ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ: ಗಂಗಾವತಿ ಯುವಕನ ಫೋಟೋಗೆ ಚಿನ್ನ

First Published | Jun 24, 2021, 11:49 AM IST

ಗಂಗಾವತಿ(ಜೂ.24): ಭಾರತ, ಗಲ್ಫ್‌ ಸಮೂಹ ಬಹರೈನ್‌, ಯುಎಇ, ಸೌದಿ ಅರೇಬಿಯಾ, ಕುವೈತ್‌ ದೇಶಗಳ ಫೋಟೋಗ್ರಾಫಿಕ್‌ ಸೊಸೈಟಿಯವರು ಆಯೋಜಿಸಿದ್ದ ಪ್ರತಿಷ್ಠಿತ ಗಲ್ಫ್‌ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಗಂಗಾವತಿಯ ಶ್ರೀನಿವಾಸ ಎಣ್ಣಿ ಅವರಿಗೆ ಚಿನ್ನದ ಪದಕ ಲಭಿಸಿದೆ.

ಒಟ್ಟು 4 ವಿಭಾಗಗಳಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ(ಇದೇ ಚಿತ್ರಕ್ಕೆ ಲಭಿಸಿದ ಚಿನ್ನದ ಪದಕ)
ಟ್ರಾವೆಲ್‌ ವಿಭಾಗದ ವಾರಿ ಫೆಸ್ಟಿವಲ್ ಎಂಬ ಶೀರ್ಷಿಕೆಗೆ ಚಿನ್ನದ ಪದಕ ಮುಡಿಗೇರಿಸಿಕೊಂಡ ಶ್ರೀನಿವಾಸ ಎಣ್ಣಿ
Tap to resize

ಸ್ಪರ್ಧೆಯಲ್ಲಿ ಭಾಗವಹಿಸಿದ್ದ 48 ದೇಶಗಳಿಂದ 450 ಸ್ಪರ್ಧಿಗಳು
ಸ್ಪರ್ಧೆಯಲ್ಲಿ ತೀರ್ಪುಗಾರರಾಗಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಗಾರರಾದ ಓಲಾ ಅಲ್ಹೌಜ್‌, ಶಫೀಕ್‌ ಅಲ್‌ ಶಕೀರ್‌, ಅಮ್ಮರ್‌ ಅಲಾಮಿರ್‌, ನಜಾತ್‌ ಅಲ್‌ ಫರ್ಸಾನಿ
ಪ್ರಸ್ತುತ ಗಂಗಾವತಿಯ ಕೆಪಿಟಿಸಿಎಲ್‌ನಲ್ಲಿ ಕಿರಿಯ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿರುವ ಹವ್ಯಾಸಿ ಛಾಯಾಗ್ರಾಹಕ ಶ್ರೀನಿವಾಸ ಎಣ್ಣಿ
6 ವರ್ಷಗಳಿಂದ ಶ್ರೀನಿವಾಸ ಅವರ ಛಾಯಾಚಿತ್ರಗಳು ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ.

Latest Videos

click me!