ಮುಂದಿನ ವರ್ಷ ಇತಿಹಾಸ ನೆನಪಿಟ್ಟುಕೊಳ್ಳುವಂತೆ ಹಂಪಿ ಉತ್ಸವ: ಆನಂದ ಸಿಂಗ್‌

Kannadaprabha News   | Asianet News
Published : Nov 14, 2020, 03:01 PM IST

ಕೆ.ಎಂ. ಮಂಜುನಾಥ್‌ ಹಂಪಿ(ನ.14): ಮುಂದಿನ ವರ್ಷ ಇತಿಹಾಸವೇ ನೆನಪಿಟ್ಟುಕೊಳ್ಳುವಂತೆ ಹಂಪಿ ಉತ್ಸವ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಭರವಸೆ ನೀಡಿದ್ದಾರೆ.   

PREV
111
ಮುಂದಿನ ವರ್ಷ ಇತಿಹಾಸ ನೆನಪಿಟ್ಟುಕೊಳ್ಳುವಂತೆ ಹಂಪಿ ಉತ್ಸವ: ಆನಂದ ಸಿಂಗ್‌

ಹಂಪಿಯ ಉದ್ದಾನ ವೀರಭದ್ರೇಶ್ವರ ದೇವಸ್ಥಾನ ಬಳಿ ಶುಕ್ರವಾರ ಸಂಜೆ ಒಂದು ದಿನದ ಸಾಂಕೇತಿಕ ಹಂಪಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೊರೋನಾ ಹಿನ್ನೆಲೆಯಲ್ಲಿ ಹಂಪಿ ಉತ್ಸವ ಸರಳವಾಗಿ ಒಂದು ದಿನಕ್ಕೆ ಸೀಮಿತಗೊಳಿಸಿ ಉತ್ಸವ ನಡೆಸಲಾಗುತ್ತಿದೆ. ಇದರಿಂದ ಕಲಾವಿದರು ಸೇರಿದಂತೆ ಉತ್ಸವ ಪ್ರಿಯರಿಗೆ ತೀವ್ರ ಬೇಸರವಾಗಿದೆ. ಅನೇಕ ಕಾರಣಗಳಿಂದ ಆಗಾಗ್ಗೆ ಉತ್ಸವ ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ. ಐದು ವರ್ಷಗಳ ಉತ್ಸವವನ್ನು ಒಂದೇ ಬಾರಿ ಕಣ್ತುಂಬಿಕೊಳ್ಳುವಂತೆ ಮಾಡುತ್ತೇವೆ ಎಂದು ತಿಳಿಸಿದ ಆನಂದ ಸಿಂಗ್‌ 

211

ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಜಿಲ್ಲಾಡಳಿತ ಅತ್ಯುತ್ತಮವಾಗಿ ಕೆಲಸ ಮಾಡುವ ಮೂಲಕ ಕೊರೋನಾ ನಿಯಂತ್ರಣ ಮಾಡಿದೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯಲ್ಲೂ ತೀರಾ ಇಳಿಕೆ ಕಂಡಿದೆ ಎಂದು ಹೇಳಿದ ಸಚಿವರು, ಜಿಲ್ಲೆಯ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

311

ಸಿರುಗುಪ್ಪ ಶಾಸಕ ಎಂ.ಎಸ್‌. ಸೋಮಲಿಂಗಪ್ಪ ಮಾತನಾಡಿ, ಉತ್ಸವ ಸರಳವಾಗಿ ಆಚರಿಸುವುದು ಅನಿವಾರ್ಯ ಆಗಿದೆ. ಜಿಲ್ಲೆಯ ಎಲ್ಲರ ಸಹಕಾರ ಪಡೆದು ಅದ್ಧೂರಿಯಾಗಿ ಆಚರಣೆ ಮಾಡಲು ಜಿಲ್ಲಾ ಸಚಿವರು ಉತ್ಸುಕರಾಗಿದ್ದಾರೆ ಎಂದರು.

411

ಇದೇ ವೇಳೆ ಜಿಲ್ಲೆಯ ಕಚೇರಿಗಳಲ್ಲಿ ಬಡವರ ಕೆಲಸಗಳು ಆಗುತ್ತಿಲ್ಲ. ವಿನಾಕಾರಣ ತಿಂಗಳುಗಟ್ಟಲೆ ತಿರುಗಿಸಲಾಗುತ್ತಿದ್ದು, ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದು ಮನವಿ ಮಾಡಿದರು.

511

ಸಂಸದ ವೈ. ದೇವೇಂದ್ರಪ್ಪ ಮಾತನಾಡಿದರು. ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ಜಿಪಂ ಸಿಇಒ ಕೆ.ಆರ್‌. ನಂದಿನಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅದಾವತ್‌, ಕನ್ನಡ ಮತ್ತು ಸಂಸ್ಕೃತಿ ಇಲಖೆಯ ನಿರ್ದೇಶಕ ಎಸ್‌. ರಂಗಪ್ಪ, ಅಪರ ಜಿಲ್ಲಾಧಿಕಾರಿ ಮಂಜುನಾಥ್‌, ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸೈಯದ್‌ ಅಮಾನುಲ್ಲಾ, ಹೊಸಪೇಟೆ ತಾಲೂಕು ಪಂಚಾಯತಿ ಅಧ್ಯಕ್ಷೆ ನಾಗವೇಣಿ, ಸದಸ್ಯ ಪಾಲಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದೊಡ್ಡ ಬಸವ ಗವಾಯಿ ಡಿ. ಕಗ್ಗಲ್‌ ಹಾಗೂ ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್‌ ಅವರು ಕಾರ್ಯಕ್ರಮ ನಿರ್ವಹಿಸಿದರು.

