ಹೊಸಪೇಟೆ: ಸಾವ​ಯವ ಕೃಷಿ ಆರಂಭಿ​ಸಿದ ಮಾಜಿ ದೇವ​ದಾಸಿಯರು..!

First Published | Nov 16, 2020, 2:14 PM IST

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ನ.16): ಇಲ್ಲಿನ ಮಾಜಿ ದೇವದಾಸಿಯರು ಕೃಷಿ ಕಾರ್ಯ ಕೈಗೊಳ್ಳುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡು ಇತರರಿಗೂ ಮಾದರಿಯಾಗಿದ್ದಾರೆ. ತಾಲೂಕಿನ ನಾಗೇನಹಳ್ಳಿಯ ಮಾಜಿ ದೇವದಾಸಿಯರು ಕೃಷಿಯಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
 

ಹೊಸಪೇಟೆ ನಗರದ ಸಖಿ ಟ್ರಸ್ಟ್‌ ಮಾರ್ಗದರ್ಶನದಲ್ಲಿ 15 ಮಾಜಿ ದೇವದಾಸಿಯರು ಐದು ಎಕರೆ ಜಮೀನನ್ನು ಮೂರು ವರ್ಷದ ಮಟ್ಟಿಗೆ ಗುತ್ತಿಗೆ ಪಡೆದುಕೊಂಡು ಕೃಷಿ ಕಾರ್ಯ ಕೈಗೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಹಾಗೂ ಔಷಧ ಬಳಸದೇ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಈ ಮಹಿಳೆಯರು ಬತ್ತ, ಜೋಳ, ಮೆಕ್ಕೆಜೋಳ ಹಾಗೂ ತರಕಾರಿ ಬೆಳೆಯುತ್ತಿದ್ದಾರೆ.
undefined
ಕೃಷಿ ಜತೆಗೆ 8 ಎಮ್ಮೆ ಸಾಕಿದ್ದಾರೆ. ಒಂದು ಎಮ್ಮೆ ನಿತ್ಯ ನಾಲ್ಕು ಲೀಟರ್‌ ಹಾಲು ನೀಡುತ್ತಿದೆ. ಹಾಲನ್ನು ಡೈರಿಗೆ ಹಾಕುತ್ತಾರೆ. ಸ್ವಲ್ಪ ಪ್ರಮಾಣದ ಹಾಲನ್ನು ಈ ಮಹಿಳೆಯರು ತಮ್ಮ ಕುಟುಂಬಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕೃಷಿ ಹಾಗೂ ಹಾಲಿನ ಡೈರಿಯಿಂದ ಬರುವ ಆದಾಯಕ್ಕಾಗಿ ಬ್ಯಾಂಕೊಂದರಲ್ಲಿ ಗುಂಪು ಉಳಿತಾಯ ಖಾತೆ ತೆರೆದಿದ್ದಾರೆ. ಹಣ ನೇರವಾಗಿ ಈ ಖಾತೆಯಲ್ಲಿ ಜಮೆ ಆಗುತ್ತಿದೆ. ಈ ಮಹಿಳೆಯರು ಕುರಿ ಸಾಕಣೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಇದಕ್ಕಾಗಿ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಈ ಮೊದಲು ಬೇರೆಯವರ ಹೊಲದಲ್ಲಿ ಕೂಲಿ ಮಾಡುತ್ತಿದ್ದ ಈ ಮಹಿಳೆಯರೇ ಈಗ ರೈತ ಮಹಿಳೆಯರಾಗಿದ್ದಾರೆ.
undefined

Latest Videos


ಮಾಜಿ ದೇವದಾಸಿಯರನ್ನು ಗುರುತಿಸಿ ಅವರಿಗೆ ಸಹಾಯ ಮಾಡಲಾಗುತ್ತಿದೆ. ಅವರು ಸುಸ್ಥಿರ ಕೃಷಿಯೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ಮಾಡುತ್ತಿದ್ದೇವೆ ಎಂದು ಹೊಸಪೇಟೆಯ ಸಖಿ ಸಂಸ್ಥೆ ಮುಖ್ಯಸ್ಥೆ ಭಾಗ್ಯಲಕ್ಷ್ಮಿ ತಿಳಿಸಿದ್ದಾರೆ.
undefined
ಕೃಷಿಯಿಂದ ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಜತೆಗೆ ಎಮ್ಮೆ ಹಾಲನ್ನು ಡೈರಿಗೆ ಹಾಕುತ್ತಿದ್ದೇವೆ. ಕುರಿ ಸಾಕಣೆ ಮಾಡಲು ಮುಂದಾಗಿದ್ದೇವೆ. ಉತ್ತಮ ಫಸಲು ಬಂದರೆ ನಮ್ಮ ಬದುಕು ಬಂಗಾರವಾಗಲಿದೆ ಎಂದು ಮಾಜಿ ದೇವದಾಸಿಯರಾದ ಹುಲಿಗೆಮ್ಮ, ಸೊಮಕ್ಕ ಅವರು ತಿಳಿಸಿದ್ದಾರೆ.
undefined
ಸ್ವಾವಲಂಬಿ ಬದುಕು ಸಾಗಿ​ಸಲು ಕೃಷಿ ಜತೆಗೆ ಎಮ್ಮೆ ಸಾಕಣೆ ಮಾಡಿ ಇತರರಿಗೆ ಮಾದರಿಯಾದ ಮಾಜಿ ದೇವದಾಸಿಯರು
undefined
click me!