ಕನಕನ ಕಿಂಡಿಯಲ್ಲಿ ಕೃಷ್ಣನ ಕಂಡು ಧನ್ಯರಾದ ಪ್ರಧಾನಿ ಮೋದಿ: ಕೃಷ್ಣ ದರ್ಶನದ ಅಪರೂಪದ ಕ್ಷಣಗಳು

Published : Nov 28, 2025, 12:46 PM IST

ಪ್ರಧಾನಿ ನರೇಂದ್ರ ಮೋದಿಯವರು ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿ, ಕನಕನ ಕಿಂಡಿಯ ಮೂಲಕ ಕೃಷ್ಣ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರು ಸ್ವರ್ಣ ಲೇಪಿತ ತೀರ್ಥ ಮಂಟಪವನ್ನು ಉದ್ಘಾಟಿಸಿ, ಲಕ್ಷಕಂಠ ಭಗವದ್ಗೀತಾ ಸಮಾವೇಶದಲ್ಲಿ ಭಾಗವಹಿಸಿದರು. 

PREV
111

ಪ್ರಧಾನಿ ಆದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕದ ಕರಾವಳಿ ಹಾಗೂ ಕೃಷ್ಣನ ಊರು ಉಡುಪಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದರ್ಶನ ಮಾಡಿದರು.

211

ಈ ವೇಳೆ ಅವರು ಸ್ವರ್ಣ ಲೇಪಿತ ತೀರ್ಥ ಮಂಟಪ ಉದ್ಘಾಟನೆ ಕೂಡ ಮಾಡಿದ್ದಾರೆ. ಪುತ್ತಿಗೆ ಸ್ವಾಮೀಜಿಯವರ ಸನ್ಯಾಸ ಜೀವನದ 50ನೇ ವರ್ಷ ಪೂರ್ಣವಾದ ಹಿನ್ನಲೆಯಲ್ಲಿ ಎರಡು ಕೋಟಿ ವೆಚ್ಚದಲ್ಲಿ ತೀರ್ಥ ಮಂಟಪಕ್ಕೆ ಸ್ವರ್ಣ ಲೇಪನ ಮಾಡಲಾಗಿದೆ. ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಲಾಯಿತು. ಮಠಾಧೀಶರು ಗಣ್ಯರು ಈ ವೇಳೆ ಉಪಸ್ಥಿತರಿದ್ದರು.ಅದಾದ ಬಳಿಕ ಮೋದಿ ಮುಖ್ಯಪ್ರಾಣ ದೇವರ ಗರುಡ ದೇವರ ದರ್ಶನ ಮಾಡಿದ್ದಾರೆ.

311

ಆ ಬಳಿಕ ಮಠಾಧೀಶರೊಂದಿಗೆ ಪ್ರಧಾನಿ ಮೋದಿ ಮಾತುಕತೆ ಮಾಡಿದರು. ಮಠದ ಪರಿಸರದಲ್ಲಿ ವೈದಿಕರಿಂದ ಉಪನಿಷತ್ತು, ವೇದ, ಗೀತೆ ಪಠಣ ಮಾಡಲಾಗುತ್ತಿತ್ತು.

411

ದೇವರ ಮುಂದೆ ಪ್ರಧಾನಿ ಮೋದಿಯವರಿಗೆ ಕೃಷ್ಣದೇವರ ಪ್ರಸಾದ ವಿತರಣೆ ಮಾಡಲಾಯಿತು. ಆಚಾರ್ಯ ಮಧ್ವರು ಕುಳಿತ ಪೀಠವಾದ ಸರ್ವಜ್ಞ ಪೀಠ ವೀಕ್ಷಣೆ ಮಾಡಿದರು. ಪರ್ಯಾಯ ಪುತ್ತಿಗೆ ಸ್ವಾಮೀಜಿಗಳು ಆಸೀನರಾಗಿದ್ದರು. ಬಳಿಕ ಭೋಜನ ಶಾಲೆಯ ಮುಖ್ಯ ಪ್ರಾಣ ದೇವರು, ಮಠದೊಳಗಿನ ವಿವಿಧ ಗುಡಿಗಳ ದರ್ಶನ ಮಾಡಿದರು.

