ಕೊಪ್ಪಳ(ಏ.23): ಇಂದಿನಿಂದ ರಾಜ್ಯಾದ್ಯಂತ ಸ್ವಲ್ಪ ಮಟ್ಟಿಗೆ ಲಾಕ್‌ಡೌನ್ ಸಡಿಲಿಕೆ ಆಗಿದೆ. ಆದರೆ, ಇದನ್ನೆ ನೆಪವಾಗಿಟ್ಟುಕೊಂಡು ಅನಗತ್ಯವಾಗಿ ರಸ್ತೆಗಿಳಿದ ವಾಹನ ಸವಾರರಿಗೆ ಪೊಲೀಸರು ವಿನೂತನವಾಗಿ ಶಿಕ್ಷೆ ಕೊಟ್ಟ ಘಟನೆ ಇಂದು(ಗುರುವಾರ) ನಡೆದಿದೆ. ಹೌದು, ಅನಗತ್ಯವಾಗಿ ಮನೆಯಿಂದ ಆಚೆ ಬಂದವರಿಗೆ ಪೊಲೀಸರು ಸ್ಪೆಷಲ್ ಪಿಪಿಇ ಕಿಟ್ ಹಾಕಿದ್ದಾರೆ.