲಯ, ಪೊಲೀಸ್ ಮೆಟ್ಟಿಲೇರುವಂತೆ ಮಾಡಿದೆ ಎಂಥಾ ಕರ್ಮ!