Published : Aug 08, 2021, 12:40 PM ISTUpdated : Aug 09, 2021, 10:10 AM IST
ಹಾವೇರಿ(ಆ.08): ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಹೋದ ಕಡೆಯಲ್ಲೆಲ್ಲಾ ಮಾಸ್ಕ್ ಹಾಕಿಕೊಳ್ಳದೇ ಓಡಾಡುತ್ತಿದ್ದಾರೆ. ಜನಸಾಮಾನ್ಯರಿಗೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿ ಸಚಿವರೇ ರೂಲ್ಸ್ ಬ್ರೇಕ್ ಮಾಡುತ್ತಿದ್ದಾರೆ. ಜನರಿಗೆ ತಿಳಿ ಹೇಳಬೇಕಾದ ಸಚಿವರೇ ಹೀಗೆ ಮಾಸ್ಕ್ ಇಲ್ಲದೆ ಕೋವಿಡ್ ನಿಯಮಗಳನ್ನ ಗಾಳಿ ತೂರುತ್ತಿದ್ದಾರೆ. ಹೀಗಾಗಿ ಸಚಿವರ ವಿರುದ್ಧ ಪ್ರಜ್ಞಾವಂತ ನಾಗರಿಕರು ಕಿಡಿ ಕಾರಿದ್ದಾರೆ.