ಎಂಎಸ್ಸಿ ಪದವೀಧರೆಗೆ ಸಚಿವ ಈಶ್ವರಪ್ಪ ಉದ್ಯೋಗದ ಭರವಸೆ

First Published | Jun 13, 2020, 6:22 PM IST

ಚಿತ್ರದುರ್ಗ:ಲಾಕ್ ಡೌನ್ ಆದಾಗಿನಿಂದ ತೀವ್ರ ಸಂಕಷ್ಟಕ್ಕೊಳಗಾಗಿರುವ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಸಮೀಪದ ಅಂಜಿನಾಪುರದಲ್ಲಿ ಎಂ.ಎಸ್ಸಿ ಪದವೀಧರೆ ದೀಪಶ್ರೀ ಎಂಬ ಯುವತಿ ನರೇಗಾ ಯೋಜನೆಯಲ್ಲಿ ನಡೆಯುತ್ತಿರುವ ಕೂಲಿ ಕೆಲಸ ಮಾಡಲು ಪೋಷಕರೊಂದಿಗೆ ಬರುತ್ತಿದ್ದಾರೆ. ಇದನ್ನು ಗಮನಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪಧವಿಧರೆಯ ಕೆಲಸವನ್ನು ಮೆಚ್ಚಿ, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗಣಿತ ವಿಷಯದಲ್ಲಿ ಎಂ.ಎಸ್ಸಿ ಮಾಡಿರುವ ದೀಪಶ್ರೀ ಅವರ ತಂದೆ-ತಾಯಿಯೊಂದಿಗೆ ನಿತ್ಯ ಬದು ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
undefined
ಈ ವೇಳೆ ಸಚಿವರು ಯಾಕಮ್ಮ ಕೂಲಿ ಕೆಲಸ ಮಾಡ್ತಿದ್ದೀಯ ನಿನಗೆ ಸರ್ಕಾರಿ ಉದ್ಯೋಗ ಮಾಡುವ ಗುರಿ ಇಲ್ವಾ ಎಂದಾಗ,ಮುಂಬರುವ ಜೀವನದಲ್ಲಿ 'ಉಪನ್ಯಾಸಕಿ ಆಗುವ ಬಯಕೆ ಇದೆ ಅಂತ ಪ್ರತಿಕ್ರಿಯಿಸಿದ್ದಾಳೆ.
undefined

Latest Videos


ಕೊರೊನಾ ಸಂಕಷ್ಟದ ಕಾಲದಲ್ಲಿ ತಂದೆ-ತಾಯಿಗೆ ನೆರವಾಗುವ ಉದ್ದೇಶದಿಂದ ನರೇಗಾ ಕೂಲಿ ಕೆಲಸ ಮಾಡುತ್ತಿದ್ದೇನೆ' ಎಂದು ದೀಪಶ್ರೀ ತಿಳಿಸಿದರು.
undefined
ಇನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಶುಕ್ರವಾರ ಸಂಜೆ ನರೇಗಾ ಕಾಮಗಾರಿ ವೀಕ್ಷಿಸುವಾಗ ವಿದ್ಯಾರ್ಥಿನಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
undefined
'ಕೊರೊನಾ ಬಿಕ್ಕಟ್ಟು ಮುಗಿದ ನಂತರ ವಿದ್ಯಾರ್ಥಿನಿಗೆ ನನ್ನನ್ನು ಸಂಪರ್ಕಿಸಲು ವ್ಯವಸ್ಥೆ ಮಾಡಿ ಯಾವುದಾದರೂ ಉದ್ಯೋಗ ಕೊಡಿಸುತ್ತೇನೆ' ಎಂದು ಸಚಿವರು ಜಿಲ್ಲಾ ಪಂಚಾಯಿತಿ ಸಿಇಒ ಯೋಗೀಶ್ ಅವರಿಗೆ ಸೂಚಿಸಿದರು.
undefined
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಸಮೀಪದ ಅಂಜಿನಾಪುರದಲ್ಲಿ ಎಂ.ಎಸ್ಸಿ ಪದವೀಧರೆ ದೀಪಶ್ರೀ
undefined
click me!