Mandya: ಎರಡು ಮಕ್ಕಳ ತಂದೆಯೊಂದಿಗೆ 19ರ ಯುವತಿ ಲವ್; ಮಗಳೊಂದಿಗೆ ನೇಣು ಬಿಗಿದುಕೊಂಡ ಅಮ್ಮ

Published : Feb 09, 2026, 02:32 PM IST

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ, ಮದುವೆ ಸಿದ್ಧತೆಯಲ್ಲಿದ್ದ ಪ್ರಿಯಾಂಕ (19) ಮತ್ತು ಆಕೆಯ ತಾಯಿ ಶಕುಂತಲಾದೇವಿ (46) ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ವಿವಾಹಿತನೊಂದಿಗಿನ ಮಗಳ ಪ್ರೀತಿಯ ವಿಷಯ ತಿಳಿದು, ಮರ್ಯಾದೆಗೆ ಹೆದರಿ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.

PREV
15
ತಾಯಿ-ಮಗಳು ಆತ್ಮಹ*ತ್ಯೆ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ತಾಯಿ-ಮಗಳು ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಮೃತರರನ್ನು ಶಕುಂತಲಾದೇವಿ (46), ಪ್ರಿಯಾಂಕ (19) ಎಂದು ಗುರುತಿಸಲಾಗಿದೆ. ಮಗಳ ಮದುವೆಗೆ ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

25
34 ವರ್ಷದ ಮುತ್ತುರಾಜ್‌ ಜೊತೆ ಲವ್

ಕೋಡಿಹಳ್ಳಿ ಗ್ರಾಮದ ನಿವಾಸಿಯಾದ ಪ್ರಿಯಾಂಕಾ ಅದೇ ಊರಿನ ವಿವಾಹಿತ ಮುತ್ತುರಾಜ್ ಎಂಬಾತನನ್ನು ಪ್ರೀತಿಸುತ್ತಿದ್ದಳು. 34 ವರ್ಷದ ಮುತ್ತುರಾಜ್‌ ಎರಡು ಮಕ್ಕಳ ತಂದೆಯಾಗಿದ್ದು, ಆಗಾಗ ಪ್ರಿಯಾಂಕಾ ಮನೆಗೆ ಬಂದು ಹೋಗುತ್ತಿದ್ದನು. ತಮ್ಮದೇ ಊರಿನವನಾಗಿದ್ದರಿಂದ ಮುತ್ತುರಾಜ್‌ ಆಗಮನದ ಬಗ್ಗೆ ಪ್ರಿಯಾಂಕಾ ಕುಟುಂಬಸ್ಥರಿಗೆ ಅನುಮಾನ ಬಂದಿರಲಿಲ್ಲ.

35
ಮದುವೆಗೆ ಸಿದ್ಧತೆ

ಕೆಲ ದಿನಗಳ ಹಿಂದೆಯಷ್ಟೇ ಪೋಷಕರಿಗೆ ಮಗಳ ಪ್ರೀತಿಯ ವಿಷಯ ಗೊತ್ತಾಗಿತ್ತು. ಪ್ರತಿದಿನ ಮನೆಗೆ ಬರುತ್ತಿದ್ದ ಮುತ್ತುರಾಜ್‌ಗೂ ಪೋಷಕರು ಬೈದು ಬುದ್ಧಿ ಹೇಳಿದ್ದರು. ಮಗಳಿಗೂ ಆತನಿಂದ ದೂರವಿರುವಂತೆ ವಾರ್ನಿಂಗ್ ನೀಡಿದ್ದರು. ಈ ವಿಷಯ ತಿಳಿದ ಬೆನ್ನಲ್ಲೇ ಪ್ರಿಯಾಂಕಾಗೆ ಮದುವೆ ಮಾಡಲು ಪೋಷಕರು ಮುಂದಾಗಿದ್ದರು.

ಇದನ್ನೂ ಓದಿ: ಮಂಡ್ಯದಲ್ಲಿ ಬಾರ್ ಲೈಸೆನ್ಸ್‌ಗೆ ₹60 ಲಕ್ಷ ಲಂಚಕ್ಕೆ ಬೇಡಿಕೆ; ಅಬಕಾರಿ ಡಿಸಿ ನಾಗಶಯನ ಸಸ್ಪೆಂಡ್!

45
ದೂರು ದಾಖಲು

ಮದುವೆಗೆ ಗಂಡು ಹುಡುಕಿದ ನಂತರವೂ ಪ್ರಿಯಾಂಕಾ-ಮುತ್ತುರಾಜ್ ಲವ್ ಮುಂದುವರಿದಿತ್ತು. ಇದೀಗ ಮರ್ಯಾದೆಗೆ ಹೆದರಿ ಮಗಳು ಮತ್ತು ಪತ್ನಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನ ಚಡ್ಡಿ ಕತ್ತರಿಸಿ 45 ಲಕ್ಷ ಮೌಲ್ಯದ ಚಿನ್ನ ಹೊರತೆಗೆದ ಕಸ್ಟಮ್ಸ್ ಅಧಿಕಾರಿಗಳು

55
ಪೊಲೀಸರಿಂದ ತನಿಖೆ ಆರಂಭ

ಈ ಸಂಬಂಧ ಪ್ರಿಯಾಂಕಾ ತಂದೆ ಮಹೇಶ್‌ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Mandya: ಪಂಚಾಯ್ತಿಗೆ ಬರುತ್ತಿದ್ದಂತೆ 3 ದಿನದಲ್ಲಿ 54 ಲಕ್ಷ ಮಾಯ ಮಾಡಿದ ಪಿಡಿಒ ಶ್ರೀನಿವಾಸಯ್ಯ

Read more Photos on
click me!

Recommended Stories