ಮಲ್ಪೆ ಮೀನುಗಾರರ ಬಲೆಗೆ ಬಿದ್ದ 750 ಕೆ.ಜಿ ತೂಕದ ಮೀನು, ಇದರ ತೂಕ ಅಬ್ಬಬ್ಬಾ...!

First Published Oct 21, 2020, 7:39 PM IST

ಉಡುಪಿ ಜಿಲ್ಲೆ ಮಲ್ಪೆಯ ಸರ್ವ ಋತು ಬಂದರಿನಲ್ಲಿ ಆಗಾಗ ಅಪರೂಪದ ಮೀನುಗಳು ಬಲೆಗೆ ಬೀಳುವುದುಂಟು. ಕೆಲವೊಮ್ಮೆ ಭಾರೀ ಗಾತ್ರದ ಮೀನುಗಳು ಬಲೆಗೆ ಬಿದ್ದರೆ, ಇನ್ನು ಕೆಲವೊಮ್ಮೆ ಅಪರೂಪದ, ವಿಚಿತ್ರ ಮೀನುಗಳು ಸಿಕ್ಕಿ ಗಮನ ಸೆಳೆಯುತ್ತವೆ.  ಅದರಂತೆ ದೈತ್ಯಾಕಾರದ ಎರಡು ಮೀನುಗಳು ಸಿಕ್ಕಿವೆ. ಇವುಗಳ ತೂಕ ಒಂದರದ್ದು 700 ಕೆಜಿ ಇನ್ನೊಂದರದ್ದು 200 ಕೆಜಿ. ಅಚ್ಚರಿ ಎನಿಸಿದರೂ ಸತ್ಯ, ಅದರ ಚಿತ್ರಗಳು ಇಲ್ಲಿವೆ.

ಮಲ್ಪೆ ಮೀನುಗಾರರಿಗೆ ಬುಧವಾರ ಸಿಕ್ಕ ಮೀನು ಮಾತ್ರ ಬಲು ಅಪರೂಪವಾಗಿದ್ದು ಮಾತ್ರವಲ್ಲ, ಗಾತ್ರದಲ್ಲೂ ದಾಖಲೆ ನಿರ್ಮಿಸಿದೆ.
undefined
ಈ ಮೀನನ್ನು ಕರಾವಳಿಗರು ತೊರಕೆ ಮೀನು ಎನ್ನುತ್ತಾರೆ. ಬಹಳ ರುಚಿಯಾಗಿರುತ್ತದೆಯಂತೆ
undefined
ದೈತ್ಯಾಕಾರದ ಎರಡು ಮೀನುಗಳಲ್ಲಿ ಒಂದರದ್ದ 750 ಕೆ.ಜಿ ಇದ್ರೆ, ಮತ್ತೊಂದು 250 ಕೆ,ಜಿ ಇದೆ.
undefined
ಮಲ್ಪೆಯ ನಾಗಸಿದ್ದಿ ಎಂಬ ಹೆಸರಿನ ಬೋಟ್ ನವರಿಗೆ ಈ ಮೀನು ದೊರೆತಿದ್ದು, ಇದರ ತೂಕ ಬರೋಬ್ಬರಿ 750 ಕೆ.ಜಿ ಇತ್ತು.
undefined
ಮಲ್ಪೆಯ ನಾಗಸಿದ್ದಿ ಎಂಬ ಹೆಸರಿನ ಬೋಟ್ ನವರಿಗೆ ಈ ಮೀನು ದೊರೆತಿದ್ದು, ಇದರ ತೂಕ ಬರೋಬ್ಬರಿ 750 ಕೆ.ಜಿ ಇತ್ತು. ಹೀಗಾಗಿ ಕ್ರೇನ್ ಮೂಲಕ ಮೀನನ್ನು ಮೇಲೆತ್ತಲಾಯಿತು. ಇತ್ತೀಚಿನ ವರ್ಷಗಳಲ್ಲಿ ಬಲೆಗೆ ಬಿದ್ದ ಅತಿ ದೊಡ್ಡ ತೊರಕೆ ಮೀನು ಇದಾಗಿದೆ.
undefined
ಇದನ್ನು ನೋಡಲು ಮಲ್ಪೆ ಬಂದರಿಗೆ ಮೀನು ಪ್ರಿಯರು ಭಾರೀ ಸಂಖ್ಯೆಯಲ್ಲಿ ಲಗ್ಗೆ ಹಾಕಿದರು. ಈ ಹಿಂದೆಯೂ ಮಲ್ಪೆಯಲ್ಲಿ ಮೀನುಗಾರರ ಬಲೆಗೆ ಬಲು ಅಪರೂಪದ ಉದ್ದನೆಯ ಮೀನು ಸಿಕ್ಕಿತ್ತು.
undefined
click me!