ಹಾರಂಗಿ ಜಲಾಶಯ ಹಿನ್ನೀರಲ್ಲಿ ಗಾಳಕ್ಕೆ ಬಿತ್ತು ಬೃಹತ್ ಕಟ್ಲಾ ಮೀನು

First Published | Apr 30, 2020, 10:00 AM IST

ಕೊರೋನಾ ಲಾಕ್‌ಡೌನ್‌ ಮಧ್ಯೆ ಸಮಯ ಕಳೆಯಲು ಹಾರಂಗಿ ಹಿನ್ನೀರಿಗೆ ಗಾಳ ಹಾಕಲು ತೆರಳಿದ್ದ ಯುವಕರಿಗೆ ಬರೋಬ್ಬರಿ 38 ಕೆ.ಜಿ. ತೂಕದ ಭಾರಿ ಗಾತ್ರದ ಮೀನು ಸಿಕ್ಕಿದೆ. ಇಲ್ಲಿವೆ ಫೋಟೋಸ್

ಸಾಂಪ್ರದಾಯಿಕ ಶೈಲಿಯ ಗಾಳವನ್ನು ನಾಕೂರು ಬಳಿ ಹಿನ್ನೀರಿನಲ್ಲಿ ಬಿಟ್ಟು ಕುಳಿತಿದ್ದ ತಂಡದ ಪ್ರವೀಶ್‌ ಎಂಬವರಿಗೆ ತಮ್ಮ ಗಾಳವನ್ನು ನೀರೊಳಗೆ ಯಾರೋ ಬಲವಾಗಿ ಎಳೆದಂತಾಗಿದೆ. ಸ್ನೇಹಿತರ ಸಹಾಯದಿಂದ ಗಾಳವನ್ನು ನದಿಯಿಂದ ಮೇಲೆ ತರುತ್ತಿದ್ದಂತೆಯೇ ಬೃಹತ್‌ ಗಾತ್ರದ ಮೀನನ್ನು ನೋಡಿ ಶಾಕ್‌ ಆಗಿದ್ದಾರೆ.
ಕೊಡಗು ಜಿಲ್ಲೆಯ ಬಹುತೇಕ ಕಾಫಿ ತೋಟಗಳಲ್ಲಿ ಕೆರೆಗಳಿವೆ. ಕೆರೆಗಳಲ್ಲಿ ಕಾಟ್ಲಾ ಮತ್ತಿತರ ಮೀನುಗಳನ್ನು ಬೆಳೆಸುತ್ತಾರೆ. ಮೀನು ಕೃಷಿಗೆ ನಿರ್ವಹಣೆ ವೆಚ್ಚವೂ ತೀರಾ ಕಡಿಮೆ. ಲಾಕ್‌ಡೌನ್‌ ಆದ ಪರಿಣಾಮ ಜಿಲ್ಲೆಯಲ್ಲಿ ಮೀನು, ಮಾಂಸ ಮಾರಾಟವನ್ನು ಜಿಲ್ಲಾಡಳಿತ ನಿಷೇಧಿಸಿತ್ತು. ಈಗ ವಾರದಲ್ಲಿ ಮೂರು ದಿನ ಮೀನು ಮಾರಾಟಕ್ಕೆ ಅವಕಾಶ ನೀಡಿದೆ.
Tap to resize

ಕಾಟ್ಲಾ ಜಾತಿಗೆ ಸೇರಿದ ಮೀನು ಇದಾಗಿದ್ದು, ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಈವರೆಗೆ ಸಿಕ್ಕಿದ ದೊಡ್ಡ ಗಾತ್ರದ ಮೀನುಗಳಲ್ಲಿ ಇದೂ ಒಂದಾಗಿದೆ.
ಜಿಲ್ಲಾಡಳಿತದಿಂದ ಸ್ಥಳೀಯ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದ ಮೀನು ಕೃಷಿಕರು ತಮ್ಮ ಕೆರೆಗಳಲ್ಲಿ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದಾರೆ.
ಲಾಕ್‌ಡೌನ್‌ ಆದ ಪರಿಣಾಮ ಜಿಲ್ಲೆಯಲ್ಲಿ ಮೀನು, ಮಾಂಸ ಮಾರಾಟವನ್ನು ಜಿಲ್ಲಾಡಳಿತ ನಿಷೇಧಿಸಿತ್ತು. ಈಗ ವಾರದಲ್ಲಿ ಮೂರು ದಿನ ಮೀನು ಮಾರಾಟಕ್ಕೆ ಅವಕಾಶ ನೀಡಿದೆ.
ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಗಾಳ ಹಾಕಿದಾಗ ಕಟ್ಲಾ ಜಾತಿಗೆ ಸೇರಿದ ದೊಡ್ಡ ಮೀನು ಸಿಕ್ಕಿದೆ.

Latest Videos

click me!