ಮೈಸೂರಿನ ಅವಧೂತದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ 78ನೇ ಜಯಂತಿಯು ಮೇ 26 ರಂದು ಸರಳವಾಗಿ ನಡೆದಿದೆ.
ಶ್ರೀಗಳು ತಮ್ಮ ಜೀವಿತಾವಧಿ ಪೂರಾ ಜಾತ್ಯತೀತ ಮತ್ತು ಸಾಮಾಜಿಕ ತತ್ವಾಧಾರಿತದಲ್ಲಿ ತಮ್ಮ ಆಧ್ಯಾತ್ಮಿಕ ಚಿಂತನ ದೃಷ್ಟಿಹರಿಸುತ್ತಾ ಬಂದಿದ್ದಾರೆ.
ಜಗತ್ತಿನಲ್ಲಿರುವ ಅವರ ಎಲ್ಲ 87 ಆಶ್ರಮಗಳು ಇದೇ ಜಾತ್ಯತೀತ ತತ್ವಾಧಾರಿತದಲ್ಲೆ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುತ್ತಾ ಬಂದಿವೆ.
ಮೇ 26 ರಂದು ಶ್ರೀಗಳು ತಮ್ಮ 78ನೇ ಜಯಂತಿಯನ್ನು ಕೊರೋನಾ ಲಾಕ್‌ಡೌನ್ ಕಾರಣದಿಂದ ಸರಳವಾಗಿ ಆಶ್ರಮದಲ್ಲೆ ಆಚರಿಸಿಕೊಂಡಿದ್ದಾರೆ.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕೊರೋನಾ ವಿಮುಕ್ತಿಗಾಗಿ ಪ್ರತಿದಿನ ವಿಶೇಷ ಪೂಜೆ ಹಾಗೂ ಹೋಮಗಳನ್ನು ಮಾಡಿದ್ದಾರೆ.
ಕಳೆದ 50 ದಿನಗಳಿಂದ ಸಂಕಷ್ಟದಲ್ಲಿರುವ ಬಡವರು, ಆಟೋ ಚಾಲಕರು, ಅಸಂಘಟಿತ ವರ್ಗದವರಿಗೆ ಆಹಾರದ ದಿನಸಿ ಕಿಟ್‌ಗಳನ್ನು ಆಶ್ರಮದ ವತಿಯಿಂದ ವಿತರಿಸಿದ್ದಾರೆ. ಶ್ರೀಗಳ 78ನೇ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ರಾಘವೇಂದ್ರ ಪ್ರತಿಷ್ಠಾನದ ಅಧ್ಯಕ್ಷ ಎಸ್. ನಾಗರಾಜ ಶುಭಾಶಯ ಕೋರಿದ್ದಾರೆ.