ಉಡುಪಿಯ ಕನ್ನರ್ಪಾಡಿ ನಿವಾಸಿ ಶರಣ್ ಶೆಟ್ಟಿ ಮತ್ತು ನವ್ಯ ಶೆಟ್ಟಿ ಅವರು ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶುಭ ಸಂದರ್ಭದ ಸವಿನೆನಪಿಗಾಗಿ ಕಳೆದ 3 ದಶಕಗಳಿಂದ ವಿದ್ಯುತ್ ಸಂಪರ್ಕ ಇಲ್ಲದ ದಲಿತ ಸಮುದಾಯದ ಲೀಲಾ ಅವರ ಮನೆಗೆ ವಿದ್ಯುತ್ ಸಂಪರ್ಕವನ್ನು ಕೊಡುಗೆಯಾಗಿ ನೀಡಿದೆ,
undefined
ದಂಪತಿ ಸ್ವತಃ ಇಲ್ಲಿಗೆ ಬಂದರು ಸಂಪರ್ಕವನ್ನು ಉದ್ಘಾಟಿಸಿದರು.
undefined
ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದಈ ಮನೆಗೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಭಾನುವಾರ ಸಂಜೆ ಶರಣ್ - ನವ್ಯ ಅವರ ಮದುವೆ ಭಾಷೆಲ್ ಮಿಷನರಿ ಹಾಲಿನಲ್ಲಿ ನಡೆಯಿತು.
undefined
ನಂತರ ಅವರು ನೇರವಾಗಿ ಲೀಲಾ ಅವರ ಮನೆಗೆ ಆಗಮಿಸಿ ವಿದ್ಯುತ್ ಸಂಪರ್ಕವನ್ನು ಉದ್ಘಾಟಿಸಿದರು ಮತ್ತು ಅದಕ್ಕೆ ತಗಲಿದ ಸಂಪೂರ್ಣ ವೆಚ್ಚವನ್ನು ಆಸರೆ ಚಾರಿಟೇಬಲ್ ಟ್ರಸ್ಟ್ ಗೆ ಹಸ್ತಾಂತರಿಸಿದರು
undefined
ಈ ಸಂದರ್ಭದಲ್ಲಿ ಆಸರೆ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಕೆ .ರಾಘವೇಂದ್ರ ಕಿಣಿ ,ಕೋಶಾಧಿಕಾರಿ ಸತೀಶ್ ಕೆ ಕುಲಾಲ್, ಚೇತನ್ ಕುಮಾರ್, ಕನ್ನರ್ಪಾಡಿ, ಅನಿಲ್ ಶೇರಿಗಾರ್, ಓವಿನ್, ಅಶ್ವಿನ್ ಶೆಟ್ಟಿ, ಸ್ಥಳೀಯರಾದ ಅರುಣ.ಎಸ್ ಪೂಜಾರಿ, ಪ್ರಶಾಂತ್ ಪೆರಂಪಳ್ಳಿ, ಡೆನ್ನಿಸ್ ಪ್ರಸನ್ನ, ಆಕಾಶ್ ಪೂಜಾರಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಶ್ರೀಮತಿ ಯಶೋಧ ಮತ್ತು ನವದಂಪತಿಯ ಕುಟುಂಬಸ್ಥರು ಉಪಸ್ಥಿತರಿದ್ದರು.
undefined