Published : Dec 21, 2024, 01:41 PM ISTUpdated : Dec 21, 2024, 01:44 PM IST
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸರಣಿ ಅಪಘಾತದಲ್ಲಿ 2 ಲಾರಿ, 2 ಕಾರು ಮತ್ತು ಸ್ಕೂಲ್ ಬಸ್ ಒಳಗೊಂಡಿತ್ತು.
ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಭೀಕರ ಅಫಘಾತ ಸಂಭವಿಸಿದ್ದು, ಕಾರ್‌ನಲ್ಲಿದ್ದ ಎಲ್ಲಾ ಆರು ಮಂದಿ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ.
212
ಹೆದ್ದಾರಿಯಲ್ಲಿ 2 ಲಾರಿ, 2 ಕಾರು ಹಾಗೂ ಸ್ಕೂಲ್ ಬಸ್‌ನ ನಡುವೆ ಅಪಘಾತ ಸಂಭವಿಸಿದೆ. ಇದರಲ್ಲಿ KA 01 ND 1536 ನಂಬರ್‌ನ ವೋಲ್ವೋ ಕಾರ್‌ನಲ್ಲಿದ್ದ ಎಲ್ಲಾ 6 ಮಂದಿ ಅಪ್ಪಚ್ಚಿಯಾಗಿದ್ದಾರೆ.
312
ಪ್ರಾಥಮಿಕ ವರದಿಗಳ ಪ್ರಕಾರ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಈ ಹಂತದಲ್ಲಿ ಕಂಟೇನರ್ ಲಾರಿಯೊಂದು ತನ್ನ ಎದುರಿಗಿದ್ದ ವಾಹನಕ್ಕೆ ಗುದ್ದಿ ಪಲ್ಟಿಯಾಗಿದೆ. ಈ ಹಂತದಲ್ಲಿ ಕಂಟೇನರ್ ಲಾರಿಯ ಪಕ್ಕದಲ್ಲಿಯೇ ಇದ್ದ ವೋಲ್ವೋ ಕಾರ್‌ನ ಮೇಲೆ ಇದು ಉರುಳಿಬಿದ್ದಿದೆ.
412
ಕಂಟೇನರ್ ಲಾರಿ ಉರುಳಿಬಿದ್ದ ರಭಸಕ್ಕೆ ಕಾರ್‌ನಲ್ಲಿದ್ದ ಎಲ್ಲಾ ಆರು ಮಂದಿ ಅಪ್ಪಚ್ಚಿಯಾಗಿದ್ದಾರೆ. ಇವರನ್ನು 42 ವರ್ಷದ ಗೌರಾಬಾಯಿ, 12 ವರ್ಷದ ದೀಕ್ಷಾ, 16 ವರ್ಷದ ಧ್ಯಾನ್ ಹಾಗೂ 6 ವರ್ಷದ ಆರ್ಯ ಎಂದು ಗುರುತಿಸಲಾಗಿದ್ದು, ಉಳಿದವರ ಪತ್ತೆ ಕಾರ್ಯ ನಡೆಯುತ್ತಿದೆ.
512
ಮಹಾರಾಷ್ಟ್ರ ಮೂಲದ ಇಂಜಿನಿಯರ್ ಆಗಿರುವ ಚಂದ್ರಮ್ ಅವರ ಕುಟುಂಬವಾಗಿದೆ. ಐಎಎಸ್‌ಟಿ ಸಲ್ಯೂಷನ್ ಎನ್ನುವ ಸಾಫ್ಟ್‌ವೇರ್ ಕಂಪನಿಯನ್ನು ಚಂದ್ರಮ್ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
612
ಸರಣಿ ಅಪಘಾತದ ಕಾರಣಕ್ಕೆ ತುಮಕೂರು-ಬೆಂಗಳೂರು ಹೈವೇಯಲ್ಲಿ ಅಂದಾಜು 3 ಕಿಲೋಮೀಟರ್‌ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಅಪಘಾತಗೊಂಡ ವಾಹನ
712
ಮೃತ 6 ಜನರಲ್ಲಿ ಮಹಾರಾಷ್ಟ್ರ ಮೂಲದ ಚಂದ್ರಮ್ ಯಗಪಗೋಲ್ ಕೂಡ ಸೇರಿದ್ದಾರೆ. IAST ಸಾಫ್ಟ್‌ವೇರ್ ಸಲ್ಯೂಷನ್‌ನ ಎಂಡಿ, ಸಿಇಒ ಆಗಿ ಚಂದ್ರಮ್ ಕೆಲಸ ಮಾಡುತ್ತಿದ್ದರು.
812
ಆಟೋಮೋಟಿವ್, ಎಂಬೆಡೆಡ್ ಸಾಫ್ಟ್‌ವೇರ್ ಡೆವಲ್ಪಮೆಂಟ್‌ನಲ್ಲಿ ಅನುಭವ ಹೊಂದಿದ್ದ ಚಂದ್ರಮ್, ಕೇವಲ ಎರಡು ತಿಂಗಳ ಹಿಂದೆಯಷ್ಟೇ ಹೊಸ ಕಾರ್‌ಅನ್ನು ಖರೀದಿ ಮಾಡಿದ್ದರು.
912
18 ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಚಂದ್ರಮ್, ಎಲೆಕ್ಟ್ರಿಕ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಸುರತ್ಕಲ್‌ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದಿದ್ದಾರೆ.
1012
ವೀಕೆಂಡ್ ಪ್ರವಾಸಕ್ಕಾಗಿ ಇಡೀ ಕುಟುಂಬ ಬೆಂಗಳೂರಿಗೆ ತೆರಳಿತ್ತು. ಎರಡು ತಿಂಗಳ ಹಿಂದೆಯಷ್ಟೇ ಹೊಸ ವೋಲ್ವೋ ಕಾರು ಖರೀದಿ ಮಾಡಿದ್ದುರ ಎನ್ನಲಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿಕೆ ಬಾಬಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
1112
ಕಾರಿನೊಳಗೆ ಸಿಕ್ಕಿಬಿದ್ದ ಶವವನ್ನು ಹರಸಾಹಸ ಪಟ್ಟು ಹೊರತೆಗೆಯಲಾಗಿದೆ. ಯಾರೊಬ್ಬರು ಕನಿಷ್ಠ ಆಸ್ಪತ್ರೆಗೆ ಸಾಗಿಸುವಷ್ಟೂ ಜೀವಂತವಾಗಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತರು ಮಹಾರಾಷ್ಟ್ರ ಮೂಲದವರು ಎಂದು ತಿಳಿಸಲಾಗಿದ್ದು, ಮಹಾರಾಷ್ಟ್ರ ಸಾಂಗಲಿ ಜಿಲ್ಲೆ ಜತ್ ತಾಲೂಕಿ ಮೊರಬಗಿ ಗ್ರಾಮದವರು ಎನ್ನಲಾಗಿದೆ. ಸದ್ಯ ಮೊರಬ ಗ್ರಾಮದಲ್ಲಿ ಮೃತನ ತಂದೆ ತಾಯಿ ಮಾತ್ರ ವಾಸಮಾಡುತ್ತಿದ್ದರು.