ಕಾರ್ಖಾನೆ ಆವರಣದಲ್ಲಿರುವ ವಿವಿಧ ಘಟಕಗಳಲ್ಲಿ ಆಕ್ಸಿಜನ್ ಉತ್ಪಾದನೆ ಹಾಗೂ ಟ್ಯಾಂಕರ್‌ಗಳಿಗೆ ಆಕ್ಸಿಜನ್ ಭರ್ತಿ ಮಾಡುವ ಪ್ರಕಿಯೆಯನ್ನು ಶನಿವಾರ ಪರಿಶೀಲಿಸಿ ಆಕ್ಸಿಜನ್ ಉತ್ಪಾದನೆಯ ಮಾಹಿತಿ ಪಡೆದುಕೊಂಡ ಸಚಿವ ಜಗದೀಶ್ ಶೆಟ್ಟರ್
ಜಿಂದಾಲ್ ಸೇರಿದಂತೆ ರಾಜ್ಯದ ಇತರ ಉದ್ದಿಮೆಗಳಿಗೂ ವೈದ್ಯಕೀಯ ಬಳಕೆಯ ಆಕ್ಸಿಜನ್ ಉತ್ಪಾದನಾ ಪ್ರಮಾಣ ಹೆಚ್ಚಿಸುವಂತೆ ಸೂಚಿಸಲಾಗಿದೆ. ಭದ್ರಾವತಿ, ರಾಯಚೂರು, ಕೊಪ್ಪಳದಲ್ಲಿ ಸ್ಥಗಿತವಾಗಿರುವ ಆಕ್ಸಿಜನ್ ಉತ್ಪಾದಿಸುವ ಕೈಗಾರಿಕೆಗಳನ್ನು ಪುನಃ ಆರಂಭಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ ಶೆಟ್ಟರ್
ಜಿಂದಾಲ್ ಕಾರ್ಖಾನೆಯು ಪ್ರತಿನಿತ್ಯ 900 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸುತ್ತಿದ್ದು, ಅದರಲ್ಲಿ ರಾಜ್ಯಕ್ಕೆ ಪ್ರತಿನಿತ್ಯ 650 ಮೆಟ್ರಿಕ್ ಟನ್ ಇಲ್ಲಿಂದ ಸರಬರಾಜಾಗುತ್ತಿದೆ. ಜಿಂದಾಲ್‌ನ ಇತರೆ ಸ್ಟೀಲ್ ಉತ್ಪಾದನಾ ಕಾರ್ಯಗಳಿಗೆ ಆಕ್ಸಿಜನ್ ಕಡಿಮೆ ಮಾಡಿ, ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಆಕ್ಸಿಜನ್ ಉತ್ಪಾದನೆ ಮಾಡಿ ನೀಡುವಂತೆ ತಿಳಿಸಲಾಗಿದ್ದು ಅವರು ಒಪ್ಪಿಕೊಂಡಿದ್ದಾರೆ ಎಂದ ಸಚಿವರು
ರಾಜ್ಯದಲ್ಲಿರುವ ಈಗಿನ ಸೊಂಕಿನ ಲಕ್ಷಣಗಳನ್ನು ಗಮನಿಸಿದರೆ ನಿತ್ಯ 1700 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ. ಕೇಂದ್ರ ಸರ್ಕಾರಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ಹಂಚಿಕೆ ಮಾಡುವಂತೆ ಕೋರಿಕೊಳ್ಳಲಾಗಿದೆ. ಅಷ್ಟುಪ್ರಮಾಣದಲ್ಲಿ ರಾಜ್ಯಕ್ಕೆ ಸರಬರಾಜದಲ್ಲಿ ಉತ್ತಮ ರೀತಿಯಿಂದ ನಿರ್ವಹಣೆ ಮಾಡಬಹುದಾಗಿದೆ ಎಂದು ತಿಳಿಸಿದರು.