ಬಳ್ಳಾರಿ: ಗಣೇಶ ವಿಸರ್ಜನೆಯಲ್ಲಿ ರೆಡ್ಡಿ-ರಾಮುಲು ಕುಚುಕು ಗೆಳೆಯರ ಸಂಭ್ರಮ

Suvarna News   | Asianet News
Published : Sep 12, 2021, 11:12 AM IST

ಬಳ್ಳಾರಿ(ಸೆ.12): ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮದಲ್ಲಿ ರೆಡ್ಡಿ-ರಾಮುಲು ಕುಚುಕು ಗೆಳೆಯರು ಸಂಭ್ರಮಪಟ್ಟಿದ್ದಾರೆ. ಹೌದು, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ನಿವಾಸದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ವಿಸರ್ಜನೆ ಕಾರ್ಯಕ್ರಮದಲ್ಲಿ ಸಚಿವ ಬಿ. ಶ್ರೀರಾಮುಲು ಅವರು ಭಾಗಿಯಾಗಿದ್ದರು. 

PREV
15
ಬಳ್ಳಾರಿ: ಗಣೇಶ ವಿಸರ್ಜನೆಯಲ್ಲಿ ರೆಡ್ಡಿ-ರಾಮುಲು ಕುಚುಕು ಗೆಳೆಯರ ಸಂಭ್ರಮ

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಜೊತೆ ಸಚಿವ ಶ್ರೀರಾಮುಲು ಅವರು ಫುಲ್ ಮಿಂಚಿದ್ದಾರೆ. ಬಹಳ ದಿನಗಳ ಬಳಿಕ ಬಳ್ಳಾರಿಗೆ ಜನಾರ್ದನ ರೆಡ್ಡಿ ಆಗಮಿಸಿದ್ದಾರೆ. 

25

ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ನಿಂದ ಅನುಮತಿ ಪಡೆದು ಜನಾರ್ದನ ರೆಡ್ಡಿ ಬಳ್ಳಾರಿಗೆ ಆಗಮಿಸಿದ್ದಾರೆ. ಹೀಗಾಗೆ ರೆಡ್ಡಿ ಕುಟುಂಬದಲ್ಲಿ ಈ ಬಾರಿಯ ಗಣೇಶೋತ್ಸವವನ್ನ ಭಾರೀ ವಿಜೃಂಭಣೆಯಿಂದ ಆಚರಿಸಲಾಗಿದೆ.

35

ಜನಾರ್ದನ ರೆಡ್ಡಿ ಅವರ ಮನೆಯಲ್ಲಿ ಪರಿಸರ ಸ್ನೇಹಿ ಗಣಪನ ಇಟ್ಟು ಪೂಜೆ ಮಾಡಲಾಗಿದೆ. ಈ ಸಂದರ್ಭದಲ್ಲಿ ರೆಡ್ಡಿ ನಿವಾಸಕ್ಕೆ ಆಗಮಿಸಿ ಗಣೇಶನ ಆಶೀರ್ವಾದವನ್ನ ಶ್ರೀರಾಮುಲು ಅವರು ಪಡೆದುಕೊಂಡಿದ್ದಾರೆ. 

45

ನಿನ್ನೆ ರಾತ್ರಿ ರೆಡ್ಡಿ ನಿವಾಸದಲ್ಲಿನ ಬಾವಿಯಲ್ಲಿ ಗಣೇಶನನ್ನ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಲಾಗಿದೆ. ವಿಶೇಷ ಅಂದ್ರೆ ರೆಡ್ಡಿ ಮನೆ ಗಣಪನ‌ ವಿಸರ್ಜನಾ ಕಾರ್ಯಕ್ರಮದಲ್ಲಿ ರೆಡ್ಡಿ ರಾಮುಲು ಒಂದೇ ತರ ಬಟ್ಟೆ ತೊಟ್ಟು ಫುಲ್ ಮಿಂಚಿದ್ದಾರೆ. 

55

ವೈಟ್ ಅಂಡ್ ವೈಟ್ ಶರ್ಟ್ ಹಾಗೂ ಪಂಚೆ ತೊಟ್ಟು ಗೆಳೆಯರಿಬ್ಬರು ಸಂಭ್ರಮದ ಹಬ್ಬ ಮಾಡಿದ್ದಾರೆ. ಅಲ್ಲದೇ ರೆಡ್ಡಿ- ರಾಮುಲು ಕೈ ಕೈ ಹಿಡಿದು ಫೋಟೋ ತೆಗೆಸಿಕೊಂಡು ಸಂತಸ ಪಟ್ಟಿದ್ದಾರೆ. ಸದ್ಯ ಇವರಿಬ್ಬರ ಅಭಿಮಾನಿಗಳು ಇವರ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿ‌ ಸಂಭ್ರಮಿಸುತ್ತಿದ್ದಾರೆ. 

click me!

Recommended Stories