ಮಾತೃ ಭಾಷೆಗೆ ಗೌರವ ನೀಡಿ: ಸಚಿವ ಕೆ.ಸುಧಾಕರ್‌

First Published Nov 6, 2020, 8:13 AM IST

ಬೆಂಗಳೂರು(ನ.06): ಕನ್ನಡ ರಾಜ್ಯೋತ್ಸವ ವರ್ಷ ಪೂರ್ತಿ ನಡೆಸಬೇಕಾದ ಮನೆ ಹಾಗೂ ಮನಸಿನ ಹಬ್ಬ. ಮಾತೃವಿನ ಮೇಲೆ ಎಷ್ಟು ಪ್ರೀತಿ-ಗೌರವ ಇರಿಸಿದ್ದೇವೆಯೋ ಅಷ್ಟೇ ಪ್ರೀತಿ-ಗೌರವವನ್ನು ಮಾತೃಭಾಷೆಯ ಮೇಲೆಯೂ ಇರಿಸಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ.ಸುಧಾಕರ್‌ ಹೇಳಿದ್ದಾರೆ.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕನ್ನಡಿಗ ವೈದ್ಯರು ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಆರೋಗ್ಯಕ್ಕೆ ಸಂಬಂಧಿಸಿದ ಸಾಹಿತ್ಯ ರಚನೆ ಮಾಡುತ್ತಿರುವುದು ಶ್ಲಾಘನೀಯ. ಆರೋಗ್ಯವೆಂದರೆ, ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ. ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯವೂ ಬಹಳ ಮುಖ್ಯ. ಈ ಆರೋಗ್ಯ ಪಡೆಯಲು ಪುಸ್ತಕಗಳ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
undefined
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಮಾತನಾಡಿ, ಕನ್ನಡದ ಇತಿಹಾಸ-ಪರಂಪರೆಯ ಬಗ್ಗೆ ಸ್ಮರಿಸುವುದರೊಂದಿಗೆ ನಾಳೆಯ ಕನ್ನಡದ ಬಗ್ಗೆಯೂ ಯೋಚಿಸಬೇಕು. ಅದಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ‘ನಿರಂತರ ಕನ್ನಡ ಕಲಿಕೆ, ನಿರಂತರ ಕನ್ನಡ ಬಳಕೆ’ ಎಂಬ ಆಶಯದಡಿ ಕೆಲಸ ಮಾಡುತ್ತಿದೆ. ವೈದ್ಯಕೀಯ, ತಾಂತ್ರಿಕ, ಕೃಷಿ ವಿಶ್ವವಿದ್ಯಾಲಯಗಳ ಪಠ್ಯದಲ್ಲಿ ಕಡ್ಡಾಯವಾಗಿ ಕನ್ನಡ ಪಠ್ಯವನ್ನೂ ಸೇರಿಸಬೇಕು ಎಂದು ಹೇಳಿದರು.
undefined

Latest Videos


12 ಮಂದಿ ಸಾಧಕರಿಗೆ ಸನ್ಮಾನ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವೈದ್ಯಕೀಯ ಕ್ಷೇತ್ರದ ಸಾಧಕರಾದ ಪ್ರಾಧ್ಯಾಪಕ ಡಾ. ಬಿ.ಡಿ.ಸತ್ಯನಾರಾಯಣ, ಡಾ. ಡಿ.ಕೆ.ಮಹಾಬಲರಾಜು, ಡಾ. ಆಶಾ ದೊಡ್ಡಮನೆ ಬೆನಕಪ್ಪ, ಡಾ. ವಿಜಯಲಕ್ಷ್ಮಿ ಐ.ಬಾಳೆಕುಂದ್ರಿ, ಡಾ. ಕರವೀರಪ್ರಭು ವಿರುಪಾಕ್ಷ ಕ್ಯಾಲಗಂಡ, ಡಾ. ಎಸ್‌.ಪಿ.ಯೋಗಣ್ಣ, ಡಾ. ಮುರುಳಿ ಮೋಹನ್‌ ಚಿಂತಾರು, ಡಾ. ಸಂತೋಷ ನೀಲಪ್ಪ ಬೆಳವಾಡಿ, ಡಾ. ನಿತಿನ್‌ ಮಹೋರ್ಕರ್‌, ಡಾ. ಕೆ.ಶಿವಪ್ರಸಾದ್‌, ಡಾ. ಬೃಂದಾ ಬೇಡೆಕರ್‌, ಪ್ರೊ.ಟಿ.ಎಚ್‌.ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ವಿವಿಯ ‘ಸಾಧನಾ ಗ್ರಂಥ’ವನ್ನು ಸಚಿವ ಡಾ. ಕೆ.ಸುಧಾಕರ್‌ ಬಿಡುಗಡೆಗೊಳಿಸಿದರು.
undefined
ಆರೋಗ್ಯ ವಿವಿ ಕುಲಪತಿ ಡಾ. ಸಚ್ಚಿದಾನಂದ, ಕುಲಸಚಿವ (ಮೌಲ್ಯ ಮಾಪನ) ಡಾ. ಎನ್‌.ರಾಮಕೃಷ್ಣ ರೆಡ್ಡಿ, ವಿವಿಯ ಹಣಕಾಸು ಅಧಿಕಾರಿ ಜೋರಾ ಜಬೀನ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.
undefined
click me!