ಹನುಮ ಜನ್ಮಸ್ಥಳ ವಿವಾದ: ಇತಿಹಾಸ ತಜ್ಞರಿಂದ ಸಂಶೋಧನೆ ಅಗತ್ಯ, ಲಿಂಬಾವಳಿ

First Published | Apr 16, 2021, 3:21 PM IST

ಗಂಗಾವತಿ(ಏ.16): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ  ಹನುಮ ಜನ್ಮ ಸ್ಥಳದ ಬಗ್ಗೆ ಇತಿಹಾಸ ತಜ್ಞರು ಸಂಶೋಧನೆ ನಡೆಸಿದ ಮೇಲೆ ಸತ್ಯಾಸತ್ಯತೆ ತಿಳಿಯುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.  

ಇಂದು(ಶುಕ್ರವಾರ) ಗಂಗಾವತಿ ತಾಲೂಕಿನ ಪ್ರಸಿದ್ಧ ಸ್ಥಳವಾಗಿರುವ ಅಂಜನಾದ್ರಿ ಪರ್ವತದ ಕೆಳಗೆ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಅರವಿಂದ ಲಿಂಬಾವಳಿ
ಈಗಾಗಲೇ ಆಂಧ್ರಪ್ರದೇಶದ ತಿರುಪತಿಯ (ಟಿಟಿಡಿ) ತಿರುಮಲ ತಿರುಪತಿ ದೇವಸ್ಥಾನದವರು ಹನುಮ ಜನ್ಮಸ್ಥಳ ತಿರುಪತಿ ತಿರುಮಲ ಎಂದು ಹೇಳುತ್ತಿದ್ದರಿಂದ ಈಗ ಜನ್ಮ ಸ್ಥಳದ ವಿವಾದ ಎದ್ದಿದೆ. ಇದಕ್ಕೆ ಹಲವಾರು ವರ್ಷಗಳ ಇತಿಹಾಸ ಮತ್ತು ರಾಮಾಯಣದ ಕಾಲದ ಇತಿಹಾಸ ಇದೆ. ಯಾವುದೇ ರೀತಿಯಿಂದ ಜನ್ಮ ಸ್ಥಳದ ಬಗ್ಗೆ ಅಂತೆ ಕಂತೆ ಹೇಳುವಿದಲ್ಲ. ಇದಕ್ಕೆ ಇತಿಹಾಸ ತಜ್ಞರು ಮತ್ತು ವಿಧ್ವಾಂಸರಿಂದ ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದ ಲಿಂಬಾವಳಿ
Tap to resize

ಹಂಪಿ ಮತ್ತು ಆನೆಗೊಂದಿ ಪ್ರದೇಶ ರಾಮಾಯಣದ ಇತಿಹಾಸ ಹೊಂದಿರುವ ಪ್ರದೇಶವಾಗಿದೆ. ಈ ಪ್ರದೇಶದ ಅಂಜನಾದ್ರಿಯಲ್ಲಿ ಹನಮ ಜನಿಸಿದರೆಂಬ ಇತಿಹಾಸ ಇದೆ. ಅಲ್ಲದೇ ರಾಮ ಸೀತ ಮತ್ತು ಲಕ್ಷ್ಮಣ, ಸುಗ್ರೀವ ಇದ್ದು ಹೋಗಿರುವದರ ಬಗ್ಗೆ ಕುರುಹುಗಳಿವೆ. ಹೀಗಿರುವಾಗ ನಾವು ಯಾವುದೇ ರೀತಿಯಲ್ಲಿ ಜನ್ಮ ಸ್ಥಳದ ಬಗ್ಗೆ ಅಲ್ಲೆಗಳೆಯುವಂತಿಲ್ಲ. ಆದರೂ ಸಹ ಇತಿಹಾಸ ತಜ್ಞರು ಏನು ಹೇಳುತ್ತಾರೆ ಎನ್ನುವದರ ಮೇಲೆ ವಿವಾದಕ್ಕೆ ಅಂತ್ಯ ಹೇಳ ಬೇಕಾಗಿದೆ ಎಂದ ಸಚಿವರು
ಅಂಜನಾದ್ರಿ ದೇವಸ್ಥಾನ ಅರಣ್ಯ ಇಲಾಖೆಯ ಪ್ರದೇಶಕ್ಕೆ ಒಳಪಡುತ್ತಿರುವದರಿಂದ ನಿಯಮಗಳು ಅಡ್ಡಿಯಾಗುತ್ತಿದ್ದು, ಆದರೂ ಕೆಲ ನಿಯಮಗಳನ್ನು ಸಡಿಲುಗೊಳಿಸಿ ಅಂಜನಾದ್ರಿ ಪರ್ವತದ ಪ್ರಗತಿಗೆ ಸರ್ಕಾರ ಬದ್ಧವಾಗಿದೆ. ಈಗಾಗಲೇ ಮುಖ್ಯಮಂತ್ರಿಗಳು ಅಂಜನಾದ್ರಿ ಪರ್ವತದ ಅಭಿವೃದ್ಧಿಗೆ ಕೋಟ್ಯಾಂತರ ರುಪಾಯಿ ಅನುದಾನ ನೀಡಿದ್ದಾರೆ. ಇನ್ನು ಹೆಚ್ಚಿನ ರೀತಿಯಲ್ಲಿ ಅನುದಾನ ನೀಡುವುದರ ಮೂಲಕ ಅಭಿವೖದ್ದಿ ಪಡಿಸುತ್ತಾರೆ. ಅಂಜನಾದ್ರಿ ಪರ್ವತ ಜಗತ್ ಪ್ರಸಿದ್ಧವಾಗಿದೆ. ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಬರುವ ಈ ಪ್ರದೇಶಕ್ಕೆ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತದೆ.
ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ತುಂಗಭದ್ರ ಅಚ್ಚು ಕಟ್ಟು ಪ್ರಾಧಿಕಾರದ ಅದ್ಯಕ್ಷ ತಿಪ್ಪೇರುದ್ರಸ್ವಾಮಿ ಉಪಸ್ಥಿತರಿದ್ದರು.

Latest Videos

click me!