ಗಲ್ಫ್‌ ಕನ್ನಡಿಗರ ಹೊತ್ತ 3ನೇ ವಿಮಾನ: 178 ಮಂದಿ ಆಗಮನ, ಇಲ್ಲಿವೆ ಫೊಟೋಸ್

First Published May 21, 2020, 9:42 AM IST

ವಂದೇ ಭಾರತ್‌ ಮಿಷನ್‌ ಕಾರ್ಯಾಚರಣೆಯಲ್ಲಿ ಏರ್‌ ಇಂಡಿಯಾ ವಿಮಾನ ಬುಧವಾರ ಗಲ್‌್ಫನಿಂದ ವಯಾ ಬೆಂಗಳೂರು ಮೂಲಕ ಮಂಗಳೂರಿಗೆ ರಾತ್ರಿ 8.10ಕ್ಕೆ ತಲುಪಿತು. ಇಲ್ಲಿವೆ ಫೋಟೋಸ್

ಮಸ್ಕತ್‌ನಿಂದ ಸಂಜೆ 3 ಗಂಟೆ ಸುಮಾರಿಗೆ ಹೊರಟ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ 817 ವಿಮಾನ, ಸಂಜೆ 6.30ಕ್ಕೆ ಬೆಂಗಳೂರು ತಲುಪಿತು. ಅಲ್ಲಿಂದ ರಾತ್ರಿ 7.15ಕ್ಕೆ ಹೊರಟು 8.10ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು.
undefined
ಈ ವಿಮಾನದಲ್ಲಿ ಒಟ್ಟು 178 ಪ್ರಯಾಣಿಕರ ಪೈಕಿ 115 ಮಂದಿ ಬೆಂಗಳೂರಿಗೆ ಹಾಗೂ 63 ಮಂದಿ ಮಂಗಳೂರಿಗೆ ಆಗಮಿಸಿದ್ದಾರೆ. ಅವರೆಲ್ಲರನ್ನು ನಿಗದಿತ ಸ್ಥಳಗಳಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.
undefined
mia
undefined
ವಿಮಾನದ ಕ್ಯಾಪ್ಟನ್‌ ಆಗಿದ್ದ ಮಂಗಳೂರಿನವರೇ ಆದ ಮೈಕಲ್‌ ಸಲ್ದಾನಾ ಅವರು 35 ಸಾವಿರ ಅಡಿ ಎತ್ತರದಲ್ಲಿ ಕಾಕ್‌ಪಿಟ್‌ನಲ್ಲೇ ಮಾತನಾಡಿ, ಮಸ್ಕತ್‌ನಿಂದ ಕರ್ನಾಟಕಕ್ಕೆ ಇದು ಪ್ರಥಮ ವಿಮಾನವಾಗಿದ್ದು, ಕೊರೋನಾದ ತಂದಿಟ್ಟಿರುವ ಈ ಸಂದಿಗ್ಧ ಸಮಯದಲ್ಲಿ ಎಲ್ಲ ಕಡೆಗಳಲ್ಲೂ ಇದೇ ರೀತಿಯ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದರು. ಜತೆಗೆ, ಕಾರ್ಯಾಚರಣೆಯ ಔಚಿತ್ಯವನ್ನೂ ವಿವರಿಸಿದರು.
undefined
ವಿಮಾನ ಮಂಗಳೂರಿನಲ್ಲಿ ಇಳಿದು ಏರೋಡ್ರಮ್‌ನಿಂದ ಆಗಮಿಸಿದ ಕೂಡಲೇ ಪ್ರಯಾಣಿಕರಿಗೆ ಮೊದಲಿಗೆ ಹಣ್ಣಿನ ಪೊಟ್ಟಣ ನೀಡಲಾಯಿತು. ಬಳಿಕ ಪ್ರಯಾಣಿಕರ ಥರ್ಮಲ್‌ ಸ್ಕಾ್ಯನಿಂಗ್‌ ನಡೆಸಲಾಯಿತು. ಅಲ್ಲಿಂದ ಮುಂದೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಪಿಪಿಇ ಕಿಟ್‌ ಧರಿಸಿದ ವಿಮಾನ ನಿಲ್ದಾಣ ಸಿಬ್ಬಂದಿ, ಅಶಕ್ತರ ಲಗೇಜು ಸಾಗಿಸಲು ನೆರವಾದರು.
undefined
click me!