Nelamangala Accident: ಮುಂದಿದ್ದ ಕಾರ್‌ನಿಂದ ಹೀಗೆ ಆಯ್ತು, ನನಗೆ ತುಂಬಾ ನೋವು ಆಗ್ತಿದೆ: ಚಾಲಕ ಆರಿಫ್‌

First Published | Dec 21, 2024, 5:41 PM IST

ಕಾರ್ ಮೇಲೆ‌ ನನ್ನ ಲಾರಿ ಪಲ್ಟಿಯಾಗಿತ್ತು. ನಾನು ಕಾರನ್ನ‌ ಬಚಾವ್ ಮಾಡಲು ಹೋದೆ.  ಮುಂದೆ  ಡಿವೈಡರ್ ಮೇಲೆ ಹತ್ತಿ ಲಾರಿ ಪಲ್ಟಿ ಆಯ್ತು, ಮುಂದೆ ಕಾರ್ ಮತ್ತೆ ಕಂಟೇನರ್ ಇತ್ತು. ಕಂಟೇನರ್ ಟಚ್ ಆಗಿ ನನ್ನ ಲಾರಿ ಪಲ್ಟಿ ಹೊಡೆದಿದೆ. 6 ಮಂದಿ ಸಾವು ಕಂಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಕಂಟೇನರ್‌ ಚಾಲಕ ಆರಿಫ್‌ ಹೇಳಿದ್ದಾನೆ. 

ಬೆಂಗಳೂರು (ಡಿ.21): ನೆಲಮಂಗಲದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ದಾರುಣ ಅಂತ್ಯ ಕಂಡ ಚಂದ್ರಮ್ ಯಾಗಪ್ಪಗೋಳ್ ಒಬ್ಬ ಐಟಿ ಉದ್ಯಮಿ. ಬೆಂಗಳೂರಿನಲ್ಲಿ ಕಂಪನಿಯೊಂದರ ಮಾಲೀಕರಾಗಿದ್ದ ಇವರು, 50ಕ್ಕೂ ಹೆಚ್ಚು ಮಂದಿಗೆ ಉದ್ಯೋಗದಾತರಾಗಿದ್ದರು. ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತವಾಯಿತು. ಕಂಟೇನರ್ ಲಾರಿ ಕಾರಿನ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ದುರಂತ ಸಾವಿಗೀಡಾದರು. 

ಇದರ ನಡುವೆ ಆಸ್ಪತ್ರೆಗೆ ದಾಖಲಾಗಿರುವ ಕಂಟೇನರ್‌ ಚಾಲಕ್‌ ಆರಿಫ್‌ ನೆಲಮಂಗಲದಲ್ಲಿ ಅಪಘಾತ ಹೇಗಾಯ್ತು ಅನ್ನೋದರ ವಿವರವನ್ನು ನೀಡಿದ್ದಾರೆ. 'ದಾಬಸ್‌ಪೇಟೆಯಿಂದ ಬೆಂಗಳೂರಿನ ಬೈಪಾಸ್‌ ಕಡೆಗೆ ಬರ್ತಿದ್ದೆ ಬಲಬದಿಯಿಂದ ಗಾಡಿ ತೆಗೆದುಕೊಂಡು ಹೋಗುತ್ತಿದ್ದೆ ಎಂದು ಕಂಟೇನರ್‌ ಚಾಲಕ ಆರಿಫ್‌ ಹೇಳಿದ್ದಾನೆ. 

