ಕಸಾಯಿಖಾನೆಗೆ ಸಾಗಿಸುವ ಹಸುಗಳಿಗೆ ಇಲ್ಲಿ ರಕ್ಷಣೆ : 700 ಹಸುಗಳಿಗಿಲ್ಲಿ ಆರೈಕೆ

First Published Nov 17, 2020, 12:07 PM IST


 ವಿಜಯಪುರ ಜಿಲ್ಲೆಯ ಪ್ರವಾಸದಲ್ಲಿರುವ ಪಶುಸಂಗೋಪನಾ‌ ಸಚಿವ ಪ್ರಭು ಚವ್ಹಾಣ  ಕಗ್ಗೊಡ ಗೋರಕ್ಷಕ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.  
ಅತ್ಯಂತ ಅದ್ಭುತವಾಗಿ ಗೋಶಾಲೆವನ್ನು ನಿರ್ವಹಣೆ ಮಾಡಿರುವುದನ್ನು ಕಂಡು ಸಚಿವರು ಸಂತೋಷ ವ್ಯಕ್ತಪಡಿಸಿದ್ದಾರೆ. 

ವಿಜಯಪುರ ಜಿಲ್ಲೆಯ ಪ್ರವಾಸದಲ್ಲಿರುವ ಪಶುಸಂಗೋಪನಾ‌ ಸಚಿವ ಪ್ರಭು ಚವ್ಹಾಣ ಕಗ್ಗೊಡ ಗೋರಕ್ಷಕ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಅತ್ಯಂತ ಅದ್ಭುತವಾಗಿ ಗೋಶಾಲೆವನ್ನು ನಿರ್ವಹಣೆ ಮಾಡಿರುವುದನ್ನು ಕಂಡು ಸಚಿವರು ಸಂತೋಷ ವ್ಯಕ್ತಪಡಿಸಿದ್ದಾರೆ.
undefined
ಈ ವೇಳೆ ಗೋಶಾಲೆಯಲ್ಲಿ ಗೋವು ಪೂಜೆ ನೆರವೇರಿಸಿ ಪ್ರಭು ಚವ್ಹಾಣ ಗಮನ ಸೆಳೆದರು.. ವಿಜಯಪುರದ ಸಿದ್ದೇಶ್ವರ ಸಂಸ್ಥೆ ವತಿಯಿಂದ ನೋಡಿಕೊಳ್ಳಲಾಗುತ್ತಿರುವ ಗೋಶಾಲೆ ಅಂದಾಜು 70 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ.
undefined
ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ ಮಾಡಿ ಇಲ್ಲಿ ಆರೈಕೆ ಮಾಡಲಾಗುತ್ತಿದೆ ಎಂದು ಪ್ರಭು ಚವ್ಹಾಣ ಹೇಳಿದರು. ಸುಮಾರು 700 ಗೋವುಗಳನ್ನು ಇಲ್ಲಿ ಆರೈಕೆ ಮಾಡಲಾಗುತ್ತಿದೆ.
undefined
ಗೋವುಗಳ ಆರೈಕೆಗಾಗಿ ಇಲ್ಲಿಯೇ ಪಶುಚಿಕಿತ್ಸಾಲಯ ಹಾಗೂ ಪಶುಗಳ ಸೇವೆಗಾಗಿ ಆಂಬುಲೆನ್ಸ್ ಇರುವುದು ಗೋವುಗಳ ಬಗ್ಗೆ ಸಂಸ್ಥೆಗಿರುವ ಕಾಳಜಿಯನ್ನು ಎತ್ತಿತೋರಿಸುತ್ತದೆ ಎಂದು ಸಚಿವರು ಹೇಳಿದರು.
undefined
ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಸಂಸ್ಥೆಯ ನಿರ್ದೇಶಕರಾದ ರಾಮನಗೌಡ ಪಾಟೀಲ್, ಕಾರ್ಯದರ್ಶಿ ದೇಸಾಯಿ ಇಲಾಖೆಯ ಆಯುಕ್ತ ಬಸವರಾಜೇಂದ್ರ ಹಾಗೂ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
undefined
click me!