ಜೆಸಿಬಿ ಆಪರೇಟರ್‌ ಸನ್ಮಾನಿಸಿದ ಶಾಸಕ ಶಾಂತಾರಾಮ ಸಿದ್ಧಿ

First Published | Jul 25, 2021, 10:02 PM IST

ಯಲ್ಲಾಪುರ(ಜು. 25)  ತಾಲೂಕಿನ ರಾಷ್ಟೀಯ ಹೆದ್ದಾರಿ ಅರಬೈಲ್ ಹತ್ತಿರ ಗುಡ್ಡ ಕುಸಿತ ಹಾಗೂ ರಸ್ತೆ ಕುಸಿದ ಪ್ರದೇಶಕ್ಕೆ  ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ  ಜೆಸಿಬಿ ಆಪರೇಟರ್ ರನ್ನು ಸನ್ಮಾನಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನಲ್ಲಿ ಮಳೆ ಅಪಾರಹಾನಿ ಮಾಡಿದೆ.
ಜೀವದ ಹಂಗು ತೋರೆದು ಕುಸಿದ ಮಣ್ಣನ್ನು ನಿರಂತರವಾಗಿ ತೆರವುಗೊಳಿಸುತ್ತಿರುವ ಜೆಸಿಬಿ ಆಪರೇಟರ್ನ್ನು ಅವರನ್ನುಅಭಿನಂದಿಸಿ ಮುನ್ನೆಚ್ಚರಿಕೆ ವಹಿಸಿ ಕಾರ್ಯಮಾಡುವಂತೆ ಸಿದ್ದಿ ಸೂಚಿಸಿದರು.
Tap to resize

ನಂತರ ಮಳೆಯ ರಭಸಕ್ಕೆ‌ ಕೊಚ್ವಿ ಹೋದ ಗುಳ್ಳಾಪುರ ಸೇತುವೆ ವಿಕ್ಷಣೆ ಮಾಡಿ,ಕಾಗೇರಿ ಪೆಟ್ರೋಲ್ ಬಂಕಗೆ ಭೇಟಿ ‌ನೀಡಿ ಹಾನಿಯ ಬಗ್ಗೆ ಪರಿಶಿಲಿಸಿ, ಗುಳ್ಳಾಪುರದಲ್ಲಿ ನಿರ್ಮಿಸಿರುವ ಸಾಂತ್ವನ ಕೇಂದ್ರ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಭಾಜಪ ಉತ್ತರಕನ್ನಡ ಜಿಲ್ಲಾ ಎಸ್.ಟಿ‌ ಮೊರ್ಚ್ ಕಾರ್ಯದರ್ಶಿಗಳಾದ ಸುರೇಶ ಸಿದ್ದಿ ,ಜೀವನ‌ವಿಕಾಸ ಟ್ರಸ್ಟ್ ನ ಕಾರ್ಯನಿರ್ವಾಹಕರಾದ ಪ್ರಥಮ್ ನಾಯ್ಕ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಹಾನಿ ಪ್ರದೇಶ ವೀಕ್ಷಣೆ

Latest Videos

click me!