Published : Jun 24, 2021, 12:20 PM ISTUpdated : Jun 24, 2021, 12:40 PM IST
ಗದಗ (ಜೂ.24): ನೊಣಗಳ ಕಾಟಕ್ಕೆ ತತ್ತರಿಸಿದ ಗ್ರಾಮಸ್ಥರ ಸಮಸ್ಯೆಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್‌ನಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಹೌದು, ನೊಣಗಳ ಕಾಟಕ್ಕೆ ಮುಕ್ತಿ ಹಾಡಲು ಹರ್ತಿ ಗ್ರಾಮ ಪಂಚಾಯ್ತಿಯಲ್ಲಿ ಇಂದು(ಗುರುವಾರ) ತುರ್ತು ಸಭೆ ನಡೆಸಲಾಗಿದೆ.