611

ಹಂಪಿ ಉತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ಭುವನೇಶ್ವರಿ ಮೆರವಣಿಗೆ ಗಮನ ಸೆಳೆಯಿತು. ಉದ್ದಾನ ವೀರಭದ್ರ ದೇವಸ್ಥಾನದಿಂದ ಶುರುವಾದ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. 

711

ಮೆರವಣಿಗೆ ಕಣ್ತುಂಬಿಕೊಳ್ಳಲು ಜನರಿರಲಿಲ್ಲ. ಕೃಷ್ಣ ದೇವಸ್ಥಾನ ಮೂಲಕ ಸಾಗಿದ ಮೆರವಣಿಗೆ ವಿರುಪಾಕ್ಷೇಶ್ವರ ದೇವಸ್ಥಾನ ಸೇರಿತು.

811

ಬಳ್ಳಾರಿ ತಾಲೂಕಿನ ಮೋಹನ್‌ ಮತ್ತು ತಂಡದವರ ತಾಷರಂಡೋಲ್‌ ಕುರುಗೋಡು ಚನ್ನಸ್ವಾಮಿ ಮತ್ತು ತಂಡದಿಂದ ಹಗಲುವೇಷ, ಹಗರಿಬೊಮ್ಮನಹಳ್ಳಿಯ ಏಣಿಗಿ ರಾಮಪ್ಪ ಮತ್ತು ತಂಡದವರ ಹಲಗೆ ವಾದನ, ಸಂಡೂರು ಚಂದ್ರಶೇಖರ್‌ ಮತ್ತು ತಂಡದವರಿಂದ ಡೊಳ್ಳುಕುಣಿತ, ಬಳ್ಳಾರಿಯ ಎಂ. ನಾಗರಾಜಸ್ವಾಮಿ ಮತ್ತು ತಂಡದವರಿಂದ ವೀರಗಾಸೆ ಹಾಗೂ ದೊಡ್ಡಬಸಪ್ಪ ಮತ್ತು ತಂಡದವರಿಂದ ನಾಡಗೀತೆ, ಹಳೇದರೊಜಿ ಅಶ್ವರಾಮಣ್ಣ ಮತ್ತು ತಂಡದವರಿಂದ ಹಗಲುವೇಷ

911

ಸಿರಗುಪ್ಪ ದೊಡ್ಡರಾಮಣ್ಣ ಮತ್ತು ತಂಡದವರಿಂದ ಸಿಂದೋಳ್‌ ಕುಣಿತ, ಹೊಸಪೇಟೆಯ ಶರಣಪ್ಪ ಮತ್ತು ತಂಡ ಕಹಳೆವಾದನ, ನಾರಾಯಣಪ್ಪ ಮತ್ತು ತಂಡದವರಿಂದ ನಾದಸ್ವರ, ಆಂಜನೇಯ ಮತ್ತು ತಂಡದವರಿಂದ ಡೊಳ್ಳುಕುಣಿತ, ಕಂಪ್ಲಿಯ ಕೆ. ಅಂಜಲಿ ಮತ್ತು ತಂಡದವರಿಂದ ಹಕ್ಕಿ ಪಿಕ್ಕಿ ಬುಡಕಟ್ಟು ನೃತ್ಯ

1011

ಹೊಸಪೇಟೆಯ ಏಸುಪ್‌ ಮತ್ತು ತಂಡದವರಿಂದ ಮರಗಾಲುಕುಣಿತ, ಅಮೃತಾ ಮತ್ತು ತಂಡದವರಿಂದ ಶಾಸ್ತ್ರಿಯ ನೃತ್ಯ, ಹಡಗಲಿ ಮಲ್ಲಯ್ಯ ಮತ್ತು ತಂಡದವರ ಗೊರವರ ಕುಣಿತ, ಕೊಟ್ಟೂರು ವೀರಭದ್ರೇಶ್ವರ ವಾದ್ಯವೃಂದ ನಂದಿಧ್ವಜ ಕುಣಿತ

1111

ಹರಪನಹಳ್ಳಿ ವಿಶ್ವಕಲಾ ರೈತ ಭಜನಾ ಸಂಘದಿಂದ ಕೀಲುಕುದುರೆ, ಕೂಡ್ಲಿಗಿ ದುರಗಮ್ಮ ಮತ್ತು ತಂಡದಿಂದ ಮಹಿಳಾ ಡೊಳ್ಳುಕುಣಿತ ಮೆರವಣಿಗೆಯಲ್ಲಿದ್ದವು.

click me!

Recommended Stories