ಶ್ರೀನಿವಾಸ ಗೌಡಗೆ ಪೈಪೋಟಿ ಕೊಟ್ಟ ಸುರೇಶ್ ಶೆಟ್ಟಿ ಕಳೆದ ಸಾಲಿನ ವೇಗಿ..!

First Published | Feb 20, 2020, 4:01 PM IST

ಕಂಬಳ ಕ್ರೀಡೆಯಲ್ಲಿ ಸಾಧನೆ ಮಾಡಿ ಈ ವರ್ಷ ಕಂಬಳಗದ್ದೆಯ ‘ಉಸೇನ್ ಬೋಲ್ಟ್’ ಎನಿಸಿಕೊಂಡ ಶ್ರೀನಿವಾಸ ಗೌಡ ಹಾಗೂ ನಿಶಾಂತ್ ಶೆಟ್ಟಿ ದಾಖಲೆ ಬರೆದರೆ, ಇದಕ್ಕೂ ಮೊದಲೇ ಕಳೆದ ವರ್ಷ ಕಂಬಳದಲ್ಲಿ ಹಕ್ಕೇರಿ ಸುರೇಶ್ ಶೆಟ್ಟಿ ಎಂಬವರು 2019ರಲ್ಲಿ ವೇಗದ ಓಟದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಫೋಟೋಸ್ ಇಲ್ಲಿದೆ.

2019ರ ಫೆಬ್ರವರಿಯಲ್ಲಿ ಮಂಗಳೂರು ಸಮೀಪದ ಜೆಪ್ಪಿನಮೊಗರಿನಲ್ಲಿ ನಡೆದ ಜಯ-ವಿಜಯ ಜೋಡುಕರೆ ಕಂಬಳದಲ್ಲಿ ಹಕ್ಕೇರಿ ಸುರೇಶ್ ಶೆಟ್ಟಿ ಅವರು ಬೋಳಾರಗುತ್ತು ಜಗದೀಶ್ ಶೆಟ್ಟಿ ಅವರ ಕಾಲ ಮತ್ತು ದೋನಿ ಹೆಸರಿನ ಕೋಣಗಳನ್ನು ಶರವೇಗದಲ್ಲಿ ಓಡಿಸಿ ವೇಗದ ದಾಖಲೆ ಸ್ಥಾಪಿಸಿದ್ದರು.
undefined
12.76 ಸೆಕೆಂಡ್‌ನಲ್ಲಿ 131.25 ಮೀಟರ್ ಓಡಿ ಸುರೇಶ್ ಶೆಟ್ಟಿ ದಾಖಲೆಗೆ ಸಾಕ್ಷಿಯಾಗಿದ್ದಾರೆ.
undefined

Latest Videos


ಕಳೆದ ವರ್ಷವರೆಗೆ ಕಂಬಳದ ಓಟದಲ್ಲಿ ದಾಖಲೆ ಸ್ಥಾಪಿಸಿದರೂ ಅದನ್ನು ಕಂಬಳ ಸಮಿತಿ ಅಷ್ಟಾಗಿ ಗಮನಿಸದ ಕಾರಣ ಸುರೇಶ್ ಶೆಟ್ಟಿ ಅವರ ಹೆಸರು ಪ್ರಚಾರಕ್ಕೆ ಬಾರದೆ ಮರೆಗೆ ಸರಿದಿತ್ತು.
undefined
ಇದೀಗ ಶ್ರೀನಿವಾಸ ಗೌಡ ಹಾಗೂ ನಿಶಾಂತ್ ಶೆಟ್ಟಿ ಅವರು ಈ ಬಾರಿ ದಾಖಲೆ ಸ್ಥಾಪಿಸುತ್ತಿದ್ದಂತೆ ಸುರೇಶ್ ಶೆಟ್ಟಿ ಅವರ ಸಾರ್ವಕಾಲಿಕ ದಾಖಲೆ ಬೆಳಕಿಗೆ ಬರತೊಡಗಿದೆ. ಈ ಕುರಿತು ಜಾಲತಾಣಗಳಲ್ಲಿ ಅಂದಿನ ಕಂಬಳದ ಸೆಮಿಫೈನಲ್‌ನ ವಿಡಿಯೋ ಹಾಗೂ ಫೋಟೋಗಳು ಹರಿದಾಡಲಾರಂಭಿಸಿದೆ.
undefined
ಈ ವರ್ಷದ ಕಂಬಳದಲ್ಲಿ ಶ್ರೀನಿವಾಸ ಗೌಡ ಹಾಗೂ ನಿಶಾಂತ್ ಶೆಟ್ಟಿ ಅವರ ದಾಖಲೆ ಗಮನಾರ್ಹವಾದರೂ, ಅದಕ್ಕೂ ಮೊದಲೇ ಇವರಿಂಗಿತಲೂ ಕಡಿಮೆ ಅವಧಿಯಲ್ಲಿ ಸುರೇಶ್ ಶೆಟ್ಟಿ ದಾಖಲೆ ಬರೆದಿದ್ದರು.
undefined
ಸುರೇಶ್ ಶೆಟ್ಟಿ ಅವರು ಕೋಣಗಳನ್ನು ಓಡಿಸಿದ್ದು 137 ಮೀಟರ್ ಉದ್ದದ ಕರೆಯಲ್ಲಿ ಎಂಬುದು ಗಮನಾರ್ಹ.
undefined
ಕಂಬಳ ಗದ್ದೆಯ ದಾಖಲೆ ಓಟಗಾರ ಸುರೇಶ್ ಶೆಟ್ಟಿ ಅವರು ಈ ಬಾರಿ ಹುಸೇನ್ ಬೋಲ್ಟ್ ಎನಿಸಿಕೊಂಡ ಶ್ರೀನಿವಾಸ ಗೌಡರಿಗೆ ಅದೇ ಕರೆಯಲ್ಲಿ ಪೈಪೋಟಿ ನೀಡಿದ್ದರು. ಐಕಳ ಕಂಬಳದಲ್ಲಿ ಶ್ರೀನಿವಾಸ ಗೌಡ ಅವರು ಒಂದು ಕರೆಯಲ್ಲಿ 13.62 ಸೆಕೆಂಡ್‌ನಲ್ಲಿ 142.5 ಮೀಟರ್ ಓಡಿ ದಾಖಲೆ ಬರೆದರೆ, ಸುರೇಶ್ ಶೆಟ್ಟಿ ಅವರು ಇನ್ನೊಂದು ಕರೆಯಲ್ಲಿ 0.6 ಸೆಕೆಂಡ್ ಅಂತರದಲ್ಲಿ ಕ್ರಮಿಸಿ ದ್ವಿತೀಯ ಸ್ಥಾನಿಯಾಗಿದ್ದರು.
undefined
click me!