ಬಳ್ಳಾರಿ(ಏ.23): ಕೊರೋನಾ ಸೋಂಕಿತರಾಗಿ ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಜನರಲ್ಲಿ ಮೂವರು ಗುಣಮುಖರಾಗಿದ್ದು, ಅವರನ್ನು ಇಂದು(ಗುರುವಾರ) ಜಿಲ್ಲಾ ಮಟ್ಟದ ಕೋವಿಡ್-19 ಸಲಹಾ ಸಮಿತಿ ನಿರ್ಣಯದ ಅನುಸಾರ ಡಿಸ್ಚಾರ್ಜ್ ಮಾಡಲಾಗಿದೆ. ಕೋವಿಡ್ ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆಯೇ ವಿಜಯದ ಸಂಕೇತ ತೋರಿಸಿದ್ದಾರೆ.