ಕೊರೋನಾ ಗೆದ್ದ ಸಚಿವ ಆನಂದ ಸಿಂಗ್‌: ಹಂಪಿ ವಿರೂಪಾಕ್ಷೇಶ್ವರಸ್ವಾಮಿ ದರ್ಶನ

First Published | Aug 14, 2020, 11:45 AM IST

ಹೊಸಪೇಟೆ(ಆ.14):  ಕೊರೋನಾದಿಂದ ಗುಣಮುಖರಾದ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಅವರು ಬುಧವಾರ ವಿಶ್ವವಿಖ್ಯಾತ ಹಂಪಿಗೆ ತೆರಳಿ ಶ್ರೀವಿರೂಪಾಕ್ಷೇಶ್ವರ ಸ್ವಾಮಿ ದರ್ಶನವನ್ನ ಪಡೆದುಕೊಂಡಿದ್ದಾರೆ. 
 

ಶ್ರೀವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಪಂಪಾದೇವಿ, ತಾಯಿ ಭುವನೇಶ್ವರಿ ತಾಯಿ ದರ್ಶನ ಪಡೆದುಕೊಂಡು ವಿಶೇಷ ಪೂಜೆ ಸಲ್ಲಿಸಿದ ಆನಂದ ಸಿಂಗ್‌
ಪುತ್ರ ಸಿದಾರ್ಥಸಿಂಗ್‌, ಪುತ್ರಿ ವೈಷ್ಣವಿ ಸಿಂಗ್‌ ಜೊತೆಯಲ್ಲಿ ಹಂಪಿಗೆ ಆಗಮಿಸಿದ ಸಚಿವರು
Tap to resize

ವಿಶೇಷ ಪೂಜೆ ಸಲ್ಲಿಸಿ, ಸಚಿವರಿಗೆ ತೀರ್ಥ ಪ್ರಸಾದ ನೀಡಿದ ದೇವಸ್ಥಾನ ಆರ್ಚಕರು
ಸಚಿವ ಆನಂದ್‌ ಸಿಂಗ್‌ ಶ್ರೀವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ದೇವಸ್ಥಾದ ಪಟ್ಟದ ಆನೆ ಲಕ್ಷಿತ್ರ್ಮೕಯಿಂದ ಆಶೀರ್ವಾದ ಪಡೆದುಕೊಂಡರು
ದೇವಸ್ಥಾನದ ಆವರಣದಲ್ಲಿರುವ ಕೋತಿಗಳಿಗೆ ಸಚಿವ ಆನಂದ್‌ ಸಿಂಗ್‌ ಹಣ್ಣು ನೀಡಿ ಪ್ರಾಣಿ ಪ್ರೀತಿ ತೋರಿದರು
ಹಂಪಿ ವಿದ್ಯಾರಣ್ಯ ಮಠಕ್ಕೆ ಭೇಟಿ ನೀಡಿ ಶ್ರೀವಿದ್ಯಾರಣ್ಯ ಭಾರತಿ ಶ್ರೀಗಳ ಆಶೀರ್ವಾದ ಪಡೆದುಕೊಂಡ ನಂತರ ಸಚಿವ ಸಿಂಗ್‌
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಆರ್ಚಕರಾದ ಪಿ. ಶ್ರೀನಾಥಶರ್ಮಾ, ಜೆ.ಎಸ್‌. ಶ್ರೀನಾಥ ಶರ್ಮಾ ಸೇರಿದಂತೆ ದೇವಸ್ಥಾನದ ಆಡಳಿತ ಅ​ಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕೊರೊನಾ ಸೋಂಕು ದೃಢವಾಗುತ್ತಿದಂತೆ ಸಚಿವ ಆನಂದ ಸಿಂಗ್‌, ಕಳೆದ ಜು. 25ರಿಂದ ಆ. 7ರವರೆಗೆ ತಮ್ಮ ನಿವಾಸದಲ್ಲಿ ಹೋಂ ಕ್ವಾರಂಟೈನ್‌ ಇದ್ದುಕೊಂಡೆ, ಚಿಕಿತ್ಸೆ ಪಡೆದು, ಇದೀಗ ಗುಣಮುಖರಾಗಿ, ಪರಿವಾರ ಸಮೇತ ಹಂಪಿಯ ಶ್ರೀವಿರೂಪಾಕ್ಷೇಶ್ವರಸ್ವಾಮಿ ದರ್ಶನ ಪಡೆದುಕೊಂಡರು.

Latest Videos

click me!