Tap to resize

ಈ ವೇಳೆ ನನ್ನ ಎದುರುಗಡೆ ನಾನು ಗಾಡಿಯನ್ನು ನೋಡಿದೆ. ನಾನು ನಿಧಾನ, ನಿಧಾನವಾಗಿ ಬ್ರೇಕ್‌ ಹಾಕುತ್ತಲೇ ಹೋದೆ. ನನ್ನ ಎದುರಿಗೆ ಇದ್ದ ಕಾರ್‌ನವನು ಅರ್ಜೆಂಟ್‌ ಆಗಿ ಬ್ರೇಕ್‌ ಹಾಕಿ ಬಿಟ್ಟ. ನನ್ನ ಮುಂದಿದ್ದ ಕಾರ್‌ಗೆ ಗುದ್ದಬಾರದು, ಅವನನ್ನು ಸೇಫ್‌ ಮಾಡಲು ಹೋಗಿ, ಸ್ಟೇರಿಂಗ್‌ ಅನ್ನು ಬಲಗಡೆಗೆ ಎಳೆದುಕೊಂಡೆ ಎಂದು ಹೇಳಿದ್ದಾರೆ. 
 

ಈ ವೇಳೆ ಇನ್ನೊಂದು ಕಡೆಯಿಂದಲೂ ದೊಡ್ಡ ಕ್ಯಾಂಟರ್‌ ಬರುತ್ತಿರೋದನ್ನು ನೋಡಿದೆ.  ಟ್ರಕ್‌ಗೆ ಗುದ್ದಬಾರದು ಎಂದು ಮತ್ತೊಮ್ಮೆ ಸ್ಟೇರಿಂಗ್‌ ಲೆಫ್ಟ್‌ಗೆ ಎಳೆದುಕೊಂಡೆ, ಈ ವೇಳೆ ಲಾರಿ ಡಿವೈಡರ್ ದಾಟಿ ಮುಂದಿನ ರಸ್ತೆಗೆ ಪಲ್ಟಿ ಆಯ್ತು.  ನನ್ನ ಮುಂದಿದ್ದ ಕಾರ್‌ನಿಂದ ಹೀಗೆ ಆಯ್ತು. ನನಗೆ ತುಂಬಾ ನೋವು ಆಗ್ತಿದೆ. ಅಲ್ಲಿ ಏನ್ ಆಯ್ತು ಅಮೇಲೆ ಅನ್ನೋದು ಗೊತ್ತಿಲ್ಲ. 

ಕಾರ್ ಮೇಲೆ‌ ನನ್ನ ಲಾರಿ ಪಲ್ಟಿಯಾಗಿತ್ತು. ನಾನು ಕಾರನ್ನ‌ ಬಚಾವ್ ಮಾಡಲು ಹೋದೆ. ಮುಂದೆ  ಡಿವೈಡರ್ ಮೇಲೆ ಹತ್ತಿ ಲಾರಿ ಪಲ್ಟಿ ಆಯ್ತು, ಮುಂದೆ ಕಾರ್ ಮತ್ತೆ ಕಂಟೇನರ್ ಇತ್ತು. ಕಂಟೇನರ್ ಟಚ್ ಆಗಿ ನನ್ನ ಲಾರಿ ಪಲ್ಟಿ ಹೊಡೆದಿದೆ. 6 ಮಂದಿ ಸಾವು ಕಂಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
 

ಚಂದ್ರಮ್‌ ಮೂಲತಃ ಮಹಾರಾಷ್ಟ್ರದವರಾಗಿದ್ದು, ಅವರ ಕುಟುಂಬ ವಿಜಯಪುರದಲ್ಲಿ ನೆಲೆಸಿದೆ. ಮಹಾರಾಷ್ಟ್ರದ ಸಾಂಗ್ಲಿಯ ಮೊರಬಗಿಯವರಾಗಿದ್ದು, ಅವರ ತಂದೆ-ತಾಯಿ ಅಲ್ಲಿಯೇ ನೆಲೆಸಿದ್ದಾರೆ. ಇಲ್ಲಿಯವರೆಗೂ ತಮ್ಮ ಮಗ, ಸೊಸೆ, ಮೊಮ್ಮಕ್ಕಳು, ಮಗಳು ಹಾಗೂ ಆಕೆಯ ಮಗ ಸಾವು ಕಂಡಿರುವ ಸುದ್ದಿ ವೃದ್ಧ ತಂದೆ ತಾಯಿಗೆ ತಿಳಿದಿಲ್ಲ.
 

Latest Videos

click me!