ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ಕೋವಿಡ್ ವಾರ್‌ರೂಂಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಬೆಡ್ ಹಂಚಿಕೆ ಮಾಡುವಲ್ಲಿ ಅಧಿಕಾರಿಗಳು ತಾರತಮ್ಯ ಎಸಗುತ್ತಿದ್ದು, ಬೆಂಗಳೂರು ಕೇಂದ್ರ ವಲಯದಲ್ಲಿ ಪ್ರತಿ ನಿತ್ಯ ವಿತರಣೆ ಮಾಡುವ ಪ್ರತಿ ಬೆಡ್ ಬಗೆಗಿನ ಮಾಹಿತಿಯನ್ನು ವಿವರಿಸಬೇಕು ಎಂದು ಸೂಚಿಸಿದರು.
undefined
ಜನಗಳ ಪ್ರಾಣ ರಕ್ಷಿಸುವುದಷ್ಟೆ ಅಧಿಕಾರಿಗಳ ಕರ್ತವ್ಯ. ಬಡವರು, ಶ್ರೀಮಂತರು ಎಂಬ ತಾರತಮ್ಯ ಬಿಟ್ಟು ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಂಡು ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಅಲ್ಲದೆ, ಗಂಭೀರ ಪ್ರಕರಣಗಳಿಗೆ ಮೊದಲ ಆದ್ಯತೆ ನೀಡಬೇಕು. ಗುಣಮಟ್ಟದ ಚಿಕಿತ್ಸೆ ನೀಡಿ ರೋಗಿಗಳನ್ನು ಗುಣಮುಖರನ್ನಾಗಿ ಮಾಡಲು ಶ್ರಮಿಸಬೇಕು ಎಂದು ನಿರ್ದೇಶಿಸಿದರು.
undefined
ಭಾನುವಾರದಿಂದ ಕೇಂದ್ರ ವಲಯದಲ್ಲಿ 280 ಬೆಡ್ ಹಂಚಿಕೆಯಾಗಿದೆ. ಅವುಗಳ ಮಾಹಿತಿಯನ್ನು ತಮಗೆ ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ವಾರ್ ರೂಂನಿಂದ ಬಿಬಿಎಂಪಿ ಸಹಾಯವಾಣಿಗೆ ದೂರವಾಣಿ ಕರೆ ಮಾಡಿ ಅದರ ಕಾರ್ಯವೈಖರಿ ಪರಿಶೀಲಿಸಿದರು.
undefined
ಈ ವೇಳೆ, ವಾರ್ ರೂಂನಲ್ಲಿ ಹಾಜರಿದ್ದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಸಹಾಯವಾಣಿ 550 ಲೈನುಗಳನ್ನು ಹೊಂದಿದೆ. ಅಷ್ಟೂ ಸಂಪರ್ಕಗಳಿಗೆ ಉತ್ತರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರಿಗೆ ವಿವರಿಸಿದರು.
undefined
ಗೋವಿಂದರಾಜನಗರ ವಿಧಾನಸಭಾ ವ್ಯಾಪ್ತಿಯ ವಿಜಯನಗರದ ಕಚೇರಿಯಲ್ಲಿ ಕೊರೋನಾ ಚಿಕಿತ್ಸೆಗೆ ಸಂಬಂಧಿಸಿದಂತೆ ವೈದ್ಯರು ಹಾಗೂ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು. ಕ್ಷೇತ್ರದ ವ್ಯಾಪ್ತಿಯಲ್ಲಿನ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರನ್ನು ಎಚ್ಚರಿಕೆಯಿಂದ ಗಮನಿಸಲು ಹಾಗೂ ಆಮ್ಲಜನಕ ಕೊರತೆಯಾಗದಂತೆ ಎಚ್ಚರಿಕೆಯಿಂದಿರಲು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ, ವಲಯ ಆಯುಕ್ತ ಬಸವರಾಜು, ಡಿಸಿಪಿ ಸಂಜೀವ್ ಪಾಟೀಲ್ ಸೇರಿದಂತೆ ಹಲವು ಅಧಿಕಾರಿಗಳಿದ್ದರು.
undefined