511

ಮಠದ ಬಳಿಕ ಮೋದಿನ ಗೀತಾ ಮಂದಿರದ ಬಳಿ ತೆರಳಿದರು.ಈ ವೇಳೆ ವಿವಿಧ ವಾದ್ಯಗಳನ್ನು ಕಲಾವಿದರು ಪ್ರದರ್ಶನ ಮಾಡಿದ್ದಾರೆ. ಗೀತಾ ಮಂದಿರದಲ್ಲಿ ನೂತನ ಅನಂತಪದ್ಮನಾಭ ದೇವರ ಪ್ರತಿಮೆ ಅನಾವರಣ ಮಾಡಿದರು. ಧ್ಯಾನ ಮಂದಿರ ದ ಗೋಡೆಯ ಶಿಲೆಯಲ್ಲಿ ಭಗವದ್ಗೀತೆ ಬರಹವನ್ನು ಕೆತ್ತಲಾಗಿದೆ. ಈ ಧ್ಯಾನ ಮಂದಿರವನ್ನು ಮೋದಿ ವೀಕ್ಷಣೆ ಮಾಡಿದರು.

611

ಈ ಹಂತದಲ್ಲಿ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪುತ್ತಿಗೆ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಶಿರೂರು ವೇದವರ್ಧನ ತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

711

ಉಡುಪಿ ಕೃಷ್ಣ ಮಠದಿಂದ ಲಕ್ಷಕಂಠ ಭಗವದ್ಗೀತಾ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅತಿಥಿಯಾಗಿ ಆಗಮಿಸಿದ್ದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಮೋದಿಗ ಅವರಿಗೆ ಸ್ವಾಗತ ಕೋರಲಾಯಿತು. ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕೂಡ ಭಾಗಿಯಾಗಿದ್ದರು.

811

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೂಟ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ. ಉಡುಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಿವಮೊಗ್ಗ ಸಂಸದ ರಾಘವೇಂದ್ರ, ಶಾಸಕರಾದ ಸುನೀಲ್ ಕುಮಾರ್, ಯಶ್ ಪಾಲ್ ಸುವರ್ಣ ಸೇರಿ ಹಲವರು ಉಪಸ್ಥಿತರಿದ್ದರು.

911

ದೇವರ ದರ್ಶನದ ಬಳಿಕ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ಮೋದಿ ಭಾಗಿಯಾದರು. ಸಾವಿರಾರು ಭಕ್ತರು ವೇದಿಕೆಯ ಕೆಳ ಭಾಗದಲ್ಲಿ ಸ್ತೋತ್ರ ಪಠಣ ಮಾಡಿದರು.

1011

ಇದೇ ವೇಳೆ ಮೋದಿ ಕನಕದಾಸರ ವಿಗ್ರಹಕ್ಕೆ ಹೂಮಾಲೆ ಹಾಕಿ ಗೌರವಿಸಿದರು. ಕನಕನ ಕಿಂಡಿಯ ಮೇಲಿರುವ ಶ್ರೀ ಕೃಷ್ಣನ ಮೂರ್ತಿಗೆ ನಮಸ್ಕಾರ ಮಾಡಿದ ಬಳಿಕ ಮೋದಿ ಹಣೆಗೆ ತಿಲಕವಿಟ್ಟು ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಪ್ರಸಾದ ನೀಡಿದರು. ತೀರ್ಥದ ಜೊತೆ ತುಳಸಿ ಮಣಿಯನ್ನು ನೀಡಿದ ಸುಗುಣೇಂದ್ರ ತೀರ್ಥ ಸ್ವಾಮೀಜಿ ನೀಡಿದರು.

1111

ನರೇಂದ್ರ ಮೋದಿಗೆ ಮಾಧ್ವ ಸಂಪ್ರದಾಯದ ತಿಲಕ ಹಾಕಲಾಗಿತ್ತು. ಅಂಗಾರಕ ಅಕ್ಷತೆಯನ್ನು ಪುತ್ತಿಗೆ ಶ್ರೀ ಇರಿಸಿದರು. ಹೋಮದ ಮಸಿಯಲ್ಲಿ ತಯಾರಿಸಿರುವ ವಿಶೇಷ ತಿಲಕ ಇದು.

Read more Photos on
click me!

Recommended Stories