ಎಲೆಕ್ಟ್ರಿಕ್‌ ವಾಹನಗಳ ಹೆಚ್ಚು ಬಳಸಿ: ಸಾರಿಗೆ ಸಚಿವ ಲಕ್ಷ್ಮಣ್‌ ಸವದಿ

First Published Nov 19, 2020, 8:08 AM IST

ಬೆಂಗಳೂರು(ನ.19): ವಾಯು ಮಾಲಿನ್ಯ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರು ಪೆಟ್ರೋಲ್‌-ಡೀಸೆಲ್‌ ವಾಹನಗಳ ಬದಲಾಗಿ ವಿದ್ಯುತ್‌ ವಾಹನಗಳನ್ನು ಬಳಸುವಂತೆ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ್‌ ಸವದಿ ಸಲಹೆ ನೀಡಿದರು.

ವಾಯುಮಾಲಿನ್ಯ ತಡೆಗೆ ಜನಜಾಗೃತಿ ಮೂಡಿಸಲು ಬುಧವಾರ ಸಾರಿಗೆ ಇಲಾಖೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಹೊಗೆ ರಹಿತ ವಾಹನ ಸುಖೀ ಕುಟುಂಬದ ಜೀವನ’ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದ ಸಾರಿಗೆ ಸಚಿವ ಲಕ್ಷ್ಮಣ್‌ ಸವದಿ
undefined
ನಗರದ ಶೇ.42ರಷ್ಟು ಮಾಲಿನ್ಯ ವಾಹನಗಳು ಹೊರಸೂಸುವ ಹೊಗೆಯಿಂದಲೇ ಉಂಟಾಗುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಯನದಿಂದ ತಿಳಿದು ಬಂದಿದೆ.
undefined
ಮಾಲಿನ್ಯದಿಂದ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿರುವ ಬಗ್ಗೆ ವೈದ್ಯರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಜನರು ಪೆಟ್ರೋಲ್‌-ಡೀಸೆಲ್‌ ವಾಹನಗಳ ಬದಲು ವಿದ್ಯುತ್‌ ವಾಹನಗಳನ್ನು ಬಳಸುವಂತೆ ತಿಳಿಸಿದ ಸಚಿವರು
undefined
ಚಿತ್ರ ನಿರ್ದೇಶಕ ಜೋಗಿ ಪ್ರೇಮ್‌, ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌, ರಾಷ್ಟ್ರೀಯ ಬ್ಯಾಡ್ಮಿಂಟನ್‌ ಆಟಗಾರ್ತಿ ಅವಂತಿಕಾ, ಆರ್‌ಟಿಒ ಆಯುಕ್ತ ಶಿವಕುಮಾರ್‌ ಪಾಲ್ಗೊಂಡಿದ್ದರು.
undefined
click me!