ಮೈಸೂರು ರಾಜವಂಶಸ್ಥರ ಕುಟುಂಬದಲ್ಲಿ ಸಂಭ್ರಮ…. ಯದುವೀರ್‌ ಒಡೆಯರ್‌ 2ನೇ ಮಗುವಿನ ಅದ್ಧೂರಿ ತೊಟ್ಟಿಲ ಶಾಸ್ತ್ರ

First Published | Dec 11, 2024, 2:36 PM IST

ಮೈಸೂರು ರಾಜವಂಶಸ್ಥರ ಕುಟುಂಬದಲ್ಲಿ ಮೈಸೂರು ದಸಾರ ಸಂಭ್ರಮದಂದು ಯದುವೀರ್ ಒಡೆಯರಿಗೆ ಎರಡನೇ ಮಗು ಜನಿಸಿದ್ದು, ಇದಿಗ ಎರಡು ತಿಂಗಳ ಬಳಿಕ ಅದ್ಧೂರಿಯಾಗಿ ತೊಟ್ಟಿಲು ಶಾಸ್ತ್ರ ಮಾಡಿದ್ದಾರೆ. 
 

ಮೈಸೂರು ಒಡೆಯರ (Mysore Wadiyar) ಕುಟುಂಬದಲ್ಲಿ ಈ ವರ್ಷದ ನಾಡಹಬ್ಬ ದಸರಾ ಸಂದರ್ಭದಲ್ಲಿ ಹಬ್ಬದ ಸಡಗರದ ಜೊತೆಗೆ ಮತ್ತೊಂದು ಸಂಭ್ರಮವನ್ನು ಸಂಭ್ರಮಿಸಿದ್ದರು.  ಯದುವೀರ್ ಒಡೆಯರ್ ಮತ್ತು ತ್ರಿಷಿಕಾ ದೇವಿ ಒಡೆಯರ್ ದಂಪತಿಗಳಿಗೆ ಎರಡನೇ ಮಗು ಜನಿಸಿತ್ತು. ಇದೀಗ ಎರಡು ತಿಂಗಳ ಬಳಿಕ ತಮ್ಮ ಎರಡನೇ ಮಗುವಿನ ತೊಟ್ಟಿಲ ಶಾಸ್ತ್ರವನ್ನು ಕುಟುಂಬಸ್ಥರ ಜೊತೆಗೆ ಶಾಸ್ತ್ರ ಬದ್ಧವಾಗಿ ಸಂಭ್ರಮದಿಂದ ನಡೆಸಲಾಗಿದೆ. 
 

ಮಗುವಿಗೆ ಎರಡು ತಿಂಗಳು ಪೂರ್ಣಗೊಂಡಿದ್ದು, ಇದೀಗ ಇಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ (Chamundi Hills)ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ತೊಟ್ಟಿಲು ಶಾಸ್ತ್ರ ಹಾಗೂ ವಿವಿಧ ಪೂಜೆಗಳನ್ನು ಕುಟುಂಬದ ಸದಸ್ಯರು ನೆರವೇರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ 
 

Tap to resize

ಯದುವೀರ್‌ ಒಡೆಯರ್‌ (Yaduveer Wadiyar), ತ್ರಿಷಿಕಾದೇವಿ ಒಡೆಯರ್‌, ಪ್ರಮೋದಾದೇವಿ ಒಡೆಯರ್‌, ಆದ್ಯವೀರ್‌ ಒಡೆಯರ್‌ ಕುಟುಂಬ ಸಮೇತರಾಗಿ ಚಾಮುಂಡಿಬೆಟ್ಟಕ್ಕೆ ತಮ್ಮ ಪುಟ್ಟ ಕಂದನೊಂದಿಗೆ ಆಗಮಿಸಿ ತಮ್ಮ ಮನೆದೇವ್ರಾದ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಜೊತೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಸಂಭ್ರಮದಿಂದ ದೇವಿ ಸಾನಿಧ್ಯದಲ್ಲಿ ನಡೆದಿದೆ. 
 

ಚಾಮುಂಡೇಶ್ವರಿ ಸನ್ನಿಧಿಯ ಆವರಣದಲ್ಲಿರುವ ಮರಕ್ಕೆ ತೊಟ್ಟಿಲನ್ನು ಕಟ್ಟಿ, ಅಲ್ಲಿ ಪುಟ್ಟ ಕಂದನ ತೊಟ್ಟಿಲ ಶಾಸ್ತ್ರ ನೆರವೇರಿಸಲಾಗಿದೆ. ಹೂವುಗಳಿಂದ ಅಲಂಕೃತವಾದ ತೊಟ್ಟಿಲಿನಲ್ಲಿ ಪುಟ್ಟ ರಾಜಕುಮಾರ ಆಡುತ್ತಿರೋದನ್ನು ಕಾಣಬಹುದು. ಪುರೋಹಿತರು ವಿವಿಧ ವಿಧಿ ವಿಧಾನವನ್ನು ನೆರವೇರಿಸುತ್ತಿದ್ದಾರೆ. 
 

ಕುಟುಂಬದ ಸದಸ್ಯರೆಲ್ಲರೂ  ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು. ಮಹಾರಾಜರಾದ ಯದುವೀರ್ ಒಡೆಯರ್ ಗ್ರೇ ಬಣ್ಣದ ಕುರ್ತಾ ಧರಿಸಿದ್ದು, ತಲೆಗೆ ಪೇಟ ಧರಿಸಿದ್ದರೆ, ರಾಣಿ ತ್ರಿಷಿಕಾದೇವಿ ಹಸಿರು ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಹಿರಿಯ ಮಗ ಆಧ್ಯವೀರ್ ಕ್ರೀಂ ಬಣ್ಣದ ಕುರ್ತಾ, ಪೇಟ ಧರಿಸಿ, ಮುದ್ದಿನ ತಮ್ಮನ ಜೊತೆ ಆಡುತ್ತಿರೋದನ್ನ ಕಾಣಬಹುದು. ಜೊತೆಗೆ ರಾಜಮಾತೆ ಪ್ರಮೋದ ದೇವಿ ಕೂಡ ಮಗುವಿನ ಜೊತೆ ಇರೋದನ್ನು ಕಾಣಬಹುದು. 
 

ಆರು ವರ್ಷದ ಹಿಂದೆ ಯದುವೀರ್ ಒಡೆಯರ್ ಗೆ ಮೊದಲ ಮಗ ಆದ್ಯವೀರ್ ಜನಿಸಿದಾಗಲೂ ತೊಟ್ಟಿಲು ಶಾಸ್ತ್ರವನ್ನು ಮೈಸೂರು ಯದುವಂಶಸ್ಥರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನೆರವೇರಿಸಿದ್ದರು.  ಸದ್ಯದಲ್ಲೇ ಎರಡನೇ ಮಗುವಿನ ನಾಮಕರಣ ಶಾಸ್ತ್ರ ಕೂಡ ಮಾಡಲು ಸಿದ್ಧತೆ ನಡೆಯುತ್ತಿದೆ. 
 

Latest Videos

click me!