ಪೇಜಾವರ ಶ್ರೀಗಳ ಗೋಪ್ರೀತಿ ಎಲ್ಲರಿಗೂ ಗೊತ್ತಿದೆ. ಇದೇ ಕಾರಣಕ್ಕೆ ಅವರು ನೀಲಾವರದಲ್ಲಿ ಸಾವಿರಾರು ಗೋವುಗಳ ಗೋ ಶಾಲೆಯೊಂದನ್ನು ನಡೆಸುತ್ತಿದ್ದಾರೆ.
undefined
ಮಾತ್ರವಲ್ಲ ಈ ಬಾರಿ ತಮ್ಮ ಚಾತುರ್ಮಾಸ ವ್ರತವನ್ನು ಈ ಗೋಶಾಲೆಯಲ್ಲೇ ನಡೆಸುತ್ತಿದ್ದಾರೆ.
undefined
ಇಲ್ಲಿ ಅವರು ಪ್ರವಚನ ಮಾಡುವ ಸಂದರ್ಭ ಪುಟ್ಟಕರುವೊಂದು ಅವರನ್ನು ಪ್ರೀತಿಯಿಂದ ಮುದ್ದಾಡುವ ವೀಡಿಯೋ ಸದ್ಯ ವೈರಲ್ ಆಗುತ್ತಿದೆ.
undefined
ಶ್ರೀಗಳು ಸದಾ ಗೋಶಾಲೆಯ ಗೋವುಗಳ ಲಾಲನೆ ಪಾಲನೆಯಲ್ಲಿಯೇ ಆನಂದ ಕಾಣುತ್ತಾರೆ. ತಾವೇ ಗೋವುಗಳಿಗೆ ಮೇವು ಕೊಟ್ಟು, ಸೆಗಣಿ ಬಾಚುತ್ತಾರೆ.
undefined
ಅವುಗಳಿಗೆ ಸ್ನಾನ ಮಾಡಿಸುತ್ತಾರೆ, ಗೋಶಾಲೆ ತೊಳೆಯುತ್ತಾರೆ, ಹಾಲನ್ನೂ ಕರೆಯುತ್ತಾರೆ. ಆದ್ದರಿಂದಲೇ ಶ್ರೀಗಳನ್ನು ಕಂಡರೆ ಗೋವುಗಳಿಗೂ ಪ್ರೀತಿ. ಅವರು ಗೋಶಾಲೆಗೆ ಬರುತ್ತಿದ್ದಂತೆ ಅವರನ್ನು ಗೋವುಗಳು ಸುತ್ತುವರಿದು ಬರ ಮಾಡಿಕೊಳ್ಳುತ್ತವೆ.
undefined
ಈಗಂತೂ ಚಾತುರ್ಮಾಸ್ಯ ವ್ರತದ ಕಾರಣಕ್ಕೆ ಗೋಶಾಲೆಯಲ್ಲೇ ವಾಸ, ಪೂಜೆ, ಪ್ರವಚನ ನಡೆಸುತ್ತಿದ್ದಾರೆ.
undefined
ಅದರಂತೆ ಸಂಜೆ ಮಹಾಭಾರತದ ಪ್ರವಚನದ ವೇಳೆಯಲ್ಲಿ ಕರುವೊಂದು ಬಂದು ಸ್ವಾಮೀಜಿಯವರನ್ನು ಮುದ್ದಾಡತೊಡಗುತ್ತದೆ.
undefined
ಕೈಜೋಡಿಸಿ ದೇವರ ಸ್ತುತಿ ಮಾಡುತಿದ್ದ ಶ್ರೀಗಳ ಕರಗಳನ್ನು ನೆಕ್ಕುತ್ತದೆ, ಶ್ರೀಗಳ ಕೆನ್ನೆಗೆ ಮುತ್ತಿಟ್ಟು ಮುದ್ದಾಡುತ್ತದೆ.ಈ ಅನಿರೀಕ್ಷಿತ ಘಟನೆಯಿಂದ ವಿಚಲಿತರಾಗದ ಶ್ರೀಗಳು ತಮ್ಮ ಪ್ರವಚನ ಮುಂದುವರಿಸುತ್ತಾರೆ. ಈ ವಿಡಿಯೋ ಈ ಜಾಲತಾಣಗಳಲ್ಲಿ ವೈರಲ್ ಆಗಿದೆ.
undefined